ಅಕ್ಕಮಹಾದೇವಿ ವಚನಗಳ ಅನುಸರಣೆಯಿಂದ ಉತ್ತಮ ಜೀವನ ಸಾಧ್ಯ
ಮೈಸೂರು

ಅಕ್ಕಮಹಾದೇವಿ ವಚನಗಳ ಅನುಸರಣೆಯಿಂದ ಉತ್ತಮ ಜೀವನ ಸಾಧ್ಯ

September 27, 2021

ಮೈಸೂರು, ಸೆ.26(ಆರ್‍ಕೆಬಿ)- ಎಂಟು ನೂರು ವರ್ಷಗಳ ಹಿಂದೆ ಸಮಾಜದಲ್ಲಿ ಸಮಾನತೆ ತರಲು ಹೋರಾಡಿದ ಅಕ್ಕ ಮಹಾದೇವಿಯ ವಚನಗಳನ್ನು ಅನುಸರಿಸು ವುದರಿಂದ ಖಂಡಿತವಾಗಿಯೂ ಉತ್ತಮ ಜೀವನ ನಡೆಸಲು ನೆರವಾಗುತ್ತದೆ ಎಂದು ಮುಜರಾಯಿ ಮತ್ತು ವಕ್ಫ್ ಖಾತೆ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು.

ಮೈಸೂರಿನ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂ ಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ಘಟಕ, ಕದಳಿ ಮಹಿಳಾ ವೇದಿಕೆ ಹಾಗೂ ಮಹಿಳಾ ಬಳಗ ಗಳ ಸಹಯೋಗದಲ್ಲಿ ಭಾನುವಾರ ಏರ್ಪ ಡಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ, ಕೃತಿಗಳನ್ನು ಬಿಡು ಗಡೆ ಮಾಡಿ ಅವರು ಮಾತನಾಡಿದರು. ಅಕ್ಕಮಹಾದೇವಿ ಕನ್ನಡ ಸಾಹಿತ್ಯದಲ್ಲಿ ಸ್ಫೂರ್ತಿದಾಯಕ ಮಹಿಳಾ ಸಂತರಾಗಿದ್ದು, ನೂರಾರು ವಚನ ಪದ್ಯಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಗಮನಾರ್ಹ ಕೊಡುಗೆ ಎಂದರು.

ನಾವು ಮಹಿಳೆಯರನ್ನು ತಾಯಿ, ಸಹೋ ದರಿ, ಗೋಮಾತೆ, ಮಾತೃಭೂಮಿ ಎಂದೆಲ್ಲಾ ಸಮೀಕರಿಸಿದರೂ, 21ನೇ ಶತಮಾನ ದಲ್ಲಿಯೂ ಸಹ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುವಂತಾಗಿರುವ ಬಗ್ಗೆ ವಿಷಾದಿಸಿದರು. 12ನೇ ಶತಮಾನದಲ್ಲಿ ವಾಸಿಸುತ್ತಿದ್ದ ಅಕ್ಕಮಹಾದೇವಿ ಕನ್ನಡ ಸಾಹಿತ್ಯದ ಆರಂಭಿಕ ಮಹಿಳಾ ಕವಿಗಳಲ್ಲಿ ಒಬ್ಬರಾಗಿದ್ದರು. ವಿಶೇಷಚೇತನ ಮಗು ವಿಗೆ ತಾವು ಜನ್ಮ ನೀಡಿದ ಬಗ್ಗೆ ಪ್ರಸ್ತಾಪಿ ಸಿದ ಸಚಿವರು, ನನಗೆ ಗದಗದ ಡಂಬಳ ಎಡೆಯೂರು ಜಗದ್ಗುರು ಸಂಸ್ಥಾನ ಮಠದ ಶ್ರೀ ತೋಂಟದ ಸಿದ್ದರಾಮ ಸ್ವಾಮಿಗಳ ಆಶೀರ್ವಾದ ಮತ್ತು ಧೈರ್ಯದಿಂದ ಅದನ್ನು ತಾವು ಸವಾಲಾಗಿ ಸ್ವೀಕರಿಸಿದ್ದಾಗಿ ತಿಳಿಸಿದರು. ನೋವನ್ನು ಮರೆಯಲು ಕದಳಿ ಮಹಿಳಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷೆಯಾಗಿ ಹೊಣೆ ಹೊತ್ತು, ಅಕ್ಕಮಹಾದೇವಿಯ ವಚನಗಳನ್ನು ಅನು ಸರಿಸಿಕೊಂಡು ಬಂದಿದ್ದೇನೆ. ಅದರಿಂ ದಾಗಿ ನನ್ನ ಜೀವನದಲ್ಲಿ ಧೈರ್ಯ, ಪ್ರೋತ್ಸಾಹ ದೊರೆಯಿತು ಎಂದರು.

ಇದೇ ವೇಳೆ ಸಚಿವರು ಮುಕ್ತ ಬಿ.ಕಾಗಲಿ ಸಂಪಾದಿಸಿದ ‘ಶರಣ ಸಂಸ್ಕೃತಿ’ ಮತ್ತು ಎಂ.ಎ.ನೀಲಾಂಬಿಕಾ ಬರೆದ ‘ಬೆಳಗು ಬಾ’ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮೇಯರ್ ಸುನಂದಾ ಪಾಲನೇತ್ರ ಅವರನ್ನು ಸನ್ಮಾ ನಿಸಲಾಯಿತು. ಲೇಖಕಿ ಡಾ.ವೀಣಾ ಬನ್ನಂಜೆ, ಅಕ್ಕಮಹಾದೇವಿಯವರ ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗದಗಿನ ಎಡೆ ಯೂರು ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಗೋ.ರು. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪೆÇ್ರ.ಮಲೆಯೂರು ಗುರುಸ್ವಾಮಿ, ಶರಣ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಮೈಸೂರು ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಮೈಸೂರು ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಇನ್ನಿ ತರರು ಉಪಸ್ಥಿತರಿದ್ದರು.

Translate »