ಕೊರೊನಾಗೆ ಕಡಿವಾಣ ಹಾಕಲು ಭಾರತೀಯ ಜೈನ್ ಸಂಘಟನೆಯಿಂದ ‘ಕೋವಿಡ್ ಮುಕ್ತ ಗ್ರಾಮ’ ಕಾರ್ಯಕ್ರಮ
ಮೈಸೂರು

ಕೊರೊನಾಗೆ ಕಡಿವಾಣ ಹಾಕಲು ಭಾರತೀಯ ಜೈನ್ ಸಂಘಟನೆಯಿಂದ ‘ಕೋವಿಡ್ ಮುಕ್ತ ಗ್ರಾಮ’ ಕಾರ್ಯಕ್ರಮ

September 27, 2021

ಮೈಸೂರು, ಸೆ.26(ಎಂಕೆ)- ಕೊರೊನಾ 3ನೇ ಅಲೆ ಹರಡದಂತೆ ಕಡಿವಾಣ ಹಾಕಲು ಭಾರತೀಯ ಜೈನ ಸಂಘಟನೆಯು ‘ಕೋವಿಡ್ ಮುಕ್ತ ಗ್ರಾಮ’ ಕಾರ್ಯ ಕ್ರಮ ಹಮ್ಮಿಕೊಂಡಿದೆ ಎಂದು ಸಂಘಟನೆ ಸಂಸ್ಥಾಪಕ ಶಾಂತಿಲಾಲ್ ಮುಥಾ ತಿಳಿಸಿದರು.

ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಅಮೃತ ಮಹೋ ತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕೋವಿಡ್ ಮುಕ್ತ ಗ್ರಾಮ’ ಕಾರ್ಯಕ್ರಮದ ಮಾರ್ಗದರ್ಶಿ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ 30 ಸಾವಿರ ಗ್ರಾಮಗಳಲ್ಲಿ ಸರ್ಕಾರದ ಸಹಕಾರದೊಂ ದಿಗೆ ಸಂಘಟನೆ ಕಾರ್ಯನಿರ್ವಹಿಸಲಿದೆ. ಕರ್ನಾಟಕ ದಿಂದ ಈ ಕಾರ್ಯಕ್ರಮ ಆರಂಭಗೊಂಡು ದೇಶದೆಲ್ಲೆಡೆ ವ್ಯಾಪಿಸಲಿದೆ ಎಂದು ಹೇಳಿದರು.
‘ಕೋವಿಡ್ ಮುಕ್ತ ಗ್ರಾಮ’ ಕಾರ್ಯಕ್ರಮಕ್ಕೆ ಸತ್ವ ಫೌಂಡೇಶನ್, ಐಐಎಂ ಬೆಂಗಳೂರು, ಜೈನ್ ಯುನಿ ವರ್ಸಿಟಿ ಬೆಂಗಳೂರು, ಭರತೇಶ್ ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಕೈಜೊಡಿಸಿವೆ. ಮುಖ್ಯವಾಗಿ ಕೊರೊನಾ ಕೊನೆಯಾಗಬೇಕು. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತಾಗಬೇಕು. ಭಾರತೀಯ ಜೂನ ಸಂಘಟನೆಯೂ ರೈತರ ಕಲ್ಯಾಣ ಕ್ಕಾಗಿ ಯಾದಗಿರಿ ಮತ್ತು ರಾಯಚೂರಿನಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಕೆರೆಗಳಲ್ಲಿ ಹುಳು ಮಣ್ಣನ್ನು ರೈತರ ಜಮೀನಿಗೆ ಹಾಕಿಸುವ ಕೆಲಸ ಮಾಡುತ್ತಿದೆ ಎಂದರು.

ಮಹಾರಾಷ್ಟ್ರ ಸರ್ಕಾರದ ಜೊತೆಗೂ ಸಂಘಟನೆಯೂ ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಸಕ್ರಿಯ ವಾಗಿ ಕೆಲಸ ಮಾಡುತ್ತಿದೆ. ಪ್ರಕೃತಿ ವಿಕೋಪಗಳಿಂದಾದ ಅನುಹುತಗಳಲ್ಲಿ ತಂದೆ-ತಾಯಿಯಂದಿರನ್ನು ಕಳೆದು ಕೊಂಡ ಅನಾಥ ಮಕ್ಕಳ ಪಾಲನೆಯನ್ನು ಮಾಡುತ್ತಿ ದ್ದೇವೆ. ಕೊರೊನಾ ಮುಕ್ತ ಗ್ರಾಮಗಳ ನಿರ್ಮಾಣ ಸಂಘಟನೆ ಉದ್ದೇಶವಾಗಿದೆ ಎಂದರು.

ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಲುಂಕರ್ ಮಾತನಾಡಿ, ಕರ್ನಾಟಕದಿಂದ ದೇಶದೆಲ್ಲೆಡೆ ಜೈನ ಸಮುದಾಯದ ಸೇವಾ ಸಂದೇಶವನ್ನು ನೀಡಲಾಗುತ್ತಿದೆ. ‘ಕೋವಿಡ್ ಮುಕ್ತ ಗ್ರಾಮ’ ಕಾರ್ಯಕ್ರಮದಲ್ಲಿ ಗ್ರಾಮ ಪಡೆಗಳು, ಕೋವಿಡ್ ಮುಕ್ತ ಗ್ರಾಮ ಸ್ಪರ್ಧೆಗಳನ್ನು ಆಯೋಜಿಸ ಲಾಗುವುದು. ಭಾರತೀಯ ಜೈನ್ ಸಂಘಟನೆ ವ್ಯಾಪ್ತಿಯಲ್ಲಿ ರುವ ಹಲವು ಸಂಸ್ಥೆಗಳು ತಳಮಟ್ಟದಲ್ಲಿ ಜನರ ಸೇವೆ ಮಾಡುತ್ತಿವೆ. ಸಾಧಾರಣ ವ್ಯಕ್ತಿಯೂ ಸಮಾಜದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಂಘಟನೆಯೂ ಕಾರ್ಯರೂಪಿಸುತ್ತಿದೆ ಎಂದು ತಿಳಿಸಿದರು.

ಭಾರತೀಯ ಜೈನ ಸಂಘಟನೆಯ ರಾಷ್ಟ್ರೀಯ ಕಾರ್ಯ ದರ್ಶಿ ಗೌತಮ್ ಬಾಫ್ನಾ, ಕೃಷ್ಣ ಶ್ರೀಧರ್‍ಮೂರ್ತಿ, ಪ್ರಕಾಶ್ ಗುಲೇಚಾ, ಪ್ರಕಾಶ್ ಶ್ರೀಮಾಲ್, ಓಂಪ್ರಕಾಶ್ ಲುನಾ ವತ್, ಅಶೋಕ್ ಸಾಲೇಚಾ, ಕಾಂತಿಲಾಲ್ ಗುಲೇಚಾ, ಸುಖ್‍ರಾಜ್ ವಿನಾಯಕಿಯಾ, ರಾಜನ್ ಬಾಗ್ಮಾರ್, ನಿಶಾ ಜೈನ್, ಅಭಿಷೇಕ್ ಸಿಂಗವಿ ಇನ್ನಿತರರು ಉಪಸ್ಥಿತರಿದ್ದರು.

Translate »