ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ  ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ
ಮೈಸೂರು

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ

September 27, 2021

ಮೈಸೂರು,ಸೆ.26-ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋ ಗದ ಅಧ್ಯಕ್ಷ ಎಂ.ಶಿವಣ್ಣ ಅವರು ಸೆ.27, 28, 29ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಸೆ.27ರಂದು ಮಧ್ಯಾಹ್ನ 1.30ಕ್ಕೆ ಎಪಿ ಎಂಸಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಸುವರು.

ಮಧ್ಯಾಹ್ನ 3:30ಕ್ಕೆ ಬಿ.ಹೆಚ್.ಎಲ್‍ನಲ್ಲಿ ಸ್ವಚ್ಛತಾ ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಪರಿಶೀಲನಾ ಸಭೆ ನಡೆಸುವರು.
ಸೆ.28ರಂದು ಬೆಳಗ್ಗೆ 9.30ಕ್ಕೆ ಹೆಚ್.ಡಿ. ಕೋಟೆಗೆ ಆಗಮಿಸಲಿದ್ದು, ಬೆಳಗ್ಗೆ 10ಕ್ಕೆ ಚಿಕ್ಕ ದೇವಮ್ಮನ ಬೆಟ್ಟ ದೇವಾಲಯ ದರ್ಶನ ಮಾಡು ವರು. ಬೆಳಗ್ಗೆ 11 ಗಂಟೆಗೆ ನುಗು ಪ್ರವಾಸಿ ಮಂದಿರದಲ್ಲಿ ಮುಖಂಡರೊಂದಿಗೆ ಚರ್ಚೆ ನಡೆಸುವರು. ಮಧ್ಯಾಹ್ನ 3:30 ಗಂಟೆಗೆ ಸರ ಗೂರು ಪ್ರವಾಸಿ ಮಂದಿರದಲ್ಲಿ ಮುಖಂಡ ರೊಂದಿಗೆ ಚರ್ಚೆ ಹಾಗೂ ಸಂಜೆ 5 ಗಂಟೆಗೆ ಜಂಗಲ್ ರೆಸಾರ್ಟ್‍ನಲ್ಲಿ ಕಾರ್ಯನಿರ್ವ ಹಿಸುತ್ತಿ ರುವ ಸ್ವಚ್ಛತಾ ಕೆಲಸಗಾರರ, ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊ ಡನೆ ಚರ್ಚೆ ನಡೆಸುವರು. ಜಂಗಲ್ ವಾರ್ಡ್‍ನಲ್ಲಿ ವಾಸ್ತವ್ಯ ಹೂಡುವರು.
ಸೆ.29ರಂದು ಬೆಳಗ್ಗೆ 10ಕ್ಕೆ ಹೆಚ್.ಡಿ. ಕೋಟೆಗೆ ತೆರಳಲಿದ್ದು, ಬೆಳಗ್ಗೆ 10.30ಕ್ಕೆ ಕೃಷ್ಣಾ ಪುರ ಗ್ರಾಮದ ಪೌರಕಾರ್ಮಿಕರ ಭೇಟಿ ಮಾಡು ವರು. ಬೆಳಗ್ಗೆ 11.30ಕ್ಕೆ ಹೆಚ್.ಡಿ.ಕೋಟೆ ಮತ್ತು ಸರಗೂರು ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರೊಂದಿಗೆ ಅಂಬೇಡ್ಕರ್ ಭವನದಲ್ಲಿ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಮಧ್ಯಾಹ್ನ 2.30 ಗಂಟೆಗೆ ಹೆಚ್.ಡಿ.ಕೋಟೆ ಮತ್ತು ಸರಗೂರು ಪಟ್ಟಣ ಪಂಚಾಯಿತಿ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿ ಕರ ಕುಂದು-ಕೊರತೆಗಳ ಕುರಿತು ಅಧಿಕಾರಿ ಗಳೊಡನೆ ಸಭೆ ನಡೆಸುವರು.

Translate »