ಕೊಡಗಿನ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆ
ಕೊಡಗು

ಕೊಡಗಿನ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆ

April 27, 2021

ಮಡಿಕೇರಿ,ಏ.26-ಮಡಿಕೇರಿಯಲ್ಲಿರುವ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆ ಇದ್ದು, ಅಪಪ್ರಚಾರಗಳಿಗೆ ಕಿವಿಗೊಡದೆ ಕೊರೊನಾ ಲಕ್ಷಣಗಳಿದ್ದಲ್ಲಿ ಕೂಡಲೇ ಆಸ್ಪತ್ರೆಗೆ ಬನ್ನಿ ಎಂದು ಶಾಸಕ ಅಪ್ಪಚ್ಚು ರಂಜನ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಎಲ್ಲಾ ವಾರ್ಡ್‍ಗಳನ್ನು ವೀಕ್ಷಿಸಿದರು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗಾಗಿ ಮೀಸಲಿಟ್ಟಿರುವ ವಾರ್ಡ್‍ಗಳಲ್ಲಿ ಅಳವಡಿಸ ಲಾಗಿರುವ ಆಕ್ಸಿಜನ್ ಪೈಪ್‍ಲೈನ್, ವೆಂಟಿ ಲೇಟರ್‍ಗಳನ್ನೂ ಕೂಡ ಶಾಸಕರು ಪರಿ ಶೀಲಿಸಿದರು. ಸ್ಥಳದಲ್ಲಿದ್ದ ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಮೋಹನ್, ವೈದ್ಯಾಧಿಕಾರಿಗಳಾದ ಡಾ.ಲೋಕೇಶ್, ಡಾ.ರೂಪೇಶ್‍ಗೋಪಾಲ್, ಮೆಡಿಕಲ್ ಕಾಲೇಜು ಡೀನ್ ಕಾರ್ಯಪ್ಪ ಅವರು ಆಸ್ಪತ್ರೆಯಲ್ಲಿರುವ ವ್ಯವಸ್ಥೆ, ಕೋವಿಡ್ ವ್ಯಾಕ್ಸಿನ್ ಮತ್ತಿತರ ಔಷಧಿಗಳ ಸಂಗ್ರಹದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಸೋಂಕಿತ ರೋಗಿಗಳೊಂದಿಗೆ ಶಾಸಕ ಅಪ್ಪಚ್ಚು ರಂಜನ್ ಚರ್ಚಿಸಿದ ರಲ್ಲದೆ, ಆಸ್ಪತ್ರೆಯಲ್ಲಿನ ಊಟೋಪಚಾರ, ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿವೆ. ಕೆಲ ವೊಂದು ಸಣ್ಣ ಲೋಪಗಳನ್ನೇ ದೊಡ್ಡದು ಮಾಡಿ ಹೇಳುವುದು ಸರಿಯಲ್ಲ. ಇದ ರಿಂದಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಮಾನಸಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತದೆ. ಅವರೂ ಕೂಡ ಸಂಸಾರ ಹೊಂದಿದವರೇ, ಸೋಂಕಿತರನ್ನು ಗುಣಮುಖ ವಾಗಿಸಲು ಹಗಲ ರಾತ್ರಿ ಕಾರ್ಯ ನಿರ್ವಹಿ ಸುತ್ತಿದ್ದಾರೆ. ಅಂಥವರ ಮೇಲೆ ಅನಗತ್ಯ ದೂರುಗಳು ಬೇಡ. ವಾರ್ಡ್‍ನಲ್ಲಿರುವವರೂ ಕೂಡ ಆಸ್ಪತ್ರೆಯ ಚಿಕಿತ್ಸೆ, ಸೌಲಭ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ಶುಶ್ರೂಷೆ ಚೆನ್ನಾಗಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ 250 ಹಾಸಿಗೆಗಳು ಕೋವಿಡ್ ಆಸ್ಪತ್ರೆಯಲ್ಲಿದೆ. ಕೊಡಗಿನ ಕೋವಿಡ್ ಆಸ್ಪತ್ರೆಯಲ್ಲಿ ಬೇರೆ ಕಡೆ ಹೋಲಿಸಿದರೆ ಉತ್ತಮ ಚಿಕಿತ್ಸೆ ಲಭ್ಯವಿದೆ. ಯಾರಿಗಾದರೂ ಕೋವಿಡ್ ಸೋಂಕಿನ ಲಕ್ಷಣಗಳು ಇದ್ದಲ್ಲಿ ಕೋವಿಡ್ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು.

ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇವೆಗೆ ಇದೇ ಸಂದರ್ಭ ಶಾಸಕ ರಂಜನ್ ಅಭಿ ನಂದನೆ ಸಲ್ಲಿಸಿದರು. ಮಾಸ್ಕ್ ಅನ್ನು ಸರಿ ಯಾಗಿ ಧರಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬನ್ನಿ, ದೈಹಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು. ಕೊರೊನಾ ನಿರ್ಮೂಲನೆ ಮಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣತೊಡುವಂತೆ ಶಾಸಕ ಅಪ್ಪಚ್ಚು ರಂಜನ್ ಕರೆ ನೀಡಿದರು.

Translate »