ಮೈಸೂರು ಮೃಗಾಲಯಕ್ಕೆ ಬಂದಿವೆ ಗೊರಿಲ್ಲಾ, ಒರಾಂಗೂಟಾನ್
ಮೈಸೂರು

ಮೈಸೂರು ಮೃಗಾಲಯಕ್ಕೆ ಬಂದಿವೆ ಗೊರಿಲ್ಲಾ, ಒರಾಂಗೂಟಾನ್

October 3, 2021

ಮೈಸೂರು, ಅ.೨(ಎಂಟಿವೈ)- ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಅಪರೂಪದ ೨ ಜೋಡಿ ಒರಾಂಗೂಟಾನ್ ಹಾಗೂ ೨ ಗೊರಿಲ್ಲಾ ಹೊಸ ಅತಿಥಿಗಳು ಸೇರ್ಪಡೆಯಾಗಿದ್ದು, ಈ ಪ್ರಾಣ ಗಳನ್ನು ಹೊಂದಿರುವ ದೇಶದ ಏಕೈಕ ಮೃಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೃಗಾಲಯಕ್ಕೆ ಬಂದಿರುವ ಈ ಹೊಸ ಪ್ರಾಣ ಗಳನ್ನು ಕೆಲವು ದಿನಗಳಿಂದ ಕ್ವಾರಂಟೈನ್‌ಲ್ಲಿಡಲಾಗಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.

೫೦ ವರ್ಷಗಳ ನಂತರ: ಮೈಸೂರು ಮೃಗಾಲಯಕ್ಕೆ ತಂದಿರುವ ಒರಾಂಗೂಟಾನ್ ಪ್ರಾಣ ದಾಖಲೆಯೊಂದನ್ನು ಬರೆದಿದೆ. ಅಳಿವಿ ನಂಚಿನಲ್ಲಿರುವ ಒರಾಂಗೂಟಾನ್ ಭಾರತದ ಯಾವುದೇ ಮೃಗಾ ಲಯದಲ್ಲೂ ಇಲ್ಲ. ೫೦ ವರ್ಷಗಳ ಹಿಂದೆ ಮೈಸೂರಿನ ಮೃಗಾ ಲಯದಲ್ಲಿ ಇದ್ದ ಒಂದು ಜೋಡಿ ಒರಾಂಗೂಟಾನ್ ಸಾವನ್ನಪ್ಪಿದ ನಂತರ ಒರಾಂಗೂಟಾನ್ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಇದೀಗ ಮೈಸೂರು ಮೃಗಾಲಯಕ್ಕೆ ಒರಾಂಗೂಟಾನ್‌ಗಳ ಆಗ ಮನದಿಂದ ಮೃಗಾಲಯ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಮಲೇಷಿಯಾ ಮೃಗಾಲಯದಿಂದ ೫ ವರ್ಷದ ಗಂಡು ಅಫಾ, ೭ ವರ್ಷದ ಹೆಣ್ಣು ಮಿನ್ನಿ, ಸಿಂಗಾಪುರ ಮೃಗಾಲಯದಿಂದ ೧೭ ವರ್ಷದ ಗಂಡು ಒರಾಂಗೂಟಾನ್ ಮೆರ್ಲಿನ್, ೧೩ ವರ್ಷದ ಹೆಣ್ಣು ಅಟಿನ ಮೈಸೂರು ಮೃಗಾಲಯಕ್ಕೆ ಬಂದಿವೆೆ. ಇವುಗಳನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು, ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿವೆ.
೭ ವರ್ಷದ ನಂತರ: ಮೈಸೂರು ಮೃಗಾಲಯದಲ್ಲಿದ್ದ ಪೋಲೋ ಗೊರಿಲ್ಲಾ ೨೦೧೪ರಲ್ಲಿ ಸಾವಿಗೀಡಾದ ನಂತರ ದೇಶದಲ್ಲಿಯೇ ಯಾವ ಮೃಗಾಲಯದಲ್ಲಿಯೂ ಗೊರಿಲ್ಲಾ ಇರಲಿಲ್ಲ. ಇದೀಗ ೭ ವರ್ಷದ ನಂತರ ಜರ್ಮನಿಯಿಂದ ೨ ಗಂಡು ಗೊರಿಲ್ಲಾ ತರಲಾಗಿದೆ. ತಾಬೊ (೧೪) ಹಾಗೂ ಡೆಂಬ(೮) ಎಂಬ ಗೊರಿಲ್ಲಾ ಮೈಸೂರು ಮೃಗಾಲಯದ ಅತಿಥಿಯಾಗಿದ್ದು, ಗೊರಿಲ್ಲಾ ಹೊಂದಿರುವ ದೇಶದ ಏಕೈಕ ಮೃಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸತತ ಪರಿಶ್ರಮ: ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇ ಶಕ ಅಜಿತ್ ಎಂ.ಕುಲಕಣ ð `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ೧೮೯೨ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಚಾಮ ರಾಜೇಂದ್ರ ಒಡೆಯರ್ ಅವರಿಂದ ಸ್ಥಾಪಿತವಾದ ಮೈಸೂರು ಮೃಗಾಲಯ ಪ್ರಸ್ತುತ ನಗರದ ಹೃದಯ ಭಾಗದಲ್ಲಿದ್ದು, ೮೦.೧೩ ಎಕರೆಗಳ ಪ್ರದೇಶದಲ್ಲಿ ವಿಸ್ತರಿಸಿದೆ. ಇದು ಭಾರತದಲ್ಲೇ ಅತ್ಯಂತ ಹಳೆಯ ಮೃಗಾಲಯಗಳಲ್ಲಿ ಒಂದಾಗಿದೆ. ಅಪರೂಪದ ಪ್ರಾಣ ಗಳಾದ ಭಾರತೀಯ ಮತ್ತು ಆಫ್ರಿಕಾ ಆನೆಗಳು, ಗೊರಿಲ್ಲಾ, ಒರಾಂ ಗೂಟಾನ್, ಜಿರಾಫೆ, ಚಿಂಪಾAಜಿ, ಬಿಳಿ ಘೇಂಡಾಮೃಗ, ಕಪುö್ಪ ಚಿರತೆ, ಹೂಲ್ಲಕ್ ಗಿಬ್ಬನ್ ಕೋತಿಗಳು, ವಿವಿಧ ಜಾತಿಯ ಹುಲಿ, ಸಿಂಹಗಳು ಮತ್ತು ನೀರು ಕುದುರೆ ಸೇರಿದಂತೆ ೧೪೫ಕ್ಕೂ ಹೆಚ್ಚು ಜಾತಿಯ ಒಟ್ಟು ೧,೪೫೦ಕ್ಕಿಂತ ಹೆಚ್ಚು ವಿವಿಧ ಪ್ರಾಣ -ಪಕ್ಷಿ ಹೊಂದಿದೆ. ಮೈಸೂರು ಮೃಗಾಲಯಕ್ಕೆ ವರ್ಷಕ್ಕೆ (೨೦೨೦ ಮತ್ತು ೨೦೨೧ನೇ ವರ್ಷ ಹೊರತುಪಡಿಸಿ) ಸುಮಾರು ೩೦ರಿಂದ ೩೫ ಲಕ್ಷ ವೀಕ್ಷಕರು ಭೇಟಿ ನೀಡುತ್ತಿದ್ದು, ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದೆ. ವೀಕ್ಷಕರ ಅನು ಕೂಲಕ್ಕಾಗಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಸಿAಗಾಪುರ ಮೃಗಾಲಯಕ್ಕೆ ಜಿರಾಫೆ ನೀಡಲಾಗಿದೆ. ಮಲೇ ಷಿಯಾಗೆ ಹಾಗೂ ಗೊರಿಲ್ಲಾ ನೀಡಿರುವ ಜರ್ಮನಿ ಮೃಗಾ ಲಯಕ್ಕೆ ಯಾವುದೇ ಪ್ರಾಣ ಯನ್ನು ಕೊಟ್ಟಿಲ್ಲ ಎಂದು ತಿಳಿಸಿದರು.

Translate »