ಗಮನ ಸೆಳೆದ ಫಿಟ್ ಇಂಡಿಯಾ ಫ್ರೀಡಂ ರನ್
ಮೈಸೂರು

ಗಮನ ಸೆಳೆದ ಫಿಟ್ ಇಂಡಿಯಾ ಫ್ರೀಡಂ ರನ್

October 3, 2021

ಮೈಸೂರು,ಅ.೨(ಎಂಟಿವೈ)-ದೇಶಕ್ಕೆ ಸ್ವಾತಂತ್ರö್ಯ ಲಭಿಸಿ ೭೫ ವರ್ಷ ಸಂದ ಹಿನ್ನೆಲೆಯಲ್ಲಿ ಮೈಸೂರಿನ ನಜರ್ ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ `ಆಜಾದಿ ಕಾ ಅಮೃತ ಮಹೋತ್ಸವ’ ಹಾಗೂ `ಫಿಟ್ ಇಂಡಿಯಾ ಫ್ರೀಡಂ ರನ್-೨.೦’ ಓಟ ಎಲ್ಲರ ಗಮನ ಸೆಳೆಯಿತು.

ಯುವಜನ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ‘ಫ್ರೀಡಂ ರನ್’ ಚಾಮುಂಡಿ ವಿಹಾರ ಕ್ರೀಡಾಂಗಣ ಮುಂಭಾಗದಿAದ ಆರಂಭಗೊAಡು, ಎಸ್ಪಿ ಕಚೇರಿ ವೃತ್ತ, ಹಾರ್ಡಿಂಜ್ ವೃತ್ತ, ಕೋಟೆ ಅಂಜ ನೇಯ ಸ್ವಾಮಿ ದೇವಾಲಯದ ಆವರಣ, ಮಹಾತ್ಮ ಗಾಂಧಿ ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ದೇವ ರಾಜ ಅರಸು ರಸ್ತೆ, ಮುಡಾ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್, ಅರಮನೆ ದಕ್ಷಿಣ ಭಾಗದ ರಸ್ತೆ, ಪೊಲೀಸ್ ಆಯುಕ್ತರ ಕಚೇರಿ, ವಸಂತ ಮಹಲ್, ಗೋಪಾಲಗೌಡ ಆಸ್ಪತ್ರೆ ವೃತ್ತ ಮಾರ್ಗವಾಗಿ ಚಾಮುಂಡಿ ವಿಹಾರ ಕ್ರೀಡಾಂಗಣ ತಲುಪಿ ಮುಕ್ತಾಯ ಗೊಂಡಿತು. ವಿವಿಧ ವಯೋಮಾನದ ೩೦೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಗಮನ ಸೆಳೆದರು. ಓಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೈಲ್ಯಾಕ್ ಅಧ್ಯಕ್ಷ ಎನ್.ವಿ. ಫಣ Ãಶ್, ಪಾಲಿಕೆ ಸದಸ್ಯ ಸತ್ಯರಾಜು, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಸಿಇಓ ಎ.ಎಂ.ಯೋಗೇಶ್, ಎಡಿಸಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ನೆಹರು ಯುವ ಕೇಂದ್ರದ ಉಪ ನಿರ್ದೇಶಕ ಸಿದ್ದರಾಮಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಮೈಸೂರು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಕಾರಿ ಡಾ.ಎಂ.ಬಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »