ಮೃಗಾಲಯದಲ್ಲಿ ರೋಮಾಂಚನಗೊಳಿಸುತ್ತಿದೆ ವನ್ಯಜೀವಿಗಳ ಛಾಯಾಚಿತ್ರ
ಮೈಸೂರು

ಮೃಗಾಲಯದಲ್ಲಿ ರೋಮಾಂಚನಗೊಳಿಸುತ್ತಿದೆ ವನ್ಯಜೀವಿಗಳ ಛಾಯಾಚಿತ್ರ

October 3, 2021

ಮೈಸೂರು, ಅ.೨(ಎಂಟಿವೈ)- ರಾಷ್ಟಿçÃಯ ವನ್ಯ ಜೀವಿ ಸಪ್ತಾಹದ ಅಂಗವಾಗಿ ಮೈಸೂರು ಮೃಗಾ ಲಯದ ಆವರಣದಲ್ಲಿರುವ ಗ್ರಂಥಾಲಯದ ಸಭಾಂ ಗಣದಲ್ಲಿ ಆಯೋಜಿಸಿದ್ದ ವನ್ಯಜೀವಿಗಳ ಛಾಯಾ ಚಿತ್ರ ಪ್ರದರ್ಶನದಲ್ಲಿ ವನ್ಯಜೀವಿ ವಿಭಾಗ ಹಾಗೂ ಮೃಗಾಲಯದ ವಿಭಾಗದಲ್ಲಿ ಸೆರೆ ಹಿಡಿದಿರುವ ವಿವಿಧ ಛಾಯಾಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಈ ಛಾಯಾಚಿತ್ರ ಸ್ಪರ್ಧೆಯಲ್ಲಿ ವನ್ಯಜೀವಿ ಛಾಯಾಗ್ರಹಣದಲ್ಲಿ ಪರಿ ಣತಿ ಹೊಂದಿರುವ ಹಲವು ಛಾಯಾಗ್ರಾಹಕರು ಅತ್ಯು ತ್ತಮ ಛಾಯಾಚಿತ್ರ ತೆಗೆದು ಅವುಗಳನ್ನು ಸ್ಪರ್ಧೆಗೆ ನೀಡಿದ್ದು, ಎಲ್ಲವೂ ಮನಮೋಹಕವಾಗಿವೆ. ಎಲ್ಲಾ ಚಿತ್ರಗಳು ರೋಮಾಂಚನಕಾರಿ ಅನುಭವ ನೀಡುತ್ತಿವೆ. ಪ್ರತಿದಿನ ನಾವು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ವಿವಿಧ ಬಗೆಯ ಪಕ್ಷಿಗಳನ್ನು ನೋಡಿದರೂ ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಜನರು ಇನ್ನಾದರೂ ಬಿಡುವಿನ ವೇಳೆಯಲ್ಲಿ ಪಕ್ಷಿ ವೀಕ್ಷಣೆ ಹಾಗೂ ಪಕ್ಷಿಗಳ ಫೋಟೊ ತೆಗೆಯುವು ದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ರಾಷ್ಟಿçÃಯ ವನ್ಯ ಜೀವಿ ಸಪ್ತಾಹದ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ಆಯೋ ಜಿಸಿರುವ ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿತ ಗೊಂಡಿರುವ ಚಿತ್ರಗಳು ಕಣ್ಮನ ಸೆಳೆಯುತ್ತಿವೆ. ಮೃಗಾ ಲಯಕ್ಕೆ ಬರುವ ಪ್ರವಾಸಿಗರು ಛಾಯಾಚಿತ್ರ ಪ್ರದರ್ಶನ ವನ್ನೂ ವೀಕ್ಷಿಸಿ ಕಣ್ತುಂಬಿಕೊಳ್ಳಬಹುದು ಎಂದರು.

ಪ್ರದರ್ಶನದಲ್ಲಿನ ಚಿತ್ರಗಳು: ಛಾಯಾಚಿತ್ರ ಪ್ರದ ರ್ಶನದಲ್ಲಿ ವನ್ಯಜೀವಿ ಹಾಗೂ ಮೃಗಾಲಯದ ವಿಭಾಗ ದಲ್ಲಿ ಸೆರೆ ಹಿಡಿದಿರುವ ಪ್ರಾಣ -ಪಕ್ಷಿಗಳ ಚಿತ್ರ ಗಮನ ಸೆಳೆಯುತ್ತಿದೆ. ಮರವೇರುತ್ತಿರುವ ಚಿರತೆ, ಗಂಭೀರ ಹೆಜ್ಜೆ ಹಾಕುತ್ತಿರುವ ಹುಲಿ, ನೀರು ಕುಡಿಯುತ್ತ ಎಚ್ಚ ರಿಕೆ ನೋಟ ಬೀರುತ್ತಿರುವ ಹುಲಿ. ಸಿಂಗಳೀಕ, ಆನೆ, ಸಾರಂಗ, ಜಿಂಕೆ, ಕರಡಿ, ನವಿಲು ವಿವಿಧ ಪ್ರಾಣ -ಪಕ್ಷಿಗಳ ಭಂಗಿ ಭಾವ ಹೇಳುವ ಛಾಯಾಚಿತ್ರಗಳು ನೋಡುಗರನ್ನು ಪುಳಕಿತರಾಗುವಂತೆ ಮಾಡುತ್ತಿವೆ. ಲವ್ ಬರ್ಡ್ಸ್, ಕಪುö್ಪ ಗೂಬೆ ವಿವಿಧ ಪಕ್ಷಿಗಳು ಖಾಸಗಿ ಬದುಕಿನ ಸುಮಾರು ೧೦೦ಕ್ಕೂ ಹೆಚ್ಚು ಛಾಯಾ ಚಿತ್ರಗಳಿದ್ದು, ಬಂಡೀಪುರ, ನಾಗರಹೊಳೆ ಅಭ್ಯ ಯಾರಣ್ಯ ಸೇರಿದಂತೆ ಇತರೆ ಹೊರ ವಲಯದಲ್ಲಿ ಛಾಯಾಚಿತ್ರ ಗಾಹಕರು ಸೆರೆಹಿಡಿದಿರುವ ಚಿತ್ರಗಳು ಮತ್ತು ಮೃಗಾಲಯದ ಪ್ರಾಣ -ಪಕ್ಷಿಗಳ ಭಂಗಿ ಭಾವಗಳ ವಿಶೇಷ ಚಿತ್ರಗಳಿವೆ.

ಕಾರ್ಯಕ್ರಮದಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕಣ ð, ಮೃಗಾಲಯದ ಪ್ರಾಧಿಕಾರದ ಸದಸ್ಯ ರಾದ ಗೋಕುಲ ಗೋವರ್ಧನ್, ಜ್ಯೋತಿ ರೇಚಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.
ವನ್ಯಜೀವಿ ವಿಭಾಗದಲ್ಲಿ ವಿಜೇತರು: ಪತ್ರಿಕಾ ಛಾಯಾಗ್ರಾಹಕ ಎಂ.ಎಸ್.ಬಸವಣ್ಣ(ಅನುರಾಗ್ ಬಸವರಾಜ್) ಅವರು ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸೆರೆ ಹಿಡಿದಿರುವ ಛಾಯಾಚಿತ್ರಕ್ಕೆ ಪಥಮ ಬಹು ಮಾನ ಲಭಿಸಿದ್ದು, ಮಂಡ್ಯದ ಎಂ.ಚಾAದಿನಿ ಅವರಿಗೆ ದ್ವಿತೀಯ ಬಹುಮಾನ ಮತ್ತು ಹೆಚ್.ಆರ್.ಶಶಾಂಕರ್ ತೃತೀಯ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿಯು ರೇಣು ಪ್ರಿಯದರ್ಶಿ, ಬಿ.ಶಿವಕುಮಾರ್,ಎಂ.ಲೋಕನಾಥ್, ಜಿ.ಎಸ್.ರವಿಶಂಕರ್ ಅವರ ಚಿತ್ರಕ್ಕೆ ಲಭಿಸಿದೆ.
ಮೃಗಾಲಯದ ವಿಭಾಗ: ಛಾಯಾಗ್ರಾಹಕ ಬಿ.ಉಮೇಶ್ ಪ್ರಥಮ, ಅನೂಪ್ ಆರ್.ಶಂಕರ್ ದ್ವಿತೀಯ, ಯು. ಕೀರ್ತಿನ್ ಕುಮಾರ್ ತೃತೀಯ ಬಹುಮಾನ ಪಡೆದರು.
ಎಂ.ಲೋಕನಾಥ್, ವಿ.ಶೇಷಾದ್ರಿ, ಎಸ್.ವರುಣ್ ಕುಮಾರ್, ಬಿ.ಉಮೇಶ್ ಪ್ರಮಾಣಪತ್ರ ಪಡೆದರು. ಹಿರಿಯ ವನ್ಯಜೀವಿ ತಜ್ಞ ಕೃಪಾಕರ್ ಸ್ಪರ್ಧೆಯ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು

Translate »