ನಾವು ಕಾನೂನು ಗೌರವಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್ ಭೂತೆ ಅಭಿಪ್ರಾಯ
ಮೈಸೂರು

ನಾವು ಕಾನೂನು ಗೌರವಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್ ಭೂತೆ ಅಭಿಪ್ರಾಯ

October 3, 2021

ಮೈಸೂರು, ಅ.೨(ವೈಡಿಎಸ್)- ನಾವೆ ಲ್ಲರೂ ಕಾನೂನಿನ ಚೌಕಟ್ಟಿನಲ್ಲೇ ಜೀವನ ನಡೆಸಬೇಕಿದೆ. ಹಾಗಾಗಿ ಕಾನೂನಿಗೆ ಗೌರವ ನೀಡಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್ ಭೂತೆ ಹೇಳಿದರು.

ಮೈಸೂರು ವಿಜಯನಗರ ೩ನೇ ಹಂತ ದಲ್ಲಿರುವ ಹೆರಿಟೇಜ್ ಕ್ಲಬ್‌ನಲ್ಲಿ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ನೆಹರು ಯುವ ಕೇಂದ್ರ, ವಕೀಲರ ಸಂಘ, ಹೆರಿಟೇಜ್ ಕ್ಲಬ್, ಶ್ರೀ ಚಾಮುಂ ಡೇಶ್ವರಿ ಮಹಿಳಾ ಸ್ವ ಸಹಾಯ ಸಂಘ ಹಾಗೂ ಶ್ರೀ ಮಂಜುನಾಥ ಸ್ವ ಸಹಾಯ ಸಂಘ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಅಂಗವಾಗಿ `ಪ್ಯಾನ್ ಇಂಡಿಯಾ ಅವೇರ್‌ನೆಸ್ ಮತ್ತು ಔಟ್ ರೀಚ್ ಕಾನೂನು ಅರಿವು-ನೆರವು ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ವತಿಯಿಂದ ಕಾನೂನಿನ ನೆರವು ನೀಡುತ್ತಿದ್ದು, ಪರಿಶಿಷ್ಟ ಜಾತಿ, ಪಂಗಡ ದವರು, ಮಹಿಳೆಯರು ಮತ್ತು ವಾರ್ಷಿಕ ಆದಾಯ ೩ ಲಕ್ಷಕ್ಕಿಂತ ಕಡಿಮೆ ಇರುವ ವ್ಯಕ್ತಿಗಳು ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿ ದರೆ ಅವರಿಗೆ ಉಚಿತವಾಗಿ ವಕೀಲರನ್ನು ನೇಮಿಸಲಾಗುತ್ತದೆ. ಖಾಸಗಿಯಾಗಿ ವಕೀ ಲರನ್ನು ನೇಮಿಸಿಕೊಂಡರೆ ಸಾವಿರ ಅಥವಾ ಲಕ್ಷಾಂತರ ರೂ ಚಾರ್ಜ್ ಮಾಡುತ್ತಾರೆ. ಅಲ್ಲದೆ, ೧ ವಿಚಾರಣೆಗೆ ೮-೧೦ ಲಕ್ಷ ರೂ. ತೆಗೆದುಕೊಳ್ಳುವ ವಕೀಲರಿದ್ದಾರೆ. ಹಾಗಾಗಿ ಅರ್ಜಿ ನೀಡಿದರೆ ಉಚಿತ ಕಾನೂನು ನೆರವು ನೀಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಉದ್ದೇಶವೇ ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸು ವುದಾಗಿದೆ. ನೀವೆಲ್ಲರೂ ಆರಾಮವಾಗಿ ದ್ದೇವಲ್ಲ ಎನ್ನಬಹುದು. ಆದರೆ, ಒಬ್ಬ ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಒಂದಲ್ಲಾ ಒಂದು ಕಾನೂನಿನ ಅಡಿ ಯಲ್ಲೇ ಜೀವನ ನಡೆಸಬೇಕಾಗುತ್ತದೆ. ಕಾನೂನಿನ ಹೊರಗೆ ಜೀವನ ಮಾಡ ಲಾಗುವುದಿಲ್ಲ. ಪ್ರತಿಯೊಬ್ಬ ಜನ ಸಾಮಾನ್ಯನಿಗೂ ಕಾನೂನು ಗೊತ್ತಿರ ಬೇಕು. ಹಾಗಾಗಿ ದೈನಂದಿನ ವ್ಯವಹಾರಕ್ಕೆ ಬೇಕಾದ ಕಾನೂನುಗಳ ಬಗ್ಗೆ ತಿಳಿಸ ಲಾಗುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಕಾನೂನಿನ ಅವಶ್ಯ ಕತೆ ಇದೆ. ಇದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಅ.೨ರಿಂದ ನ.೧೪ ರವರೆಗೆ ಅರಿವು-ನೆರವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿ ಹಳ್ಳಿಗಳಿಗೆ ತೆರಳಿ ಅರಿವು ಮೂಡಿಸಲಾಗುತ್ತಿದೆ. ಮಗುವಿನ ಜನನ ನೋಂದಣ ಮಾಡಿಸದಿದ್ದರೆ ಶಾಲೆಯ ದಾಖಲಾತಿ, ಸಿಇಟಿ ಪರೀಕ್ಷೆ, ಉನ್ನತ ಶಿಕ್ಷಣ ಪಡೆಯಲಾಗಲ್ಲ, ಸರ್ಕಾ ರದ ಸೌಲಭ್ಯಗಳು ಸಿಗುವುದಿಲ್ಲ. ಹೊರ ದೇಶಕ್ಕೆ ಹೋಗಲೂ ಜನನ ಪ್ರಮಾಣ ಪತ್ರ ಅತ್ಯವಶ್ಯಕ. ಜತೆಗೆ ಮರಣ ಪ್ರಮಾಣ ಪತ್ರವೂ ಅಷ್ಟೇ ಮುಖ್ಯ ಎಂದು ಸಲಹೆ ನೀಡಿದರು. ಕರ್ನಾಟಕ ವಕೀಲರ ಪರಿ ಷತ್ ಸದಸ್ಯ ಬಿ.ಎಸ್.ಚಂದ್ರಮೌಳಿ, ವಕೀಲ ಶಿವಸ್ವಾಮಿ, ನೆಹರು ಯುವ ಕೇಂದ್ರದ ಉಪ ನಿರ್ದೇಶಕ ಎಸ್.ಸಿದ್ದರಾಮಪ್ಪ, ಹೆರಿ ಟೇಜ್ ಕ್ಲಬ್ ಕಾರ್ಯದರ್ಶಿ ಹೆಚ್. ಆರ್.ಮೂರ್ತಿ ಮತ್ತಿತರರಿದ್ದರು.

 

Translate »