ಆಡಳಿತ ಅದರ ಪಾಡಿಗೆ ಅದು ನಡೆಯುತ್ತಿದೆ: ಸಿಎಂ ಸಮರ್ಥನೆ
News

ಆಡಳಿತ ಅದರ ಪಾಡಿಗೆ ಅದು ನಡೆಯುತ್ತಿದೆ: ಸಿಎಂ ಸಮರ್ಥನೆ

October 26, 2021

ಬೆಂಗಳೂರು, ಅ.25(ಕೆಎಂಶಿ)- ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆ ಯಲ್ಲಿ ಸರ್ಕಾರದ ಕೆಲಸ ಗಳೇನು ಸ್ಥಗಿತಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧಕ್ಕೆ ಬೀಗ ಜಡಿದು ನಾವೇನು ಪ್ರಚಾ ರಕ್ಕೆ ಬಂದಿಲ್ಲ, ದೈನಂದಿನ ಆಡಳಿತ ಕಾರ್ಯಗಳು ಎಂದಿನಂತೆ ಜರುಗುತ್ತಿವೆ. ಸಚಿವರು ಎರಡು ಮೂರು ದಿನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿ ದ್ದಾರಷ್ಟೆ, ಉಳಿದಂತೆ ಅವರು ತಮ್ಮ ಇಲಾಖೆಯ ನಿರ್ವಹಣೆ ಜೊತೆಗೆ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿ ಸಲು ಪ್ರವಾಸ ಕೈಗೊಂಡಿದ್ದಾರೆ.

ಕಾಂಗ್ರೆಸ್‍ನವರು ಹೇಳುತ್ತಿರುವಂತೆ ನಾವೇನು ಆಡ ಳಿತ ಯಂತ್ರಕ್ಕೆ ಬೀಗ ಜಡಿದು ಪ್ರಚಾರ ಕೈಗೊಳ್ಳುತ್ತಿಲ್ಲ, ಅವರು ಅಧಿಕಾರದಲ್ಲಿದ್ದಾಗ ಹೇಗೆ ಉಪಚುನಾವಣೆ ಗಳನ್ನು ಎದುರಿಸುತ್ತಿದ್ದರೋ ಹಾಗೆಯೇ ನಾವು ಎದು ರಿಸುತ್ತಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭ ದಲ್ಲಿ ವಿಧಾನಸೌಧಕ್ಕೆ ಬೀಗ ಜಡಿದು ಉಪಚುನಾ ವಣೆಗಳಲ್ಲಿ ಪ್ರಚಾರ ಮಾಡಿದ್ರಾ ಎಂದು ಮರು ಪ್ರಶ್ನಿಸಿ ದರು. ಕಾಂಗ್ರೆಸ್ ಸೋಲಿನ ಭೀತಿಯಲ್ಲಿದೆ, ಇದಕ್ಕಾಗಿ ಆ ಪಕ್ಷದ ನಾಯಕರು, ಇಲ್ಲ-ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆಡಳಿತಕ್ಕೆ ಗಮನ ಕೊಡುವ ಜೊತೆಗೆ ನಮ್ಮ ಪಕ್ಷದ ಕೆಲಸವನ್ನೂ ಮಾಡುತ್ತಿದ್ದೇವೆ. ಅವರ ಮಾತುಗಳಿಗೆ ಜನ ಸ್ಪಂದಿಸುವ ಅಗತ್ಯವಿಲ್ಲ. ಅವರು ಅಧಿಕಾರಲ್ಲಿದ್ದಾಗ, ಏನೆಲ್ಲಾ ಮಾಡಿದರು ಎಂಬುದು ನಮಗೆ ಗೊತ್ತಿದೆ. ನಾನು ಮಂತ್ರಿಗಳಿಗೆ ಏನು ಸೂಚನೆ ಕೊಡಬೇಕೋ ಅದನ್ನು ಕೊಟ್ಟಿದ್ದೇನೆ, ಯಾವುದೇ ಕೆಲಸಗಳನ್ನು ನಿಲ್ಲಿಸಿಲ್ಲ ಎಂದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾಡಿ ರುವ ಆರೋಪಕ್ಕೆ ಸಂಬಂಧಿಸಿದಂತೆ ಇದೇ ಸಂದರ್ಭ ದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಜೆಡಿಎಸ್ ಅನ್ನು ಮುಗಿಸುವ ಪ್ರಶ್ನೆಯೇ ಇಲ್ಲ, ನಮ್ಮ ಪಕ್ಷ ಸಂಘಟನೆಗೆ ನಾವು ಹೋರಾಡುತ್ತೇವೆ. ಜೆಡಿಎಸ್ ಪರವಾಗಿ ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ, ಇದು ವಿಪರೀತ ಕಲ್ಪನೆ, ಇದಕ್ಕೆ ಯಾವುದೇ ಆಧಾರ ಇಲ್ಲ ಎಂದರು.

ಜನರ ಭಾವನೆಗಳಿಗೆ ತದ್ವಿರುದ್ಧವಾಗಿ ಮಾತನಾಡಿ ದರೆ ತದ್ವಿರುದ್ಧ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು.

ನನ್ನ ಬಗ್ಗೆ ಮಾತನಾಡಿದರೆ ಕಾಂಗ್ರೆಸ್‍ಗೆ ಲಾಭವಿಲ್ಲ, ನಮ್ಮ ಪಕ್ಷಕ್ಕೆ ಲಾಭವಾಗುತ್ತದೆ. ಅನಗತ್ಯವಾಗಿ ಪ್ರಧಾನಿ ಮೋದಿ ಅವರು ಮಾಡಿರುವ ಸಾಧನೆಗಳನ್ನು ಟೀಕಿ ಸುವ ಮತ್ತು ಮರೆಮಾಚಿಸುವ ಕೆಲಸ ನಡೆಯುತ್ತಿದೆ. ರೈತರ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಧಾನಿ ಅವರು ಜಾರಿಗೆ ತಂದ ನಂತರ ರಾಷ್ಟ್ರದ 20 ಕೋಟಿ ರೈತರಿಗೆ 6 ಸಾವಿರ ರೂ. ಕೇಂದ್ರ ಸರ್ಕಾರ ನೀಡಿದರೆ, ಕರ್ನಾಟಕ ಸರ್ಕಾರ 4 ಸಾವಿರ ರೂ. ನೀಡುತ್ತಿದೆ. ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹಲ ವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. ಜನಪರ ಕಾಳಜಿ, ಚಿಂತನೆ ಇರುವವರು ಅಭಿವೃದ್ಧಿ ಬಗ್ಗೆ ಚರ್ಚಿಸಲಿ, ಪದೇ ಪದೆ ಆದೇಶಗಳನ್ನು ತೋರಿಸಿ ನಾನು ಮಾಡಿದ್ದೆ ಎಂದು ಬೆನ್ನು ತಟ್ಟಿಕೊಳ್ಳುವುದಲ್ಲ.

ನೀವು ದಿನನಿತ್ಯ ಬಿಟ್ಟಿರುವ ಸುಳ್ಳಿನ ಕಂತೆ ಕೇಳಿ ರಾಜ್ಯದ ಜನತೆಯೇ ಬೇಸರಗೊಂಡಿದ್ದಾರೆ, ಇನ್ನು ಮುಂದಾದರೂ ಸುಳ್ಳಿನಿಂದ ಮನೆ ಕಟ್ಟುವ ಕೆಲಸ ನಿಲ್ಲಿಸಿ ಎಂದರು. ಕೋವಿಡ್-19 ಲಸಿಕೆ ಬಗ್ಗೆ ಮಾತ ನಾಡಿದ ಮುಖ್ಯಮಂತ್ರಿ ಅವರು, ಪ್ರಧಾನಿ ಅವರ ದೂರ ದೃಷ್ಟಿಯಿಂದಲೇ ನಮ್ಮ ವಿಜ್ಞಾನಿಗಳು ಸೋಂಕಿಗೆ ತ್ವರಿತ ವಾಗಿ ಲಸಿಕೆ ಕಂಡುಹಿಡಿದು, ಇಂದು 100 ಕೋಟಿ ಜನರು ಪುಕ್ಕಟೆಯಾಗಿ ಲಸಿಕೆ ಪಡೆದಿದ್ದಾರೆ ಎಂದರು.

Translate »