ನ.5ರಿಂದ 45 ದಿನಗಳ ಕಾಲ ವಸ್ತುಪ್ರದರ್ಶನ
ಮೈಸೂರು

ನ.5ರಿಂದ 45 ದಿನಗಳ ಕಾಲ ವಸ್ತುಪ್ರದರ್ಶನ

October 25, 2021

ಮೈಸೂರು,ಅ.24(ಎಂಟಿವೈ)- ಕೊರೊನಾ ಅಲೆ ಕಾರಣ ದಿಂದ ಕಳೆದ 2 ವರ್ಷದಿಂದ ಯಾವುದೇ ಚಟುವಟಿಕೆಯಿಲ್ಲದೆ ಮಂಕಾಗಿದ್ದ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ನ.5 ರಿಂದ 45 ದಿನಗಳ ಕಾಲ ವಿವಿಧ ವಸ್ತುಗಳ ಪ್ರದರ್ಶನ, ಮಾರಾಟ ಮೇಳ ಹಾಗೂ ಅಮ್ಯೂಸ್‍ಮೆಂಟ್ ಪಾರ್ಕ್ ತಲೆ ಎತ್ತಲಿದೆ. ಈ ಮಧ್ಯೆ ದಸರಾ ಹಿನ್ನೆಲೆಯಲ್ಲಿ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆರಂಭಗೊಂಡಿರುವ ಅಮ್ಯೂಸ್‍ಮೆಂಟ್ ಪಾರ್ಕ್ ಜನರನ್ನು ಆಕರ್ಷಿಸುತ್ತಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಇಲ್ಲಿಗೆ ಆಗಮಿಸಿ, ಸಂಭ್ರಮಪಡುತ್ತಿದ್ದಾರೆ.

2019ರ ದಸರಾ ಬಳಿಕ ಮೈಸೂರಿನ ದಸರಾ ವಸ್ತುಪ್ರದರ್ಶ ನದ ಆವರಣದಲ್ಲಿ ವಸ್ತುಪ್ರದರ್ಶನವಿಲ್ಲದೆ ಸ್ಥಗಿತಗೊಂಡಿತ್ತು. ಪ್ರತಿವರ್ಷ ದಸರಾ ಸಂದರ್ಭದಲ್ಲಿ 90 ದಿನಗಳವರೆಗೂ ವಸ್ತು ಪ್ರದರ್ಶನ ನಡೆದು ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ಕೊರೊನಾ ಅಲೆಯಿಂದ ಇಲ್ಲಿ ವಸ್ತುಪ್ರದರ್ಶನ ನಡೆಯಲಿಲ್ಲ. ಇದೀಗ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ ಚಟುವಟಿಕೆಗಳು ಗರಿಗೆದರುತ್ತಿದ್ದು, ದಸರಾ ವಸ್ತುಪ್ರದರ್ಶನದ ಮೈದಾನದಲ್ಲಿ ದೊಡ್ಡ ಮಟ್ಟದಲ್ಲಿ ಜನಾಕರ್ಷ ಣೀಯ ವಸ್ತುಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿದೆ.

45 ದಿನಗಳ ಪ್ರದರ್ಶನ: ಆದಾಯವಿಲ್ಲದೆ ಸೊರಗಿದ್ದ ವಸ್ತು ಪ್ರದರ್ಶನಕ್ಕೆ ಪುನಶ್ಚೇತನ ನೀಡಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರವು ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಬೃಹತ್ ಪ್ರಮಾಣದಲ್ಲಿ ವಸ್ತುಪ್ರದರ್ಶನ ನಡೆಸಿ ಆದಾಯ ಸಂಗ್ರಹಿಸಲು ಮುಂದಾಗಿದೆ. ದೀಪಾವಳಿ ಹಬ್ಬದ ಅಂಗವಾಗಿ ನ.5ರಿಂದ 45 ದಿನಗಳ ಕಾಲ ವಸ್ತುಪ್ರದರ್ಶನ ನಡೆಸಲು ತೀರ್ಮಾನಿಸಿದೆ. ಇದಕ್ಕಾಗಿ ನಾಲ್ಕು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅದರಲ್ಲಿ ಫನ್‍ವರ್ಡ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಆಯ್ಕೆಯಾಗಿದೆ. ನ.5ರಿಂದ ಮುಂದಿನ 45 ದಿನಗಳವರೆಗೂ ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ವಿವಿಧ ವಸ್ತುಗಳ ಮಾರಾಟ ಹಾಗೂ ಪ್ರದರ್ಶನದ ಮಳಿಗೆಗಳು, ಅಲಂಕಾರಿಕ ವಸ್ತುಗಳು, ಉಡುಪು ಗಳ ಮಳಿಗೆಗಳುಳ್ಳ ಪ್ರದರ್ಶನ, ತಿನಿಸು ಮಳಿಗೆಗಳು ತಲೆ ಎತ್ತಲಿದ್ದು, ಮೈಸೂರಿನ ಜನತೆಗೆ ಬಹುದಿನಗಳ ನಂತರ ಮನರಂಜನೆ ತಾಣವಾಗಿ ಆಕರ್ಷಣೆ ಕೇಂದ್ರ ಬಿಂದುವಾಗಲಿದೆ.

ಆಕರ್ಷಿಸಲಿದೆ ಅಮ್ಯೂಸ್‍ಮೆಂಟ್ ಪಾರ್ಕ್: ವಸ್ತುಪ್ರದರ್ಶನದಲ್ಲಿ ಮಕ್ಕಳ ಪ್ರಮುಖ ಆಕರ್ಷಣೆಯಾದ ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಿಸಲು ಸಹ ಸಂಸ್ಥೆ ತೀರ್ಮಾ ನಿಸಿದ್ದು, ಭದ್ರತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಸಂಸ್ಥೆಗಳಿಗೆ ಜಾಯಿಂಟ್ ವೀಲ್ ಸೇರಿದಂತೆ ವಿವಿಧ ಆಟಿಕೆಗಳುಳ್ಳ ಆಮ್ಯೂಸ್‍ಮೆಂಟ್ ಪಾರ್ಕ್‍ಗೂ ಅವಕಾಶ ನೀಡುವುದಾಗಿ ಫನ್‍ವಲ್ರ್ಡ್ ಸಂಸ್ಥೆ ತನ್ನ ಅರ್ಜಿಯಲ್ಲಿ ತಿಳಿಸಿದೆ.

60 ಲಕ್ಷ ಆದಾಯ ನಿರೀಕ್ಷೆ: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕಳೆದ ಎರಡು ವರ್ಷಗಳಿಂದ ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ಯಾವುದೇ ಚಟುವಟಿಕೆ ಇಲ್ಲದೆ ಆದಾಯ ಬರುತ್ತಿರಲಿಲ್ಲ. ಇದರಿಂದ ನಿರ್ವಹಣೆಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ದಸರಾ ವಸ್ತುಪ್ರದ ರ್ಶನದಲ್ಲಿ ನ.5ರಿಂದ 45 ದಿನ ವಸ್ತುಪ್ರದರ್ಶನ ನಡೆಸಲು ಫನ್‍ವಲ್ರ್ಡ್ ಸಂಸ್ಥೆಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ ಎಂದರು. 4 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಸುರಕ್ಷತೆ ಹಾಗೂ ಅನುಭವನದ ಮಾನದಂಡ ಪರಿಶೀಲಿಸಿ ಫನ್‍ವಲ್ರ್ಡ್ ಸಂಸ್ಥೆಗೆ ವಸ್ತುಪ್ರದರ್ಶನ ಆಯೋಜಿಸಲು ಅನುಮತಿ ನೀಡಲು ಉದ್ದೇಶಿಸಲಾಗಿದೆ. ಪ್ರಾಧಿಕಾರದ ವತಿಯಿಂದ ಈಗಾಗಲೇ 60 ಲಕ್ಷ ರೂ. ವೆಚ್ಚದ ಬಾಡಿಗೆ ಪಾವತಿಸುವ ಸಂಬಂಧ ಪತ್ರ ಸಲ್ಲಿಸಲಾಗಿದೆ. ವಸ್ತುಪ್ರದರ್ಶನದ ಆವರಣದಲ್ಲಿ ಒಂದೊಂದು ಸ್ಥಳಕ್ಕೆ ಒಂದೊಂದು ಬಗೆಯ ನೆಲ ಬಾಡಿಗೆ ನಿಗದಿ ಮಾಡಲಾಗಿದೆ. ಅದರಂತೆ 60 ಲಕ್ಷ ರೂ. ಬಾಡಿಗೆ ಪಾವತಿಸುವ ಬಗ್ಗೆ ತಿಳಿಸಲಾಗಿದೆ. ಸೋಮವಾರ(ಅ.25) ಅಂತಿಮ ಹಂತದ ಸಭೆ ನಡೆಯಲಿದ್ದು, ಎಷ್ಟು ಸ್ಥಳ ಪಡೆಯಲು ಫನ್‍ವಲ್ರ್ಡ್ ಸಂಸ್ಥೆ ಬಯಸುತ್ತದೆ ಎಂದು ತಿಳಿಯಲಿದೆ ಎಂದರು.

Translate »