ಟಿ20 ವಿಶ್ವಕಪ್: ಭಾರತ ವಿರುದ್ಧ ಪಾಕ್‍ಗೆ ಭರ್ಜರಿ ಗೆಲುವು
News

ಟಿ20 ವಿಶ್ವಕಪ್: ಭಾರತ ವಿರುದ್ಧ ಪಾಕ್‍ಗೆ ಭರ್ಜರಿ ಗೆಲುವು

October 25, 2021

ದುಬೈ, ಅ.24- ಶಹೀನ್ ಆಫ್ರಿದಿ ಅವರ ಮಾರಕ ಬೌಲಿಂಗ್ ಹಾಗೂ ಆರಂಭಿಕರಾದ ಮಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಂ ಅವರ ಅಮೋಘ ಬ್ಯಾಟಿಂಗ್ ನೆರವಿ ನಿಂದ ಪಾಕಿಸ್ತಾನ, ಭಾರತದ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

ಇದರೊಂದಿಗೆ ಐಸಿಸಿ ವಿಶ್ವಕಪ್ ಇತಿಹಾಸ ದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಆದರೆ ಪಾಕಿಸ್ತಾನ ಇದೇ ಮೊದಲ ಬಾರಿಗೆ ಗೆಲುವು ಸಾಧಿ ಸುವ ಮೂಲಕ ಐತಿಹಾಸಿಕ ಜಯ ಗಳಿಸಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತಾದರೂ, ದುಬೈಯಲ್ಲಿ ನಡೆದ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮರುಕಳಿಸಲು ವಿರಾಟ್ ಕೊಹ್ಲಿ ಬಳಗಕ್ಕೆ ಸಾಧ್ಯವಾಗಲಿಲ್ಲ. ಈ ಸೋಲಿನಿಂದ ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಸೂಪರ್-12 ಹಂತದ 2ನೇ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್‍ಗಳ ಸವಾಲಿನ ಮೊತ್ತ ಪೇರಿಸಿತು. ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಅವ ರನ್ನು ಶಹೀನ್ ಆಫ್ರಿದಿ ಪಂದ್ಯದ 4ನೇ ಎಸೆತ ದಲ್ಲೇ ತಮ್ಮ ಯಾರ್ಕರ್ ಅಸ್ತ್ರದ ಮೂಲಕ ಎಲ್‍ಬಿಡಬ್ಲ್ಯು ಬಲೆಗೆ ಬೀಳಿಸಿದರು. ರೋಹಿತ್ ತಾವು ಎದುರಿಸಿದ ಮೊದಲ ಎಸೆತ ಇದಾಗಿತ್ತು. ಇದರೊಂದಿಗೆ ಗೋಲ್ಡನ್ ಡಕ್ ಅವಮಾನ ದೊಂದಿಗೆ ಅವರು ಮೈದಾನ ತೊರೆಯಬೇಕಾ ಯಿತು. ಅಲ್ಲದೇ ಮತ್ತೋರ್ವ ಆರಂಭಿಕ ಕೆ.ಎಲ್. ರಾಹುಲ್ ಕೂಡ ಅಫ್ರಿದಿ ಮೋಡಿಗೆ ಸಿಲುಕಿ ದರು. 8 ಎಸೆತ ಎದುರಿಸಿದ ರಾಹುಲ್ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಸೂರ್ಯಕುಮಾರ್ ಯಾದವ್ ತಲಾ ಒಂದೊಂದು ಬೌಂಡರಿ, ಸಿಕ್ಸರ್ ಒಳ ಗೊಂಡ 11 ರನ್ ಗಳಿಸಿ ನಿರ್ಗಮಿಸಿದರು.

ಈ ವೇಳೆ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ತಂಡಕ್ಕೆ ಚೇತ ರಿಕೆ ನೀಡಿದರು. ಈ ಜೋಡಿ 4ನೇ ವಿಕೆಟ್‍ಗೆ 53 ರನ್‍ಗಳ ಜೊತೆಯಾಟವಾಡಿತು. ಬಿರುಸಿನ ಬ್ಯಾಟಿಂಗ್ ನಡೆಸಿದ ರಿಷಬ್ ಪಂತ್ 30 ಎಸೆತ ಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಒಳಗೊಂಡ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ನಾಯಕನಿಗೆ ತಕ್ಕ ಆಟವಾಡಿದ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದರೆ 49 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಒಳಗೊಂಡ 57 ರನ್ ಗಳಿಸಿ ಔÀಟಾದರು. ಉಳಿದಂತೆ ರವೀಂದ್ರ ಜಡೇಜಾ 13, ಹಾರ್ದಿಕ್ ಪಾಂಡ್ಯ 11 ರನ್ ಗಳಿಸಿದರು. ಪಾಕಿಸ್ತಾನದ ಪರ ಶಹೀನ್ ಆಫ್ರಿದಿ 3, ಹಸನ್ ಆಲಿ 2, ಶದಾಬ್ ಖಾನ್ ಹಾಗೂ ಹ್ಯಾರೀಸ್ ರೌಫ್ ತಲಾ ಒಂದೊಂದು ವಿಕೆಟ್ ಉರುಳಿಸಿದರು. ಭಾರತ ನೀಡಿದ 152 ರನ್‍ಗಳ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ ಕೇವಲ 17.5 ಓವರ್‍ಗಳಲ್ಲಿ ತಲುಪುವ ಮೂಲಕ ಕೊನೆಗೂ ವಿಶ್ವಕಪ್ ಇತಿಹಾಸದಲ್ಲಿ ಭಾರತದೆದುರಿನ ಸೋಲಿನ ಸರಪಣಿ ಕಡಿದುಕೊಂಡಿತು. ಪಾಕ್ ಪರ ಇನ್ನಿಂಗ್ಸ್ ಆರಂಭಿ ಸಿದ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಆಜಂ ಆರಂಭದಲ್ಲಿ ಎಚ್ಚರಿಕೆಯ ಆಟ ವಾಡಿದರು. ನಂತರ ಆಟಕ್ಕೆ ಕುದರಿಕೊಂಡ ಬಳಿಕ ಭಾರತೀಯ ಬೌಲರ್‍ಗಳನ್ನು ಮನ ಬಂದಂತೆ ದಂಡಿಸಿದರು. ಅಲ್ಲದೇ ಮೊದಲ ವಿಕೆಟ್ 152 ರನ್‍ಗಳ ದಾಖಲೆಯ ಜೊತೆ ಯಾಟವಾಡುವ ಮೂಲಕ ತಂಡಕ್ಕೆ ಜಯ ತಂದು ಕೊಟ್ಟರು. ಮೊಹಮ್ಮದ್ ರಿಜ್ವಾನ್ 55 ಎಸೆತಗಳಲ್ಲಿ 3 ಸಿಕ್ಸರ್, 6 ಬೌಂಡರಿ ಒಳಗೊಂಡ 79 ರನ್ ಗಳಿಸಿದರೆ, ನಾಯಕ ಬಾಬರ್ ಅಜಂ 52 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿ ಒಳಗೊಂಡ 68 ರನ್ ಗಳಿಸಿ ಅಜೇಯ ರಾಗಿ ಉಳಿದರು. ಭಾರತದ ಪರ ಯಾವೊಬ್ಬ ಬೌಲರ್‍ಗಳ ವಿಕೆಟ್ ಪಡೆಯಲು ಸಾಧ್ಯವಾಗ ಲಿಲ್ಲ. ಅತ್ಯುತ್ತಮ ಪ್ರದರ್ಶನ ನೀಡಿದ ಶಹೀನ್ ಅಫ್ರಿದಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Translate »