ಕೊರೊನಾ 2ನೇ ಅಲೆ ತಡೆಯುವಲ್ಲಿ ಸರ್ಕಾರ ವಿಫಲ: ಸಾ ರಾ ಮಹೇಶ್ ಟೀಕೆ
ಮೈಸೂರು

ಕೊರೊನಾ 2ನೇ ಅಲೆ ತಡೆಯುವಲ್ಲಿ ಸರ್ಕಾರ ವಿಫಲ: ಸಾ ರಾ ಮಹೇಶ್ ಟೀಕೆ

April 28, 2021

ಹೆಬ್ಬಾಳು,ಏ.27(ಕೆಟಿಆರ್)- ಕೊರೊನಾ 2ನೇ ಅಲೆ ತಡೆಯುವಲ್ಲಿ ಸರ್ಕಾರ ವಿಫಲಗೊಂಡಿದ್ದು ಗÀಂಟೆ ಗೊಂದು ಮಾರ್ಗಸೂಚಿ ಬಿಡುಗಡೆ ಮಾಡಿ ಅಧಿಕಾರಿಗಳು ಹಾಗೂ ಸಾರ್ವ ಜನಿಕರನ್ನು ಗೊಂದಲದಲ್ಲಿಟ್ಟಿದೆ ಎಂದು ಶಾಸಕ ಸಾ.ರಾ.ಮಹೇಶ್ ಟೀಕಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತ ನಾಡಿದ ಅವರು, ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲನೆ ಮಾಡಲು ಜನತೆ ಸಿದ್ದರಿದ್ದಾರೆ. ಆದರೆ ಅಧಿಕಾರಿಗಳು ಅನವ ಶ್ಯಕವಾಗಿ ಜನತೆಗೆ ತೊಂದರೆ ನೀಡ ಬಾರದು ಎಂದರು.

ಇಂತಹ ಮಾರ್ಗಸೂಚಿಗಳಿಂದ ಕೂಲಿ ಕಾರ್ಮಿಕರಿಗೆ, ಬಡ ಜನತೆಗೆ ಮತ್ತು ವ್ಯಾಪಾರಸ್ಥ ರಿಗೆ ಅನಾನುಕೂಲವಾಗಿದೆ ಎಂದರಲ್ಲದೆ, ಕಳೆದ ವರ್ಷದ ಲಾಕ್ ಡೌನ್‍ನಿಂದ ಜನತೆಗೆ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗದೆ ದಿನಕ್ಕೊಂದು ಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅಂತಹ ಜನತೆಗೆ ಸರ್ಕಾರ ಸೌಕರ್ಯ ಗಳನ್ನು ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ನಿಯಮಗಳ ಬಗ್ಗೆ ಸಾರ್ವ ಜನಿಕರು ಮತ್ತು ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳ ಮಾಲೀಕರಿಗೆ ಹಾಗೂ ವ್ಯಾಪಾರಸ್ಥರಿಗೆ ಸರಿಯಾದ ಮಾಹಿತಿ ನೀಡುವ ಕೆಲಸ ಅಧಿಕಾರಿಗಳು ಮಾಡಬೇಕು. ಅದನ್ನು ಬಿಟ್ಟು ಕಾನೂನು ಹೆಸರಿನಲ್ಲಿ ದೌರ್ಜನ್ಯ ಮಾಡುವುದು, ಹಣ ವಸೂಲಿ ಮಾಡುವುದು ಕಂಡು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸೋಂಕು ದಿನದಿಂದ ದಿನಕ್ಕೆ ಉಲ್ಬಣ ಗೊಳ್ಳುತ್ತಿದ್ದು ಜನತೆ ರೋಗ ತಟೆಗಟ್ಟಲು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವುದರ ಜತೆಗೆ ಎಚ್ಚರಿಕೆಯಿಂದ ಇರಬೇಕು ಎಂದು ಕೋರಿದ ಶಾಸಕರು, ಕೊರೊನಾ ಮುಕ್ತ ರಾಷ್ಟ್ರವನ್ನಾಗಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು.

ತಹಶೀಲ್ದಾರ್ ಎಂ.ಮಂಜುಳಾ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್. ಮಹೇಂದ್ರಪ್ಪ, ಸಾರ್ವಜನಿಕರ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ನಾಗೇಂದ್ರ, ಸಮಾಜ ಕಲ್ಯಾಣಾಧಿಕಾರಿ ಅಶೋಕ್, ಪುರಸಭೆ ಮುಖ್ಯಾಧಿಕಾರಿ ಪುಟ್ಟರಾಜು, ಸಿಪಿಐ ಎಂ.ಆರ್.ಲವ, ಎಸ್‍ಐ ವಿ.ಚೇತನ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಮು ಇತರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Translate »