ಅಂಬೇಡ್ಕರ್ ಪ್ರತಿಮೆ ಅನಾವರಣ
ಮೈಸೂರು

ಅಂಬೇಡ್ಕರ್ ಪ್ರತಿಮೆ ಅನಾವರಣ

April 28, 2021

ಅಂತರಸಂತೆ, ಏ.27- ಅಖಂಡ ಭಾರತದ ಅಡಿಪಾಯ ಯಾರು ಅಂದರೆ ಡಾ. ಅಂಬೇಡ್ಕರ್ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು. ಅಂತರಸಂತೆ ಗ್ರಾಮದ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ನಡೆದ ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ತಮ್ಮ ಪೆನ್ನಿನ ಮೂಲಕ ದೇಶ ಕಟ್ಟಿದರೆ ವಿನಹ ಗನ್ ಹಾಗೂ ಆಯುಧಗಳಿಂದಲ್ಲ. ನಮ್ಮದು ಪೆನ್ನುಗಳ ಭಾರತವಾಗಬೇಕೇ ಹೊರತು ಗನ್‍ಗಳ ಭಾರತವಾಗಬಾರದು ಎಂದರು.
ಶಾಸಕ ಅನಿಲ್ ಮಾತನಾಡಿ, ಅಂಬೇಡ್ಕರ್ ಎಲ್ಲಾ ಜಾತಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಸಂವಿಧಾನ ನೀಡಿದರು ಎಂದರು. ಅಂತರಸಂತೆ ಹೋಬಳಿ ಮಟ್ಟದಲ್ಲಿ ಡಿಜಿಟಲ್ ಗ್ರಂಥಾಲಯದ ಅಗತ್ಯವಿದ್ದು, ಸುಂದರವಾದ ಡಿಜಿಟಲ್ ಗ್ರಂಥಾಲಯ ವನ್ನು ಹೋಬಳಿ ಕೇಂದ್ರ ಸ್ಥಾನದಲ್ಲಿ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದರು. ಕೊಳ್ಳೆಗಾಲ ಚೇತನವನದ ಪರಮ ಮನೋರಖ್ಖತ ಭಂತೇಜಿ, ಚಾಮರಾಜ ನಗರದ ನಳಂದ ವಿವಿ ಭೋದಿದತ್ತ ಭಂತೇಜಿ, ಸಾರನಾಥ ಬುದ್ದ ವಿಹಾರದ ಮಾತೆ ಗೌತಮಿ ಭಂತೇಜಿ, ಗ್ರಾಪಂ ಅಧ್ಯಕ್ಷ ಕಲೀಂಪಾಷ, ಉದ್ಯಮಿ ಬಾಬು ನಾಯಕ್, ಆದಿ ಕರ್ನಾಟಕ ಮಹಾ ಸಭಾದ ಅಧ್ಯಕ್ಷ ಶಿವಣ್ಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ, ಜಿಪಂ ಸದಸ್ಯ ವೆಂಕಟಸ್ವಾಮಿ, ಡಿ.ಸುಂದರ್ ದಾಸ್, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ, ಚಾ.ನಂಜುಂಡಮೂರ್ತಿ, ಪುರಸಭೆ ಸದಸ್ಯರಾದ ಪ್ರೇಮ್ ಸಾಗರ್, ಸುರೇಶ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮೇಶ್, ಪ್ರದೀಪ್, ಪ್ರಕಾಶ, ಮಾರುತಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

Translate »