ಸರ್ಕಾರಿ ಭೂಮಿ ಭೂಗಳ್ಳರ ಪಾಲು:  ಸಿಬಿಐ, ನ್ಯಾಯಾಂಗ ತನಿಖೆಗೆ ಆಗ್ರಹ
ಮೈಸೂರು

ಸರ್ಕಾರಿ ಭೂಮಿ ಭೂಗಳ್ಳರ ಪಾಲು: ಸಿಬಿಐ, ನ್ಯಾಯಾಂಗ ತನಿಖೆಗೆ ಆಗ್ರಹ

January 21, 2019

ಮೈಸೂರು: ಮೈಸೂರು ನಗರದ ವಿವಿಧೆಡೆ ಭೂಗಳ್ಳರ ಪಾಲಾ ಗಿರುವ ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ರಕ್ಷಿಸಲು ಒಂದು ತಿಂಗಳೊಳಗೆ ಸಿಬಿಐ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗದಿಂದ ತನಿಖೆಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಎಚ್ಚರಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಪಾಲಿಕೆ, ಮುಡಾ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನಗರದ ನರಸಿಂಹÀರಾಜ, ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಕೆÀರೆ, ಕುಂಟೆ, ಸ್ಮಶಾನ, ಬೆಟ್ಟ, ಗೋಮಾಳ, ಉದ್ಯಾನವನ, ರಸ್ತೆ, ನಿವೇಶನಗಳನ್ನು ಹಾಗೂ ಕಂದಾಯ ಇಲಾಖೆಗೆ ಸೇರಿದ ನೂರಾರು ಎಕರೆ ಭೂಮಿ ಯನ್ನು ರೌಡಿಗಳು, ಶ್ರೀಮಂತರು, ಸಮಾಜಘಾತುಕ ಶಕ್ತಿಗಳು, ಪ್ರಭಾವಿ ರಾಜಕಾರಣಿ ಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಬಳಿಸಿದ್ದಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿ ಗಳು ಕಾರ್ಯಾಚರಣೆ ನಡೆಸಿ ಕ್ಯಾತಮಾರನಹಳ್ಳಿ ಸರ್ವೆ ನಂ.1ರಲ್ಲಿ 1.35 ಎಕರೆ ಹಾಗೂ ಮೈಸೂರು ಸರ್ವೆ ನಂ.1ರಲ್ಲಿ 11.38 ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿರುವುದು ಶ್ಲಾಘನೀಯ. ಶಾಂತಿನಗರ, ಉದಯಗಿರಿ, ರಾಜೀವ್‍ನಗರ, ಹೊರ ವರ್ತುಲ ರಸ್ತೆಯಲ್ಲಿರುವ ಖಾಲಿ ನಿವೇಶನಗಳು, ಹಳೆ ಕೆಸರೆ, ಆರ್.ಎಸ್.ನಾಯ್ಡು ನಗರ, ಗೌಸಿಯಾನಗರ, ಶಕ್ತಿ ನಗರ, ರಾಘವೇಂದ್ರ ನಗರ, ಗಣೇಶನಗರ, ವಿದ್ಯಾನಗರ, ಯರಗನಹಳ್ಳಿ ಸೇರಿದಂತೆ ವಿವಿಧೆಡೆ ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿಯೂ ನೂರಾರು ಎಕರೆ ಸರ್ಕಾರಿ ಭೂಮಿ ಭೂಗಳ್ಳರ ವಶವಾಗಿದೆÉ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಸರ್ಕಾರಿ ಭೂಮಿ ಕಬಳಿಸಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿ ಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆ ಪದಾಧಿಕಾರಿಗಳಾದ ಶಿವನಂಜಯ್ಯ, ಸೈಯದ್ ಖಾಸಿಂ, ಎಲ್.ಮಹದೇವಪ್ಪ, ಕೆ.ಚಲುವಪ್ಪ, ಕೆ.ಎಸ್.ಸೋಮಶೇಖರ್ ಉಪಸ್ಥಿತರಿದ್ದರು.

Translate »