ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ ಪಟ್ಟಣ ಪಂಚಾಯಿತಿ; ಅಧಿಸೂಚನೆ ಹೊರಡಿಸಿದ ಸರ್ಕಾರ
ಮೈಸೂರು

ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ ಪಟ್ಟಣ ಪಂಚಾಯಿತಿ; ಅಧಿಸೂಚನೆ ಹೊರಡಿಸಿದ ಸರ್ಕಾರ

November 25, 2020

ಮೈಸೂರು, ನ.24(ಪಿಎಂ)- ಸಚಿವ ಸಂಪುಟದ ಅನುಮೋದನೆ ನಂತರ ಕೂರ್ಗಳ್ಳಿ, ಹಿನಕಲ್, ಹೂಟಗಳ್ಳಿ, ಬೆಳವಾಡಿ ಗ್ರಾಮ ಪಂಚಾಯಿತಿ ಸೇರ್ಪಡೆಗೊಳಿಸಿ `ಹೂಟಗಳ್ಳಿ ನಗರಸಭೆ’ ಹಾಗೂ ಬೋಗಾದಿ, ಶ್ರೀರಾಂ ಪುರ, ರಮ್ಮನಹಳ್ಳಿ ಮತ್ತು ಕಡಕೊಳ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಪರಿವರ್ತಿಸಿ, ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ (ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆ) ಹೊರಡಿಸಿದೆ.

ನ.12ರಂದು ಇದಕ್ಕೆ ಸಚಿವ ಸಂಪುಟ ಸಮ್ಮತಿ ನೀಡಿತ್ತು. ಇದೀಗ ಸೋಮವಾರ 1 ನಗರಸಭೆ ಹಾಗೂ 4 ಪಟ್ಟಣ ಪಂಚಾಯಿತಿ ರಚನೆ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆ ದಿನಾಂಕದಿಂದ ಸದರಿ ಸ್ಥಳೀಯ ಸಂಸ್ಥೆಗಳ ಪರಿವರ್ತನೆ ಜಾರಿಗೆ ಬಂದಿದೆ.

ಹೂಟಗಳ್ಳಿ ನಗರಸಭೆ: ಮೈಸೂರು ತಾಲೂಕಿನ ಕೂರ್ಗಳ್ಳಿ ಗ್ರಾಮ ಪಂಚಾಯಿತಿಯ (ಗ್ರಾಪಂ) ಕೂರ್ಗಳ್ಳಿ, ಹೂಟಗಳ್ಳಿ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಬೆಳವಾಡಿ ಗ್ರಾಪಂನ ಬೆಳವಾಡಿ, ಹಿನಕಲ್ ಗ್ರಾಮಗಳನ್ನು ಒಳಗೊಂಡ ಪ್ರದೇಶವನ್ನು `ಸಣ್ಣ ನಗರ ಪ್ರದೇಶ’ ಎಂದು ಘೋಷಿಸಿ, ಹೂಟಗಳ್ಳಿ ನಗರಸಭೆ ಆಗಿ ಪರಿವರ್ತಿಸಲಾಗಿದೆ. ಇದರ ಒಟ್ಟು ಪ್ರದೇಶ 28.48 ಚ.ಕಿ.ಮೀ. ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಉದ್ದೇಶಿತ ಹೂಟಗಳ್ಳಿ ನಗರಸಭೆ ಪ್ರದೇಶದ ಚಕ್ಕುಬಂದಿ ಇಂತಿದ್ದು, ಉತ್ತರ ದಿಕ್ಕಿನ ಕೂರ್ಗಳ್ಳಿ ಸರ್ವೇ ನಂ. 136, 140, 141, 161, 48, 175, 176, 50, ಪೂರ್ವ ದಿಕ್ಕಿನ ಕೂರ್ಗಳ್ಳಿ ಸರ್ವೇ ನಂ. 174, 54, 55, 56, 57, ಹೂಟಗಳ್ಳಿ ಸರ್ವೇ ನಂ. 105, 07, 09, 10, 11, 12, ಹಿನಕಲ್ ಸರ್ವೇ ನಂ. 43, 44, 66, 67, 84, 85, 86, 89, 114, 116, 117, 118, 119, 120, 146, 148, 149, 150, 337, 155, 156, 157, ದಕ್ಷಿಣ ದಿಕ್ಕಿನ ಬೆಳವಾಡಿ ಸರ್ವೇ ನಂ. 214, 213, 212, 206, 187, 186, 187, 181, 382, 381, 380, 379, 378, 365, 364, 363, 362, 361, 338, 337, ಹಿನಕಲ್ ಸರ್ವೇ ನಂ. 16, 15, 14, 13, 12, 10, 09, 325, 319, 318, 317, 315, 301, 302, 304, 305, 306, 307, 282, 280, 277, 276, 275, 274, 252, 251, 249, 249ರಿಂದ 204ರವರೆಗೆ ನಾಲಾ ಸರಹದ್ದು ಸೇರಿದಂತೆ 164, 163, 162, 161, ಪಶ್ಚಿಮ ದಿಕ್ಕಿನ ಕೂರ್ಗಳ್ಳಿ ಸರ್ವೇ ನಂ. 209, 134, 132, 131, 208, 96, ಬೆಳವಾಡಿ ಸರ್ವೇ ನಂ. 51, 50, 288, 286, 285, 279, 278, 277, 276, 264, 263, 258, 257, 256, 255, 240, 239, 238, 233, 232, 220, 219, 217, 216 ಒಳಗೊಂಡಿವೆ.

ಬೋಗಾದಿ ಪಟ್ಟಣ ಪಂಚಾಯಿತಿ: ಮೈಸೂರು ತಾಲೂಕಿನ ಬೋಗಾದಿ ಗ್ರಾಪಂ ಜೊತೆಗೆ ಮರಟಿಕ್ಯಾತನಹಳ್ಳಿ ಗ್ರಾಪಂನ ಜಟ್ಟಿಹುಂಡಿ, ಮರಟಿ ಕ್ಯಾತನಹಳ್ಳಿ ಗ್ರಾಮಗಳು, ಬೀರಿಹುಂಡಿ ಗ್ರಾಪಂನ ಕೇರ್ಗಳ್ಳಿ ಗ್ರಾಮ ಹಾಗೂ ಬೆಳವಾಡಿ ಗ್ರಾಪಂನ ಬಸವನಹಳ್ಳಿ, ಮಾದಗಳ್ಳಿ, ಕೆ.ಹೆಮ್ಮನಹಳ್ಳಿ ಗ್ರಾಮಗಳು ಒಳಗೊಂಡ ಗ್ರಾಪಂ ಪ್ರದೇಶವನ್ನು ಬೋಗಾದಿ `ಪರಿ ವರ್ತನಾ ಪ್ರದೇಶ’ವೆಂದು ಘೋಷಿಸಿ, `ಬೋಗಾದಿ ಪಟ್ಟಣ ಪಂಚಾ ಯಿತಿ’ ಆಗಿ ಪರಿವರ್ತಿಸಲಾಗಿದೆ. ಇದರ ಒಟ್ಟು ಪ್ರದೇಶ 32.35 ಚ.ಕಿ.ಮೀ. ಎಂದು ಉಲ್ಲೇಖಿಸಲಾಗಿದೆ. ಉದ್ದೇಶಿತ ಬೋಗಾದಿ ಪಪಂ ಪ್ರದೇಶದ ಚಕ್ಕುಬಂದಿ ಇಂತಿದ್ದು, ಉತ್ತರ ದಿಕ್ಕಿನ ಕೆ.ಹೆಮ್ಮನಹಳ್ಳಿ ಸೇರ್ವ ನಂ.263, 253, 260, 262, 178, 179, 186, 254, 187, 208, 216, 217, 218, 15, 16, 17, 19, 20, 21, 23, 24, 25, 26, 31, 33, ಮಡಗಳ್ಳಿ ಸರ್ವೇ ನಂ. 122, 123, 126, 127, 128, 16, 17, ಬಸವನ ಹಳ್ಳಿ ಸೇರ್ವ ನಂ. 11, 12, 10, 8, 1, 128, 127, 126, 125, 123, 122, ಪಶ್ಚಿಮ ದಿಕ್ಕಿನ ಬಸವನಹಳ್ಳಿ ಸೇರ್ವ ನಂ. 121, 114, 113, 111, 110, 109, 108, 107, 106, 105, 100, 99, 98, ಬೋಗಾದಿ ಸರ್ವೇ ನಂ. 92, 93, 94, 97, 98, 103, 104, 105, 120, 124, 130, 131, 132, 133, 134, 138, 139, 140, 143, 144, 145, 146, 147, 160, 161, 167, 169, 172, 173, 238, 266, 268, 269 ಒಳಗೊಂಡಂತೆ ಒಳ ಬರುವ ಪ್ರದೇಶ ಬರಲಿವೆ.
ದಕ್ಷಿಣ ದಿಕ್ಕಿನ ಕೇರ್ಗಳ್ಳಿ ಸೇರ್ವ ನಂ. 54, 55, 56, 57, 58, 59, 284, 271, 285, 280, 279, 278, 276, 275, 274, 116, 113, 119, 155, 156, 157, 161, 162, 163, 164, 165, 174, 175, 183, 176, 181, 180, 177, 178, 179 ಒಳಗೊಂಡ ಪ್ರದೇಶ ಬರಲಿವೆ. ಪೂರ್ವದ ಕೆಮ್ಮಣಪುರ ಸೇರ್ವ ನಂ. 53, 54, 55, 1, 51, 2, 3, 4, 6, 7 ಒಳಗೊಂಡ ಪ್ರದೇಶ ಬರಲಿವೆ. ಮರಟಿಕ್ಯಾತನಹಳ್ಳಿ ಸೇರ್ವ 160, 170, 171, 172, ಕೆ.ಹೆಮ್ಮನಹಳ್ಳಿ ಸರ್ವೇ ನಂ. 226, 227, 136, 140, 141, 142, 145, 146, 148, 149, 150, 239, 232, 152, 153, 154, 157, 158, 159, 160, 161, 170, 173, 258, 257, 174, 175, 176 ಒಳಗೊಂಡ ಪ್ರದೇಶ ಬರಲಿವೆ.

ಶ್ರೀರಾಂಪುರ ಪಟ್ಟಣ ಪಂಚಾಯಿತಿ: ಮೈಸೂರು ತಾಲೂಕಿನ ಶ್ರೀರಾಂ ಪುರ ಗ್ರಾಪಂನ ಶ್ರೀರಾಂಪುರ, ಲಿಂಗಾಬುದಿಪಾಳ್ಯ, ಗುರೂರು, ಕೊಪ್ಪ ಲೂರು, ಕಳಲವಾಡಿ ಗ್ರಾಮಗಳನ್ನು ಒಳಗೊಂಡ ಗ್ರಾಪಂ ಪ್ರದೇಶವನ್ನು `ಶ್ರೀರಾಂಪುರ ಪರಿವರ್ತನಾ ಪ್ರದೇಶ’ವೆಂದು ಘೋಷಿಸಿ, `ಶ್ರೀರಾಂಪುರ ಪಟ್ಟಣ ಪಂಚಾಯಿತಿ’ ಆಗಿ ಪರಿವರ್ತಿಸಲಾಗಿದೆ. ಇದರ ಒಟ್ಟು ಪ್ರದೇಶ 17.99 ಚ.ಕಿ.ಮೀ. ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಉದ್ದೇಶಿತ ಶ್ರೀರಾಂಪುರ ಪಪಂ ಪ್ರದೇಶದ ಚಕ್ಕುಬಂದಿ ಇಂತಿದ್ದು, ಉತ್ತರ ದಿಕ್ಕಿನ ಲಿಂಗಾಂಬುದಿ ಸರ್ವೇ ನಂ. 1, 4, 5, 6, 7, 10, 12, 23, 24, ಶ್ರೀರಾಂಪುರ ಸರ್ವೇ ನಂ. 34, 35, 36, 37, 99, 100, 101, 102, ಪೂರ್ವ ಶ್ರೀರಾಂಪುರ ಸರ್ವೇ ನಂ. 102, 103, 117, 117, 121, 122, 145, 146, 147, 181, ಕೊಪ್ಪಲೂರು ಸರ್ವೇ ನಂ. 37, 36, 39, 11, 12, 15, 16, 19, 20, 27, 28, 32, 59, ಗುರೂರು ಸರ್ವೇ ನಂ.105, 27, 28, 30, 40, 38, ಕಳಲವಾಡಿ ಸರ್ವೇ ನಂ. 43, 46, ದಕ್ಷಿಣಕ್ಕೆ ಕಳಲವಾಡಿ ಸರ್ವೇ ನಂ. 46, 47, 48, 133, 135, 136, 138, 139, ಪಶ್ಚಿಮಕ್ಕೆ ಲಿಂಗಾಂಬುಧಿ ಸರ್ವೇ ನಂ. 1, 2, 65, 74, 75, 117, 118, 119, ಶ್ರೀರಾಂಪುರ ಸರ್ವೇ ನಂ. 213, 212, 209, 208, ಗುರೂರು ಸರ್ವೇ ನಂ.79. 78, 83, ಕಳಲವಾಡಿ ಸರ್ವೇ ನಂ. 22, 20, 18, 17, 15, 179, 178, 187, 188, 189, 180 ಒಳಗೊಂಡಿವೆ.

ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ: ಮೈಸೂರು ತಾಲೂಕಿನ ರಮ್ಮನ ಹಳ್ಳಿ ಗ್ರಾಪಂ, ಆಲನಹಳ್ಳಿ ಗ್ರಾಪಂನ ನಾಡನಹಳ್ಳಿ, ಆಲನಹಳ್ಳಿ (ವರ್ತುಲ ರಸ್ತೆಯ ಹೊರಗಡೆ) ಮತ್ತು ಹಂಚ್ಯಾ ಗ್ರಾಪಂನ ಹಂಚ್ಯಾ, ಸಾತಗಳ್ಳಿ ಗ್ರಾಮಗಳು ಒಳಗೊಂಡ ಗ್ರಾಮ ಪಂಚಾಯಿತಿ ಪ್ರದೇಶವನ್ನು `ರಮ್ಮನ ಹಳ್ಳಿ ಪರಿವರ್ತನಾ ಪ್ರದೇಶ’ ಎಂದು ಘೋಷಿಸಿ, `ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ’ ಆಗಿ ಪರಿವರ್ತಿಸಲಾಗಿದೆ. ಇದರ ಒಟ್ಟು ವಿಸ್ತೀರ್ಣ 22.81 ಚ.ಕಿ.ಮೀ. ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಉದ್ದೇಶಿತ ರಮ್ಮನಹಳ್ಳಿ ಪಪಂ ಪ್ರದೇಶದ ಚಕ್ಕುಬಂದಿ ಇಂತಿದ್ದು, ಉತ್ತರಕ್ಕೆ ರಮ್ಮನಹಳ್ಳಿ ಸರ್ವೇ ನಂ. 195, 204, 205, 209, 211, 224, 225, 226, 229 ,230, 231, 283, 285, 293, 294, 295, ಪೂರ್ವ ದಿಕ್ಕಿನ ರಮ್ಮನಹಳ್ಳಿ ಸರ್ವೇ ನಂ.295, 17, 30, 31, 32, 34, 35, 36, 39, ಹಂಚ್ಯಾ ಸರ್ವೇ ನಂ.40, 41, 42, 339, 341, 48, 48, 43, 47, 48, 368, 347, 349, 350, 45, 373, 372, 70, 353, 359, ನಾಡನಹಳ್ಳಿ ಸರ್ವೇ ನಂ. 37, 38, 41, 43, 44, 52, 51, 54, 55, 58, 63, 65, 66, 67, 79, 80, 81, 85, 86, 87, ದಕ್ಷಿಣ ನಾಡನ ಹಳ್ಳಿ ಸರ್ವೇ ನಂ.88, 93, 94, 97, 98, 99, 103, 105, ಆಲನ ಹಳ್ಳಿ ಸರ್ವೇ ನಂ.30, 31, 41. ಪಶ್ಚಿಮ ಆಲನಹಳ್ಳಿ ಸರ್ವೇ ನಂ. 42, 44, 47, 58, 59, ಸಾತಗಳ್ಳಿ ಸರ್ವೇ ನಂ. 57, 56, 55, 54, 53, 50, 49,48, 38, 37, 36, 29, 28, 275, 277, 276, ರಮ್ಮನಹಳ್ಳಿ ಸರ್ವೇ ನಂ. 87, 188, 192, 194, 195 ಒಳಗೊಂಡಿವೆ.

ಕಡಕೊಳ ಪಟ್ಟಣ ಪಂಚಾಯಿತಿ: ಮೈಸೂರು ತಾಲೂಕಿನ ಕಡಕೊಳ ಗ್ರಾಪಂನ ಕಡಕೊಳ, ಮಂಡಕಳ್ಳಿ, ಹೊಸಹುಂಡಿ ಗ್ರಾಪಂನ ಬಂಡಿಪಾಳ್ಯ, ಗುಡುಮಾದನಹಳ್ಳಿ, ಎಸ್.ಉತ್ತನಹಳ್ಳಿ, ಹೊಸಹುಂಡಿ ಮತ್ತು ದೇವಲಾ ಪುರ ಗ್ರಾಪಂನ ಮರಸೆ, ಮದರಗಳ್ಳಿ ಗ್ರಾಮಗಳನ್ನು ಒಳಗೊಂಡ ಗ್ರಾಮ ಪಂಚಾಯಿತಿ ಪ್ರದೇಶವನ್ನು `ಕಡಕೊಳ ಪರಿವರ್ತನಾ ಪ್ರದೇಶ’ವೆಂದು ಘೋಷಿಸಿ, `ಕಡಕೊಳ ಪಟ್ಟಣ ಪಂಚಾಯಿತಿ’ ಆಗಿ ಪರಿವರ್ತಿಸಲಾಗಿದೆ. ಕೆಎಂ ಹುಂಡಿ, ಕೆಎನ್ ಹುಂಡಿ, ಗೆಜ್ಜಗಳ್ಳಿ, ಏಳಿಗೆಹುಂಡಿ, ಗ್ರಾಮಗಳೂ ಈ ಪಪಂಗೆ ಸೇರ್ಪಡೆಯಾಗಿವೆ. ಇದರ ಒಟ್ಟು ವಿಸ್ತೀರ್ಣ 34.71 ಚ.ಕಿ.ಮೀ. ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಉದ್ದೇಶಿತ ಕಡಕೊಳ ಪಪಂ ಪ್ರದೇಶದ ಚಕ್ಕುಬಂದಿ ಇಂತಿದ್ದು, ಉತ್ತರ ದಿಕ್ಕಿನ ಬಂಡಿಪಾಳ್ಯ ಸರ್ವೇ ನಂ.111, 112, 113, 114, 115, 121, 122, 123, 125, 5, 6, 4, 7, 11, 19, ಹೊಸಹುಂಡಿ ಸರ್ವೇ ನಂ.44, ಉತ್ತನ ಹಳ್ಳಿ ಸರ್ವೇ ನಂ.22, 208, 63, 65, 82, 83, 106, 107, 108, 117, 118, 119, 120, 121, 122, 123, 124, 126, 127, ಪೂರ್ವದ ಉತ್ತನಹಳ್ಳಿ ಸರ್ವೇ ನಂ.128, 129, 131, 139, 140, 141, 142, 147, 150, 158, 160, 167, 169, 170, 171, 172, 200, 201, ಬಂಡಿಪಾಳ್ಯ ಸರ್ವೇ ನಂ.56, 57, 58, 60, 61,75, ಹೊಸಹುಂಡಿ ಸರ್ವೇ ನಂ.18, 17, ಗುಡುಮಾದನಹಳ್ಳಿ ಸರ್ವೇ ನಂ.27, 28, 29, 32, 33, 34, 36, 40 ಮರಸೆ ಸರ್ವೇ ನಂ.32, 33, 43, 46, 62, 63, 64, 66, 67, 68, ಮದಗರಳ್ಳಿ ಸರ್ವೇ ನಂ.63, 64, 65, 66, 67, 104, 105, 115, 116, ಕಡಕೊಳ ಸರ್ವೇ ನಂ.142, 143, 146, 150, 151, 153, 156, 157, 163, 212, 213, 214, 215, 216, 217, 218, 219, 220, 221, 222, 223, 224, 225, 226, 228, 229, ದಕ್ಷಿಣ ಕಡಕೊಳ ಸರ್ವೇ ನಂ. 229, 230, 233, 234, 235, 237, 238, 239, 242, 243, 244, 301, 306, 307, 308, 333, 334, 337, 338, 339, 340, 359, 360, 371, 373, ಪಶ್ಚಿಮ ಕಡಕೊಳ ಸರ್ವೇ ನಂ. 373, 374, 376, 377, 379, 31, 32, 58, 59, 67, 68, ಮದರಗಳ್ಳಿ ಸರ್ವೇ ನಂ.19, 18, 17, 16, 06, 03, 04, 02, 01, ಮರಸೆ ಸರ್ವೇ ನಂ.105, 104, ಮಂಡಕಳ್ಳಿ ಸರ್ವೇ ನಂ.155, 156, 160, 161, 164, 165, 188, 180, 190, 191, 195, 197, 216, 217, 218, 227, 307, 303 ಒಳಗೊಂಡಿವೆ.
.