ಪದವೀಧರ ಶಿಕ್ಷಕರ ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷರಾಗಿ ಶಿವಸ್ವಾಮಿ, ಉಪಾಧ್ಯಕ್ಷರಾಗಿ ವೆಂಕಟೇಶ್
ಮಂಡ್ಯ

ಪದವೀಧರ ಶಿಕ್ಷಕರ ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷರಾಗಿ ಶಿವಸ್ವಾಮಿ, ಉಪಾಧ್ಯಕ್ಷರಾಗಿ ವೆಂಕಟೇಶ್

November 12, 2020

ನಾಗಮಂಗಲ, ನ.11(ಮಹೇಶ್)- ಕಳೆದ ವಾರ ಅಸ್ತಿತ್ವಕ್ಕೆ ಬಂದ ನಾಗಮಂಗಲ ತಾಲೂಕಿನ ಪದವೀಧರ ಶಿಕ್ಷಕರ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಸ್ವಾಮಿ ಅವಿರೋಧವಾಗಿ ಆಯ್ಕೆಯಾ ದರು, ಇಂದು ನಡೆದ ಚುನಾವಣೆಯಲ್ಲಿ ಅ ಸ್ಥಾನಕ್ಕೆ ಶಿವಸ್ವಾಮಿ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾ ವಣಾಧಿಕಾರಿ ಸಂತೋಷ್ ಅವರು ಶಿವಸ್ವಾಮಿ ಮತ್ತು ವೆಂಕಟೇಶ್ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ ದರು. ಫಲಿತಾಂಶ ಘೋಷಿಸುತ್ತಿದ್ದಂತೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಜೆ. ಕುಮಾರ್, ಶಿವಣ್ಣ ಇಬ್ಬರನ್ನು ಅಭಿನಂ ದಿಸಿದರು. ನಂತರ ಮಾತನಾಡಿದ ಅಧ್ಯಕ್ಷ ಶಿವಸ್ವಾಮಿ ನಮ್ಮ ಪತ್ತಿನ ಸಹಕಾರ ಸಂಘ ಈಗ ತಾನೆ ಅಸ್ತಿತ್ವಕ್ಕೆ ಬಂದಿದೆ. ನಮ್ಮ ಸಹ ಕಾರ ಸಂಘದಲ್ಲಿ 170 ಶಿಕ್ಷಕರು ಷೇರುದಾ ರರಾಗಿದ್ದು, ಅವರೆಲ್ಲರ ಸಹಕಾರ ದಿಂದ 13 ನಿರ್ದೇಶಕರನ್ನು ಸಹ ಅವಿರೋಧ ವಾಗಿ ಆಯ್ಕೆ ಮಾಡಲಾಗಿದೆ. ಅವರೆಲ್ಲರ ಹಿತ ಕಾಯಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಜೊತೆಗೆ ಸರ್ಕಾರ ದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಹೇಳಿದರು. ನಂತರ ನಿರ್ದೆಶಕರು ಶಿವಸ್ವಾಮಿ ಅವರನ್ನು ಅಭಿನಂದಿಸಿದರು. ನಿರ್ದೇಶಕರುಗಳಾದ ಶಿವಣ್ಣ, ಸೋಮಶೇಖರ್, ವೆಂಕಟೇಶ್, ಗೊರಪ್ಪ, ವರಲಕ್ಷ್ಮಿ, ವಿಜಯಲಕ್ಷ್ಮಿ, ಪ್ರಶಾಂತ್, ದಯಾನಂದ್, ಮಹೇಶ್ ಕುಮಾರ್, ಸತೀಶ್ ಇತರÀರಿದ್ದರು.