ಪ್ರವಾಹದಿಂದ ಮನೆ ಕಳೆದುಕೊಂಡ ಕಪಿಲಾ ನದಿ ತೀರದ ನಿವಾಸಿಯಿಂದ ಸಿಎಂಗೆ ಕೃತಜ್ಞತೆ
ಮೈಸೂರು

ಪ್ರವಾಹದಿಂದ ಮನೆ ಕಳೆದುಕೊಂಡ ಕಪಿಲಾ ನದಿ ತೀರದ ನಿವಾಸಿಯಿಂದ ಸಿಎಂಗೆ ಕೃತಜ್ಞತೆ

July 28, 2020

ಮೈಸೂರು, ಜು.27(ಪಿಎಂ)- ಕಳೆದ ವರ್ಷ ಉಂಟಾದ ಪ್ರವಾಹದಿಂದ ನಂಜನಗೂಡು ಕಪಿಲಾ ನದಿ ತೀರದಲ್ಲಿ ಮನೆ ಕಳೆದುಕೊಂಡಿದ್ದ ಎನ್.ಸಿ.ಬಸವಣ್ಣ ಸರ್ಕಾರದ ಪರಿಹಾರ ಧನದಿಂದ ಮನೆ ಕಟ್ಟಿಕೊಳ್ಳುತ್ತಿರುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದು ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸಿದರು.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ರಾಜ್ಯ ಬಿಜೆಪಿ ಸರ್ಕಾರ ವರ್ಷ ಪೂರೈಸಿರುವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ `ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ’ ಕಾರ್ಯಕ್ರಮದಲ್ಲಿ ಮೈಸೂರು ಜಿಪಂ ಸಭಾಂಗಣದಿಂದ ಆನ್ ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಬಸವಣ್ಣ ಮುಖ್ಯಮಂತ್ರಿಗಳು ಹಾಗೂ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸಿದರು.

ಸಿಎಂ ಅವರೊಂದಿಗೆ ಮಾತನಾಡಿದ ಬಸವಣ್ಣ, ಪ್ರವಾಹದಿಂದ ಕಪಿಲಾ ನದಿ ತೀರದಲ್ಲಿ ನಮ್ಮ ಮನೆ ಹಾನಿಗೊಳಗಾ ಯಿತು. ತಾಲೂಕು ಮತ್ತು ಜಿಲ್ಲಾಡಳಿತ ನಮ್ಮ ಕುಟುಂಬಕ್ಕೆ ಪುನರ್ ವಸತಿ ಕಲ್ಪಿಸಿ ದ್ದಾರೆ. ಎರಡು ಕಂತುಗಳಲ್ಲಿ ಸರ್ಕಾರ ದಿಂದ ಪರಿಹಾರ ಧನ ಪಡೆದು ಮನೆ ಕಟ್ಟಿಕೊಳ್ಳುತ್ತಿರುವುದಾಗಿ ತಿಳಿಸಿದರು. ಈ ವೇಳೆಗೆ ತಾಂತ್ರಿಕ ದೋಷ ಉಂಟಾಗಿ ಸಂಪರ್ಕ ಕಡಿತವಾಯಿತು. ಹೀಗಾಗಿ ಸಿಎಂ ಅವರು ಪ್ರತಿಕ್ರಿಯೆ ನೀಡಲು ಸಾಧ್ಯವಾಗ ಲಿಲ್ಲ. ಸಂಪರ್ಕ ಸಾಧಿಸುವುದರೊಳಗೆ ಮುಖ್ಯಮಂತ್ರಿಗಳು ಮತ್ತೊಂದು ಜಿಲ್ಲೆಯ ಫಲಾನುಭವಿಯೊಂದಿಗೆ ಸಂವಾದ ನಡೆಸುತ್ತಿದ್ದರು. ಮುಖ್ಯಮಂತ್ರಿಗಳು ಭಾಷಣ ಮಾಡುವ ಸಂದರ್ಭದಲ್ಲೂ ಎರಡು ಮೂರು ಬಾರಿ ತಾಂತ್ರಿಕ ದೋಷ ಉಂಟಾಗಿ ಸಂಪರ್ಕ ಕಡಿತವಾಗಿತ್ತು.

ಸರ್ಕಾರದಿಂದ ವಿವಿಧ ರೀತಿಯಲ್ಲಿ ನೆರವು ಪಡೆದಿರುವ ಫಲಾನುಭವಿಗಳಾದ ವಿಜಯಪುರ ಜಿಲ್ಲೆಯ ಪದ್ಮಶ್ರೀ, ಬೆಳಗಾವಿ ಜಿಲ್ಲೆಯ ಪವಿತ್ರಾ, ಚಿತ್ರದುರ್ಗ ಜಿಲ್ಲೆ ವಸಂತಮ್ಮ, ತುಮಕೂರು ಜಿಲ್ಲೆಯ ಕಲಾ ವತಿ, ಹಾವೇರಿ ಜಿಲ್ಲೆಯ ಜ್ಯೋತಿ ಸೇರಿ ದಂತೆ ಮತ್ತಿತರರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕೃತಜ್ಞತೆ ಅರ್ಪಿಸಿದರು.

ಮೈಸೂರು ಜಿಪಂ ಸಭಾಂಗಣದಲ್ಲೂ `ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ’ ಸಂಚಿಕೆ ಬಿಡುಗಡೆ ಮಾಡಲಾಯಿತು. ಮೈಸೂರು ಜಿಪಂ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್, ಮಾಜಿ ಸಚಿವರೂ ಆದ ವಿಧಾನ ಪರಿ ಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಶಾಸಕ ರಾದ ಎಲ್.ನಾಗೇಂದ್ರ, ಹರ್ಷವಧನ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಜಿಪಂ ಸಿಇಓ ಪ್ರಶಾಂತ್‍ಕುಮಾರ್ ಮಿಶ್ರಾ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕ ಟೇಶ್ ಮತ್ತಿತರರು ಹಾಜರಿದ್ದರು.

Translate »