ಮಗುವಿನೊಂದಿಗೆ ಮೇ ೯ರಂದು ರಾಯಚೂರಿನಿಂದ ಮೈಸೂರಿನ ಲಷ್ಕರ್ ಠಾಣೆಗೆ ಬಂದಿದ್ದ ರಘು
ಮೈಸೂರು, ಮೇ ೨೩- ರಾಯ ಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ, ಯುವಕನ ಕೈಗೆ ಮಗು ಕೊಟ್ಟು ನಾಪತ್ತೆ ಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಗೆ ಅಡ್ಡಿಯಾಗಿದ್ದ ಮಗು ವನ್ನು ಅನಾಥ ಎಂದು ಬಿಂಬಿಸುವ ಸಲುವಾಗಿ ಮೈಸೂರಿಗೆ ಮಗುವನ್ನು ತಂದ ಯುವಕ ಮತ್ತು ಆತನ ಪ್ರೇಯ ಸಿಯ ನಾಟಕ ಬಯಲಾಗಿದೆ.
ಯಾದಗಿರಿ ತಾಲೂಕು ಠಾಣಾ ಗುಂದಿ ಗ್ರಾಮದ ಪೈಂಟರ್ ಯೇಸುರಾಜ್ ಎಂಬುವರ ಪತ್ನಿ ರೇಣುಕಾ ಅಲಿಯಾಸ್ ಮಮತಾ (೨೧) ಮತ್ತು ಹೆಚ್.ಡಿ.ಕೋಟೆ ತಾಲೂಕು ನೂರಲಕುಪ್ಪೆ ಗ್ರಾಮದ ಬಿ.ರಘು (೨೧) ಸುಮಾರು ಒಂದೂವರೆ ವರ್ಷದ ಹಿಂದೆ ಇನ್ಸಾ÷್ಟಗ್ರಾಮ್‌ನಲ್ಲಿ ಪರಿ ಚಯವಾಗಿ ಒಬ್ಬರಿಗೊಬ್ಬರು ಪ್ರೀತಿಸಲಾ ರಂಭಿಸಿದ್ದಾರೆ ಎಂದು ಹೇಳಲಾಗಿದೆ. ಕಳೆದ ೮ ತಿಂಗಳ ಹಿಂದೆ ರೇಣುಕಾಗೆ ಗಂಡು ಮಗು ಜನಿಸಿದ್ದು, ಈ ಮಗುವನ್ನು ತ್ಯಜಿಸಿ ತಾವಿಬ್ಬರೂ ಪ್ರತ್ಯೇಕವಾಗಿ ಜೀವಿ ಸಬೇಕೆಂಬ ಉದ್ದೇಶದಿಂದ ಮಗುವನ್ನು ಅನಾಥ ಮಾಡಲು ಈ ಪ್ರೇಮಿಗಳು ನಿರ್ಧರಿಸಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಇವರ ಸಂಚಿನAತೆ ಕಳೆದ ಮೇ ೮ರಂದು ಕಾರ್ಯನಿಮಿತ್ತ ತಾನು ರಾಯಚೂರಿಗೆ ತೆರಳಿದ್ದು, ಮೈಸೂರಿಗೆ ಹಿಂದಿರುಗಲು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಮಹಿಳೆ ಯೋರ್ವಳು ಮಗುವನ್ನು ತನ್ನ ಕೈಗಿತ್ತು, ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೋದವಳು ೨-೩ ಗಂಟೆ ಕಾದರೂ ಹಿಂದಿರುಗಲಿಲ್ಲ. ಹೀಗಾಗಿ ತಾನು ಮೈಸೂರಿಗೆ ಮಗುವನ್ನು ತಂದಿರುವುದಾಗಿ ಹೆಚ್.ಡಿ.ಕೋಟೆ ತಾಲೂಕಿನ ರಘು ಮೇ ೯ರಂದು ಲಷ್ಕರ್ ಪೊಲೀಸ್ ಠಾಣೆಗೆ ಮಗುವನ್ನು ಒಪ್ಪಿಸಿದ್ದ. ಈ ಮಗುವಿನ ಪೋಷಣೆ ಮತ್ತು ರಕ್ಷಣೆಗಾಗಿ ಲಷ್ಕರ್ ಠಾಣೆ ಪೊಲೀಸರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದು, ಮಂಡ್ಯದ ಕ್ಯಾತಂಗೆರೆಯಲ್ಲಿರುವ ವಿಶೇಷ ದತ್ತು ಕೇಂದ್ರವಾದ ವಿಕಸನ ಜೋಗುಳ ದತ್ತು ಸೇವಾ ಸಂಸ್ಥೆಯಲ್ಲಿ ಮಗುವನ್ನು ಪೋಷಿಸಲಾಗುತ್ತಿತ್ತು. ಮೇ ೧೧ರಂದು ಸದರಿ ಸೇವಾಕೇಂದ್ರದ ಘಟಕಾಧಿಕಾರಿ ಶ್ರೀಮತಿ ಎನ್.ಅಪೇಕ್ಷಿತಾ, ಮಗುವನ್ನು ತ್ಯಜಿಸಿ, ಅದನ್ನು ನಿರಾಶ್ರಿತರನ್ನಾಗಿ ಮಾಡಿದ ಮಗುವಿನ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ ಮೇರೆಗೆ ಲಷ್ಕರ್ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆ ೩೧೭ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಅದೇ ವೇಳೆ ಯಾದಗಿರಿಯ ಯೇಸುರಾಜ್ ಅವರು ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ತನ್ನ ಪತ್ನಿ ಮತ್ತು ಮಗು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಆ ಮಾಹಿತಿ ಪಡೆದು ಲಷ್ಕರ್ ಠಾಣೆ ಪೊಲೀಸರು ತನಿಖೆ ನಡೆಸಿ ದಾಗ ಪ್ರೇಮಿಗಳು ಆಡಿದ ಕಳ್ಳಾಟ ಬಯಲಾಗಿದ್ದು, ಮಗುವಿನ ತಾಯಿ ರೇಣುಕಾ ಅಲಿಯಾಸ್ ಮಮತಾ ಮತ್ತು ಮಗುವನ್ನು ಠಾಣೆಗೆ ತಂದು ಬಿಟ್ಟಿದ್ದ ಆಕೆಯ ಪ್ರಿಯಕರ ಬಿ. ರಘು ಅವರಿಗೆ ಸಿಆರ್‌ಪಿಸಿ ಕಲಂ ೪೧ಎ ಪ್ರಕಾರ ನೋಟೀಸ್ ಜಾರಿ ಮಾಡಿ ವಿಚಾ ರಣೆ ನಡೆಸಿದ ನಂತರ ಬಾಂಡ್ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.