ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ದಿನಸಿ ವಿತರಣೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ದಿನಸಿ ವಿತರಣೆ

April 5, 2020

ಮೈಸೂರು,ಏ.4-ಲಾಕ್‍ಡೌನ್ ಪರಿ ಣಾಮ ಸಂಕಷ್ಟಕ್ಕೆ ಸಿಲುಕಿರುವ ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನ ಬಡ ಜನರನ್ನು ಗುರುತಿಸಿ ಬಿಜೆಪಿ ಕ್ಷೇತ್ರ ಸಮಿತಿ ಯಿಂದ ದಿನಸಿ ಪದಾರ್ಥಗಳ ಕಿಟ್ ಗಳನ್ನು ಶನಿವಾರ ವಿತರಿಸಲಾಯಿತು.
ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಕಷ್ಟದಲ್ಲಿದ್ದ ಕೂಲಿ ಕಾರ್ಮಿಕರು, ಮನೆ ಗೆಲಸದವರು, ದಿನಗೂಲಿ ಕಾರ್ಮಿಕರನ್ನು ಗುರುತಿಸಿ ನಿತ್ಯ ಬಳಕೆಯ ದಿನಸಿ ಪದಾರ್ಥಗಳ ಕಿಟ್ ವಿತರಿಸಲಾಯಿತು.

ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ.ಎಂ.ರಘು, ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ರಾಜ ಮಣಿ, ಉಪಾಧ್ಯಕ್ಷ ಹೆಚ್.ಎಸ್.ಸಿದ್ದೇಶ್, ಅಲ್ಪಸಂಖ್ಯಾತರ ಮೋರ್ಚಾ ಕ್ಷೇತ್ರಾಧ್ಯಕ್ಷ ಸ್ಟೀಫನ್ ಸುಜಿತ್, ಕಾರ್ಯದರ್ಶಿ ಬಿ.ಸಿ. ಶಶಿಕಾಂತ್, ಮಹಿಳಾ ಮೋರ್ಚಾ ಕ್ಷೇತ್ರ ಅಧ್ಯಕ್ಷೆ ಶುಭಶ್ರೀ, ಯುವ ಮೋರ್ಚಾ ಕ್ಷೇತ್ರ ಅಧ್ಯಕ್ಷ ರಾಕೇಶ್ ಭಟ್, ಮುಖಂಡ ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.

Translate »