ಸಾಂಸ್ಕೃತಿಕ ನಗರಿಯಲ್ಲಿ ಇಲ್ಲ ‘ಲಾಕ್‍ಡೌನ್’ ವಾತಾವರಣ
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ಇಲ್ಲ ‘ಲಾಕ್‍ಡೌನ್’ ವಾತಾವರಣ

April 5, 2020

ಮೈಸೂರು, ಏ.4(ಎಂಕೆ)- ಮೈಸೂರಿನಲ್ಲಿ ‘ಲಾಕ್‍ಡೌನ್’ನ ವಾತಾವರಣವೇ ಇಲ್ಲದೇ ಎಂದಿನಂತೆ ಜನರ ತಿರುಗಾಟವಿರುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ವಿಶ್ವದೆಲ್ಲೆಡೆ ತಲ್ಲಣ ಸೃಷ್ಟಿಸಿರುವ ಕಿಲ್ಲರ್ ಕೊರೊನೊ ಸೋಂಕನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ನಗರದ ಹಲವು ಬಡಾವಣೆಗಳಲ್ಲಿ ಹಬ್ಬದ ಆಚರಣೆ ವಾತಾವರಣವಿದೆ. ಜನರು ಪ್ರವಾ ಸಕ್ಕೆ ಬಂದವರಂತೆ ಲಾಕ್‍ಡೌನ್ ನಿಯಮ ಗಳನ್ನು ಗಾಳಿಗೆ ತೂರಿ ವರ್ತಿಸುತ್ತಿದ್ದಾರೆ. ಹಾಲು, ಮಾಂಸ, ಹಣ್ಣು-ತರಕಾರಿ ಸೇರಿ ದಂತೆ ಅಗತ್ಯ ವಸ್ತುಗಳ ಖರೀದಿಗೆ ಅನಿಯಮಿತ ಸಮಯಾವಕಾಶ ನೀಡಿ ರುವುದೇ ಜನರು ಎಲ್ಲೆಂದರಲ್ಲಿ ಅಡ್ಡಾಡು ವುದಕ್ಕೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಕೊರೊನಾ ಸೋಂಕು ಪೀಡಿತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇದೇ ರೀತಿ ಸಾರ್ವ ಜನಿಕರು ದಿಕ್ಕೆಟ್ಟಂತೆ ಅಲೆದಾಡುತ್ತಿದ್ದರೆ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿಯುವುದರಲ್ಲಿ ಯಾವುದೇ ಅನುಮಾನ ವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಉದಯಗಿರಿ, ರಾಜೀವ್‍ನಗರ, ಶಾಂತಿ ನಗರ, ಗಾಯತ್ರಿಪುರಂ, ಗೌಸಿಯಾನಗರ, ಕ್ಯಾತಮಾರನಹಳ್ಳಿ, ರಾಘವೇಂದ್ರನಗರ ಕುವೆಂಪುನಗರ, ಶಾರದಾದೇವಿನಗರ, ಇಂದಿರಾನಗರ, ಮಾನಂದವಾಡಿ ರಸ್ತೆ, ಸರಸ್ವತಿಪುರಂ ಸೇರಿದಂತೆ ನಗರದ ಹಲ ವೆಡೆ ಲಾಕ್‍ಡೌನ್ ವಾತಾವರಣವೇ ಇಲ್ಲ ದಂತಾಗಿದೆ. ಸಾಮಾನ್ಯ ದಿನಗಳಂತೆ ಜನರು ಅಡ್ಡಾಡುತ್ತಿದ್ದು, ಮತ್ತಷ್ಟು ಅಪಾ ಯಕ್ಕೆ ಆಹ್ವಾನ ನೀಡುತ್ತಿದ್ದಾರೆ ಎಂದು ಪ್ರಜ್ಞಾವಂತರು ದೂರಿದರು.

ವಾರದಲ್ಲಿ 3 ದಿನ ಅವಕಾಶ: ಕೇವಲ ಒಂದೇ ಒಂದು ಕೊರೊನಾ ಪ್ರಕರಣ ವಿರುವ ನೆರೆಯ ಕೊಡಗು ಜಿಲ್ಲೆಯಲ್ಲಿ ವೈದ್ಯ ಕೀಯ ಚಿಕಿತ್ಸೆ ಹೊರತುಪಡಿಸಿ ಅಗತ್ಯ ವಸ್ತುಗಳ ಖರೀದಿಗೆ ವಾರದಲ್ಲಿ 3 ದಿನ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೆ ಬೆಳಿಗ್ಗೆ 6ರಿಂದ 12 ಗಂಟೆವರೆಗೆ ಸಮಯ ನಿಗದಿ ಮಾಡಲಾಗಿದ್ದು, ಬೇರೆ ಸಮಯದಲ್ಲಿ ಮನೆಯಿಂದ ಹೊರಬರದಂತೆ ನೋಡಿ ಕೊಳ್ಳಲಾಗುತ್ತಿದೆ. ಆದರೆ 28 ಕೊರೊನಾ ಪ್ರಕರಣವಿರುವ ಮೈಸೂರಿನಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಅನಿಯಮಿತ ಅವಕಾಶ ನೀಡಿರು ವುದು ಜನರ ಬೇಜವಾಬ್ದಾರಿ ವರ್ತನೆಗೆ ಕಾರಣವಾಗಿದೆ ಎಂದು ‘ಮೈಸೂರು ಮಿತ್ರ’ ನಿಗೆ ಹಲವರು ಪ್ರತಿಕ್ರಿಯಿಸಿದ್ದಾರೆ.

ವಾರದ ಎಲ್ಲಾ ದಿನವೂ ಬೆಳಿಗ್ಗೆಯಿಂದ ಸಂಜೆವರೆಗೂ ಅಗತ್ಯ ವಸ್ತುಗಳು ದೊರ ಕುತ್ತದೆ ಎಂಬುದರಿಂದ ಜನರು ಆಗಾಗ್ಗೆ ಹೊರ ಬರಲು ಮುಂದಾಗುತ್ತಾರೆ. ವೈದ್ಯಕೀಯ ಸೇವೆ, ಮೆಡಿಕಲ್‍ಗಳನ್ನು ಹೊರತುಪಡಿಸಿ ಇನ್ನಿತರೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ವನ್ನು ನಿಗದಿಪಡಿಸಬೇಕು. ಇದರಿಂದ ಜನರು ಮನೆಯಿಂದ ಹೊರ ಬರುವುದರನ್ನು ತಡೆಯಬಹುದು ಎಂದು ತಿಳಿಸಿದ್ದಾರೆ.

ರಸ್ತೆ ಬದಿ ವ್ಯಾಪಾರಿಗಳಿಗೂ ಅನುಕೂಲ: ಜನರು ಬರುತ್ತಾರೆ ಎಂದು ರಸ್ತೆ ಬದಿಯಲ್ಲಿ ಗೂಡ್ಸ್ ಆಟೋ, ತಳ್ಳುವ ಗಾಡಿಗಳಲ್ಲಿ ಹಣ್ಣು-ತರಕಾರಿ ಅಂಗಡಿಗಳು ತೆರೆದು ದಿನಪೂರ್ತಿ ನಿಂತರೂ ವ್ಯಾಪಾರ ಅಷ್ಟ ಕಷ್ಟೆ. ಇದರ ಬದಲು ಮಾರಾಟ ಮತ್ತು ಖರೀದಿಗೆ ಸಮಯ ನಿಗದಿಯಾಗದರೆ ಏಕಕಾಲದಲ್ಲಿ ಜನರು ಬಂದು ಕೊಂಡು ಕೊಳ್ಳುತ್ತಾರೆ. ಇನ್ನುಳಿದ ಸಮಯದಲ್ಲಿ ನಾವು ಕೂಡ ಮನೆಯಲ್ಲಿ ಉಳಿದು ಕೊರೊನಾ ಸೋಂಕು ಹರಡದಂತೆ ನಿಗಾ ವಹಿಸಬಹುದು ಎಂದು ರಸ್ತೆ ಬದಿ ವ್ಯಾಪಾರಿ ಮುಜಾಯಿದ್ ತಿಳಿಸಿದರು.

ನಿಯಂತ್ರಿಸಲು ಅನುಕೂಲ: ಆಸ್ಪತ್ರೆ, ಮೆಡಿಕಲ್‍ಗಳನ್ನು ಬಿಟ್ಟು ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಿದರೆ, ಅನಾವ್ಯಶಕ ವಾಗಿ ರಸ್ತೆಯಲ್ಲಿ ತಿರುಗಾಡುವವರನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ. ಸಮಯ ನಿಗದಿ ಪಡಿಸದೆ ಇರುವುದರಿಂ ದಲೇ ಮೆಡಿಕಲ್‍ಗೆ, ಹಣ್ಣು-ತರಕಾರಿ ಕೊಳ್ಳಲು ಬಂದೆವು ಎಂಬ ಕಾರಣಗಳನ್ನೆ ಹೇಳಿಕೊಂಡು ಜನರು ಹೊರಬರು ತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ರಸ್ತೆಯಲ್ಲಿ ತಿರುಗಾಡುವವರೆಲ್ಲಾ ಇದೇ ರೀತಿಯ ಕಾರಣಗಳನ್ನು ಹೇಳುತ್ತಿದ್ದಾರೆ. ಅಡ್ಡಾಡುವವರನ್ನು ನಿಯಂತ್ರಿಸಲು ಕಷ್ಟ ವಾಗುತ್ತಿದೆ. ಬರಬೇಡಿ ಎಂದು ಗದರಿ ಸಿದರೆ ಸಾಕು ಹಲ್ಲೆ ಮಾಡುತ್ತಿರಾ ಎಂದು ತಿರುಗಿ ಬೀಳುತ್ತಾರೆ ಎಂದು ಹೆಸರೇಳಲು ಇಚ್ಚಿಸದ ಪೊಲೀಸರು ತಮ್ಮ ಅಳಲು ತೋಡಿಕೊಂಡರು.

Translate »