ಪಡಿತರ ಚೀಟಿ ಇಲ್ಲದ ಕುಟುಂಬಕ್ಕೆ ದಿನಸಿ ಕಿಟ್ ನೀಡುವ ಕಾರ್ಯಕ್ರಮಕ್ಕೆ ಶಾಸಕ ಜಿಟಿಡಿ ಚಾಲನೆ
ಮೈಸೂರು

ಪಡಿತರ ಚೀಟಿ ಇಲ್ಲದ ಕುಟುಂಬಕ್ಕೆ ದಿನಸಿ ಕಿಟ್ ನೀಡುವ ಕಾರ್ಯಕ್ರಮಕ್ಕೆ ಶಾಸಕ ಜಿಟಿಡಿ ಚಾಲನೆ

April 8, 2020

ಚಾಮುಂಡೇಶ್ವರಿ ಕ್ಷೇತ್ರದ 3500, ವರುಣಾ ಕ್ಷೇತ್ರದ 700 ಕುಟುಂಬಗಳಿಗೆ ಸೌಲಭ್ಯ

ದಾನಿಗಳಿಂದ ಸಂಗ್ರಹಿಸಿದ ವಸ್ತುಗಳ ಹಂಚಿಕೆ

ತಾಲೂಕು ಆಡಳಿತದಿಂದ ಕ್ರಮ

ಮೈಸೂರು,ಏ.7(ಎಂಟಿವೈ)- ಲಾಕ್ ಡೌನ್‍ನಿಂದಾಗಿ ಕಷ್ಟಕ್ಕೆ ಸಿಲುಕಿರುವ ಪಡಿ ತರ ಚೀಟಿ ಹೊಂದಿರದ ಕುಟುಂಬಗಳಿಗೆ ದಿನಸಿ ಪದಾರ್ಥ ನೀಡಲು ತಾಲೂಕು ಆಡಳಿತ ಕಾರ್ಯಕ್ರಮ ರೂಪಿಸಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಫಲಾನುಭವಿ ಗಳಿಗೆ ದಿನಸಿ ಕಿಟ್ ನೀಡುವ ಕಾರ್ಯ ಕ್ರಮಕ್ಕೆ ಶಾಸಕ ಜಿ.ಟಿ.ದೇವೇಗೌಡ ಮಂಗಳವಾರ ಚಾಲನೆ ನೀಡಿದರು.

ಮೈಸೂರಿನ ಅಶೋಕ ರಸ್ತೆಯಲ್ಲಿರುವ ಎಂಸಿಡಿಸಿಸಿ ಬ್ಯಾಂಕ್ ಕಟ್ಟಡದ ಗೋದಾಮಿನಲ್ಲಿ ಮಂಗಳವಾರ ಬೆಳಿಗ್ಗೆ ದಿನಸಿ ಕಿಟ್ ಸಿದ್ಧಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಜಿಟಿಡಿ, ದೇಶಾದ್ಯಂತ ಕೊರೊನಾ ಮಹಾಮಾರಿ ಜನರನ್ನು ಕಂಗೆಡಿಸಿದೆ. ಈ ಕಷ್ಟದ ದಿನಗಳಲ್ಲಿ ಜನತೆ ಹಸಿವಿನಿಂದ ಬಳಲ ಬಾರದೆಂದು ಸರ್ಕಾರ 2 ತಿಂಗಳ ಪಡಿ ತರ ವಸ್ತುಗಳನ್ನು ಒಂದೇ ಬಾರಿ ನೀಡು ತ್ತಿದೆ. ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಇರುವವರಿಗೆ ಪಡಿತರ ವಸ್ತು ಸರಬರಾಜು ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ವಿವಿಧ ಕಾರಣಗಳಿಂದ ರೇಷನ್ ಕಾರ್ಡ್ ಪಡೆ ಯದೇ ಇರುವ ಹಲವು ಕುಟುಂಬಗಳಿವೆ. ಅಂತಹ ಕುಟುಂಬದ ಸದಸ್ಯರು ಹಸಿದು ಮಲಗಬಾರದೆಂದು ಜಿಲ್ಲಾಡಳಿತ ದವಸ ಧಾನ್ಯಗಳ ಕಿಟ್ ವ್ಯವಸ್ಥೆ ಮಾಡಿದೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3500 ಮಂದಿಗೆ ರೇಷನ್ ಕಾರ್ಡ್ ಇಲ್ಲದಿರು ವುದನ್ನು ಅಧಿಕಾರಿಗಳು ಪತ್ತೆ ಮಾಡಿ ಪಟ್ಟಿ ತಯಾರಿಸಿದ್ದಾರೆ. ಇದಲ್ಲದೇ ಇನ್ನೂ ಬಹಳಷ್ಟು ಮಂದಿಗೆ ಪಡಿತರ ಚೀಟಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ನನ್ನ ಕ್ಷೇತ್ರದಲ್ಲಿ 5 ಸಾವಿರ ಮಂದಿಗೆ ದಿನಸಿ ಕಿಟ್ ನೀಡಲು ಉದ್ದೇಶಿಸಲಾಗಿದೆ. ವೈಯಕ್ತಿಕವಾಗಿ ನಾನು 10 ಟನ್ ಅಕ್ಕಿ, 4 ಟನ್ ತೊಗರಿಬೇಳೆ, 3 ಸಾವಿರ ಲೀ. ಅಡುಗೆ ಎಣ್ಣೆ, 3 ಟನ್ ಗೋಧಿ ಹಿಟ್ಟು ನೀಡಿದ್ದೇನೆ. 37 ಸಾವಿರ ಮಾಸ್ಕ್ ವಿತರಿಸಲಾಗಿದೆ. ಗೋಪಾಲ ಪುರ ಗ್ರಾಮಸ್ಥರು ಮನೆ ಮನೆಯಿಂದ 6 ಟನ್ ಅಕ್ಕಿ ಹಾಗೂ 6 ಟನ್ ರಾಗಿ ಸಂಗ್ರಹಿಸಿ ನೀಡಿದ್ದಾರೆ. ಪ್ರತಿ ಗ್ರಾಮದಲ್ಲೂ ಟಾಸ್ಕ್‍ಫೋರ್ಸ್ ರಚಿಸಲಾಗಿದೆ. ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರು ಅರ್ಹರ ಪಟ್ಟಿ ತಯಾರಿಸಿದ್ದಾರೆ. ಅಂತಹವರಿಗೆ 10 ಕೆಜಿ ಅಕ್ಕಿ, ತಲಾ 1 ಕೆಜಿ ಬೇಳೆ, ಗೋಧಿ ಹಿಟ್ಟು, ಉಪ್ಪು ಹಾಗೂ 1 ಲೀ. ಅಡುಗೆ ಎಣ್ಣೆ ವಿತರಿಸಲಾಗುತ್ತಿದೆ ಎಂದು ವಿವರಿಸಿ ದರು. ಈ ಸಂದರ್ಭ ತಹಶೀಲ್ದಾರ್ ಕೆ.ಆರ್.ರಕ್ಷಿತ್, ತಾಪಂ ಇಒ ಸಿ.ಆರ್.ಕೃಷ್ಣ ಕುಮಾರ್, ಆಹಾರ- ನಾಗರಿಕ ಸರಬ ರಾಜು ಇಲಾಖೆ ಹಾಗೂ ಎಂಸಿ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪಡಿತರ ಚೀಟಿ ಇಲ್ಲದವರ ಬಳಿ ಹಣ ಕೇಳಿದರೆ ಕಠಿಣ ಕ್ರಮ
ಪಡಿತರ ಚೀಟಿ ಇಲ್ಲದೇ ಇರುವವರು ಧಾನ್ಯ ಕೋರಿ ಬಂದರೆ ಅವರಿಗೂ ಉಚಿತವಾಗಿ ದಿನಸಿ ನೀಡುವಂತೆ ಮುಖ್ಯಮಂತ್ರಿಗಳ ನಿರ್ದೇಶನವಿದೆ. ಆದರೆ ಕೆಲ ನ್ಯಾಯಬೆಲೆ ಅಂಗಡಿಯವರು ಇಂತಹವರು ಪಡಿತರ ಕೇಳಿ ಬಂದರೆ ಹಣ ಕೇಳುತ್ತಿರುವ ಬಗ್ಗೆ ಮೈಸೂರು ತಾಲೂಕಿನಲ್ಲಿ ದೂರುಗಳು ಕೇಳಿ ಬರುತ್ತಿದ್ದು, ಹೀಗೆ ಹಣ ವಸೂಲಿ ಮಾಡುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
-ಜಿ.ಟಿ.ದೇವೇಗೌಡ, ಶಾಸಕರು.

ಮೈಸೂರು ತಾಲೂಕು ವ್ಯಾಪ್ತಿಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3500 ಹಾಗೂ ವರುಣಾ ಕ್ಷೇತ್ರದಲ್ಲಿ 700 ಕುಟುಂಬಗಳಿಗೆ ರೇಷನ್ ಕಾರ್ಡ್ ಇಲ್ಲ. ತಾಲೂಕಿನ ದಾನಿಗಳು ನೀಡಿದ ದಿನಸಿಯನ್ನು ಕಿಟ್ ಮಾಡಿ ಈ ಕುಟುಂಬಗಳಿಗೆ ವಿತರಿಸಲಾಗು ತ್ತ್ತಿದೆ. ಇದಕ್ಕೆ ತಾಲೂಕು ಆಡಳಿತ 1 ರೂ. ಸಹ ವೆಚ್ಚ ಮಾಡಿಲ್ಲ
-ಕೆ.ಆರ್.ರಕ್ಷಿತ್, ತಹಶೀಲ್ದಾರ್, ಮೈಸೂರು

Translate »