ವಿಶ್ವ ಆರೋಗ್ಯ ದಿನ: ಮೈಸೂರಲ್ಲಿ ಐವರು ವೈದ್ಯರು, ದಾದಿಯರಿಗೆ ಗೌರವ ಸಮರ್ಪಣೆ
ಮೈಸೂರು

ವಿಶ್ವ ಆರೋಗ್ಯ ದಿನ: ಮೈಸೂರಲ್ಲಿ ಐವರು ವೈದ್ಯರು, ದಾದಿಯರಿಗೆ ಗೌರವ ಸಮರ್ಪಣೆ

April 8, 2020

ಮೈಸೂರು,ಏ.7(ಎಂಟಿವೈ)-ವಿಶ್ವ ಆರೋಗ್ಯ ದಿನದ ಅಂಗವಾಗಿ ಮೈಸೂರಿನ ಕೃಷ್ಣಮೂರ್ತಿಪುರಂನ ಮೋಹನದಾಸ ತುಳಸಿದಾಸ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸರಳ ಸಮಾ ರಂಭದಲ್ಲಿ ಐವರು ವೈದ್ಯರು, ಐವರು ಹಿರಿಯ ಶುಶ್ರೂಷಕಿಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೆ.ಆರ್. ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ. ಬಿ.ಎಸ್. ಮಂಜುನಾಥ್, ಡಾ. ಇಂಬುನಾಥ್, ಡಾ.ಇಂದು ಶೇಖರ್, ಡಾ.ಕುಮುದ, ಡಾ. ಸೋಮಶೇಖರ್ ಹಾಗೂ ಶುಶ್ರೂಷಕಿಯರಾದ ಟಿ.ಎಂ. ಮೀನಾಕ್ಷಿ, ಜೆ.ಅನ್ನಮ್ಮ, ಗಾಯಿತ್ರಿ, ಪಿ.ಆರ್.ಆಶಾ, ಎಸ್. ವನಜಾಕ್ಷಿ ಅವರನ್ನು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಸನ್ಮಾನಿಸಿದರು.

ಬಳಿಕ ಮಾತನಾಡಿ, ಎಲ್ಲೆಡೆ ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ವೈದ್ಯರು, ದಾದಿಯರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಈ ಕೊರೊನಾ ವಾರಿಯರ್ಸ್‍ಗಳಿಗೆ ವಿಶ್ವಮಟ್ಟದಲ್ಲಿ ಗೌರವ ದೊರೆಯುತ್ತಿದೆ. ವೈದ್ಯ ನಾರಾಯಣೋ ಹರಿಃ ಎನ್ನುವ ಮಾತಿನಂತೆ ವೈದ್ಯರ ಸೇವೆ ಸ್ಮರಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದರು.

ಒಂದೆಡೆ ಹೆಚ್ಚು ಜನ ಸೇರುವುದಕ್ಕೆ ನಿರ್ಬಂಧವಿರುವುದರಿಂದ ವಿಶ್ವ ವೈದ್ಯರ ದಿನ ಸರಳವಾಗಿ ಆಚರಿಸಿ ಸಾಂಕೇತಿಕ ವಾಗಿ ಐವರು ವೈದ್ಯರು, ಐವರು ದಾದಿಯರನ್ನು ಸನ್ಮಾನಿಸುವ ಮೂಲಕ ಇಡೀ ವೈದ್ಯ ಲೋಕ ಹಾಗೂ ದಾದಿ ಯರ ಸಮೂಹವನ್ನು ಗೌರವಿಸು ತ್ತಿದ್ದೇವೆ ಎಂದರು. ಪಾಲಿಕೆ ಸದಸ್ಯೆ ಭುವ ನೇಶ್ವರಿ, ಮಾಜಿ ಸದಸ್ಯ ಎಂ. ಸುನೀಲ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಜಿ. ಸೋಮ ಶೇಖರ್, ಶ್ರೀಧರ್, ವಿಶ್ವ, ಗುಣ ಶೇಖರ್, ಹರೀಶ್, ಶಾದಿಖ್ ಉಲ್ಲಾ ರೆಹ ಮಾನ್, ಚಿಕ್ಕಲಿಂಗು ಮತ್ತಿತರರಿದ್ದರು.

Translate »