ಕೊರೊನಾದಿಂದ ರಾಜ್ಯದಲ್ಲಿ ಆತಂಕದ ಸನ್ನಿವೇಶ ಇಲ್ಲ
ಮೈಸೂರು

ಕೊರೊನಾದಿಂದ ರಾಜ್ಯದಲ್ಲಿ ಆತಂಕದ ಸನ್ನಿವೇಶ ಇಲ್ಲ

April 8, 2020

ಬಿಬಿಎಂಪಿ ವಾರ್ ರೂಮಿನಲ್ಲಿ ಕೊರೊನಾ ಡ್ಯಾಷ್‍ಬೋರ್ಡ್: ಡಾ.ಕೆ.ಸುಧಾಕರ್

ಬೆಂಗಳೂರು, ಏ.7- ಬಿಬಿಎಂಪಿ ವಾರ್ ರೂಂನಲ್ಲಿ ಕೊರೊನಾ ಡ್ಯಾಷ್ ಬೋರ್ಡ್‍ನ್ನು ಇಂದಿನಿಂದ ರಾಜ್ಯಾದ್ಯಂತ ಆರಂಭಿಸಿದ್ದು, ಯಾವುದೇ ಮೂಲೆಯಲ್ಲಿನ ಸೋಂಕಿತರ ಸಂಖ್ಯೆ ಬಗ್ಗೆ ಫೋನ್, ಡೆಸ್ಕ್‍ಟಾಪ್‍ನಲ್ಲಿ ನೋಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸೋಂಕಿತರು, ಕ್ವಾರಂಟೈನ್ ನಲ್ಲಿರುವವರ ಅಂಕಿ-ಅಂಶಗಳ ಬಗ್ಗೆ ಮಾಹಿತಿ ಡ್ಯಾಷ್ ಬೋರ್ಡ್‍ನಿಂದ ಸಿಗಲಿದೆ. ಕೊರೊನಾ ಸೋಂಕಿತರ ಚಿಕಿತ್ಸೆ ವಿಧಾನ, ಆಸ್ಪತ್ರೆಗಳ ವಿವರ ಈ ಡ್ಯಾಷ್ ಬೋರ್ಡ್ ನಲ್ಲಿ ಇರಲಿದೆ. ಇಡೀ ರಾಜ್ಯದಲ್ಲಿ ಎಷ್ಟು ಆಸ್ಪತ್ರೆಗಳು ಕೊರೊನಾಗಾಗಿ ಮೀಸಲಿವೆ, ಎಷ್ಟು ಹಾಸಿಗೆ ಖಾಲಿ ಇವೆ, ಎಷ್ಟು ವೈದ್ಯರಿ ದ್ದಾರೆ ಎನ್ನುವ ಮಾಹಿತಿ ಈ ಡ್ಯಾಷ್ ಬೋರ್ಡ್‍ನಲ್ಲಿ ಲಭ್ಯವಿರಲಿದೆ ಎಂದರು. 4.5 ಲಕ್ಷ ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂದಿನಿಂದ ಕೋವಿಡ್ ನಿರ್ವಹಣೆ ಬಗ್ಗೆ ಆನ್‍ಲೈನ್ ಮೂಲಕ ತರಬೇತಿ ನೀಡ ಲಾಗುತ್ತಿದೆ. ಈ ವರೆಗೂ 8.5 ಸಾವಿರ ನರ್ಸಿಂಗ್ ವಿದ್ಯಾರ್ಥಿಗಳು ತರಬೇತಿ ಪಡೆದಿ ದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.

ದೆಹಲಿಯ ತಬ್ಲೀಘ್ ಜಮಾತ್‍ಗೆ ಹೋದವರ ಪೈಕಿ 35 ಜನರಿಗೆ ಕೊರೊನಾ ಸೋಂಕು ತಗುಲಿದೆ. ನಂಜನಗೂಡಿನಲ್ಲೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಈ ಎರಡೂ ಘಟನೆಗಳು ಇಲ್ಲದಿದ್ದರೆ ರಾಜ್ಯದಲ್ಲಿ ಕೊರೊನಾ ಬಹುತೇಕ ನಿಯಂತ್ರಣ ದಲ್ಲಿರುತ್ತಿತ್ತು. ಆದರೂ ನಮ್ಮಲ್ಲಿ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಜರುಗಿಸಲಾ ಗಿದೆ. ಭಾರತದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 11ನೇ ಸ್ಥಾನಕ್ಕೆ ಇಳಿದಿರುವುದೇ ಇದಕ್ಕೆ ಸಾಕ್ಷಿ ಎಂದು ಸಚಿವರು ಹೇಳಿದ್ದಾರೆ.

ಲಾಕ್‍ಡೌನ್ ಮುಂದುವರೆಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈದ್ಯರು ಮತ್ತು ತಜ್ಞರ ಜೊತೆ ಯಡಿಯೂರಪ್ಪ ಸಮಾಲೋಚನೆ ನಡೆಸುತ್ತಿದ್ದಾರೆ. ಕೇಂದ್ರದ ಕ್ರಮ, ಬೇರೆ ರಾಜ್ಯಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳು ತ್ತಾರೆ ಎನ್ನುವುದನ್ನು ನೋಡಿಕೊಂಡು ಮುಂದಿನದ್ದನ್ನು ನಿರ್ಧರಿಸುತ್ತಾರೆ ಎಂದರು.

ನಮ್ಮ ರಾಜ್ಯದಲ್ಲಿ ಕೊರೊನಾ ಆತಂಕ ಪಡುವ ಮಟ್ಟಕ್ಕೆ ಹೋಗಿಲ್ಲ. ರಾಜ್ಯದ 175 ಪಾಸಿಟಿವ್ ಪ್ರಕರಣಗಳಲ್ಲಿ 25 ಜನ ಗುಣಮುಖರಾಗಿದ್ದಾರೆ. ಕೊರೊನಾದಿಂದ ಗುಣಮುಖರಾಗಿರುವವರನ್ನು ಕೊರೊನಾ ವಾರಿಯರ್ಸ್ ಆಗಿ ಜಾಗೃತಿಗೆ ಬಳಕೆ ಮಾಡಿ ಕೊಳ್ಳುವ ಚಿಂತನೆ ಇದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದು ಕೊಳ್ಳಲಾಗುವುದು. ಆದರೆ ಗುಣಮುಖ ರಾದರೂ ಅವರನ್ನೆಲ್ಲ ಇನ್ನಷ್ಟು ನಿಗಾ ಇಟ್ಟು ಹೋಂ ಕ್ವಾರಂಟೈನ್‍ನಲ್ಲಿ ಮುಂದು ವರೆಸಿದ್ದೇವೆ. ಈಗಾಗಲೇ ಸಾಕಷ್ಟು ಜನ ಕೊರೊನಾ ವಾರಿಯರ್ಸ್ ಆಗಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದರು.

ಕೊರೊನಾ ಭೀತಿಯಿಂದ ಖಾಸಗಿ ಆಸ್ಪತ್ರೆ ಗಳು ಮುಚ್ಚಿರುವ ವಿಚಾರವಾಗಿ ಪ್ರತಿಕ್ರಿಯಿ ಸಿದ ಸುಧಾಕರ್, ಯಾರು ಖಾಸಗಿ ಆಸ್ಪತ್ರೆ ಮುಚ್ಚಿರುತ್ತಾರೆಯೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿ ವರು ಈಗಾಗಲೇ ಹೇಳಿದ್ದಾರೆ. ಈ ಜವಾಬ್ದಾರಿಯಿಂದ ಯಾರೂ ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು. ನೈತಿಕತೆಯಿಂದ ನಾವೆಲ್ಲ ಕೆಲಸ ಮಾಡಬೇಕಿದೆ. ಕೋವಿಡ್ ಅಲ್ಲದೇ ಸಾಕಷ್ಟು ಜನರಿಗೆ ಬೇರೆ ಬೇರೆ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಅಂಥವ ರಿಗೆ ಚಿಕಿತ್ಸೆ ನೀಡುವುದು ಆಸ್ಪತ್ರೆಗಳ ಕರ್ತವ್ಯ. ಖಾಸಗಿ ಆಸ್ಪತ್ರೆಯವರು ಕೋವಿಡ್‍ಗೆ ಹೆದರಿ ಕೊಂಡು ಆಸ್ಪತ್ರೆ ಮುಚ್ಚಿದರೆ ಮಾನವೀಯ ಮೌಲ್ಯಗಳಿಗೆ ವಿರುದ್ಧವಾದ ಕೆಲಸವಾಗು ತ್ತದೆ ಎಂದು ಎಚ್ಚರಿಸಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮೇಲೆ ಹಲ್ಲೆ ನಡೆಸುವುದು ಅಮಾನವೀಯ ಕೃತ್ಯ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸುಧಾಕರ್ ಎಚ್ಚರಿಕೆ ನೀಡಿದರು.

Translate »