ಆಶಾ ಕಾರ್ಯಕರ್ತೆಯರಿಗೆ ಬಿಜೆಪಿಯಿಂದ ದಿನಸಿ ಕಿಟ್
ಮೈಸೂರು

ಆಶಾ ಕಾರ್ಯಕರ್ತೆಯರಿಗೆ ಬಿಜೆಪಿಯಿಂದ ದಿನಸಿ ಕಿಟ್

April 27, 2020

ಮೈಸೂರು, ಏ.26(ಆರ್‍ಕೆಬಿ)- ಕೊರೊನಾ ಸಂಕಷ್ಟ ಸಮಯದಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ, ದಿನಬಳಕೆ ವಸ್ತು ಗಳ ಕಿಟ್ ವಿತರಿಸುವ ಮೂಲಕ ಬಿಜೆಪಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ (ನಗರ ಮಂಡಲ) ಬಸವ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಮೈಸೂರಿನ ಶಾರದಾದೇವಿನಗರದ ಸುಬ್ಬರಾವ್ ಉದ್ಯಾನವನ ಮುಂಭಾಗ ಭಾನುವಾರ ಚಾಮುಂಡೇಶ್ವರಿ ಕ್ಷೇತ್ರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಬಿ.ಎಂ.ರಘು ಕಿಟ್‍ಗಳನ್ನು ವಿತರಿಸಿದರು. ಉಪಾಧ್ಯಕ್ಷ ಗಿರೀಶ್ ದಟ್ಟಗಳ್ಳಿ, ಪ್ರಧಾನ ಕಾರ್ಯದರ್ಶಿ ಎಚ್.ಜಿ.ರಾಜಮಣಿ, ಪಾಲಿಕೆ ಸದಸ್ಯ ಆರ್.ಕೆ.ಶರತ್‍ಕುಮಾರ್, ಮುಖಂಡರಾದ ಕಿರಣ್ ಮಾದೇಗೌಡ, ರೇವಣ್ಣ, ಟಿ.ಎಸ್.ರವಿಕುಮಾರ್, ಹೇಮಾ ಗಂಗಪ್ಪ, ಪೂರ್ಣಿಮಾ ಚಂದ್ರಪ್ಪ, ಬಸವಣ್ಣ, ಈರೇಗೌಡ, ಬಿ.ಸಿ.ಶಶಿಕಾಂತ್, ವಿಜಯ ಮಂಜುನಾಥ್, ಲಕ್ಷ್ಮಿ ಇನ್ನಿತರರಿದ್ದರು.

Translate »