ಕಡು ಬಡವರ ಮನೆ ಬೆಳಗಿದ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ
ಮೈಸೂರು

ಕಡು ಬಡವರ ಮನೆ ಬೆಳಗಿದ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ

May 10, 2020

ಮೈಸೂರು, ಮೇ 9(ಪಿಎಂ)- ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ರುವ ಜನತೆಯ ನೋವಿಗೆ ಸ್ಪಂದಿಸುತ್ತಿ ರುವ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ, ಪ್ರತಿನಿತ್ಯ ಆಹಾರದ ಪೊಟ್ಟಣ, ದಿನಸಿ, ಔಷಧ ಒದಗಿಸುವ ಮೂಲಕ ಅಸಹಾಯಕರತ್ತ ಸಹಾಯ ಹಸ್ತ ಚಾಚಿದೆ.

ಇದೀಗ ಮತ್ತೊಂದು ಹೆಜ್ಜೆ ಮುಂದಿ ಟ್ಟಿರುವ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ, ಬುದ್ಧ ಪೂರ್ಣಿಮಾದ ಅಂಗ ವಾಗಿ ಶುಕ್ರವಾರ ಬಡ ಕುಟುಂಬದ ಮನೆ-ಮನಗಳನ್ನು ಬೆಳಗುವಂತೆ ಸೇವಾ ಕಾರ್ಯ ಮಾಡಿದೆ. 25ಕ್ಕೂ ಹೆಚ್ಚು ಬಡ ಕುಟುಂಬದ ಮನೆಗಳ ವಿದ್ಯುತ್ ಶುಲ್ಕ ಪಾವತಿಸುವ ಮೂಲಕ ಬಡವರ ಸೂರಿನ ಬೆಳಕು ಆರದಂತೆ ನೋಡಿಕೊಂಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಪುತ್ರರೂ ಆದ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿ ಬಿ.ವೈ.ವಿಜಯೇಂದ್ರ ಅವರ ಅಭಿ ಮಾನಿಗಳು ಬಳಗದ ಮೂಲಕ ಸಂಘಟನೆ ಗೊಂಡು ಹತ್ತು-ಹಲವು ಸೇವಾ ಕಾರ್ಯ ದಲ್ಲಿ ನಿರಂತರವಾಗಿ ತೊಡಗಿದೆ.

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಚಾಮುಂ ಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಬಿಲ್ ರೀಡರ್ ಸಮ್ಮುಖದಲ್ಲಿ 25ಕ್ಕೂ ಹೆಚ್ಚು ಬಡವರ ಮನೆಗಳ ವಿದ್ಯುತ್ ಶುಲ್ಕ ಪಾವತಿ ಮಾಡಿದೆ ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗ. ಬಡಕುಟುಂಬದವರಿಂದ ವಿದ್ಯುತ್ ಶುಲ್ಕದ ಚೀಟಿ ಪಡೆದ ಬಳಗದ ಕಾರ್ಯ ಕರ್ತರು, ಪ್ರತಿ ಮನೆಯ ನೂರಾರು ರೂ. ಶುಲ್ಕವನ್ನು ಪಾವತಿಸಿದರು. ಹೀಗೆ ವಿದ್ಯುತ್ ಬಿಲ್ ಪಾವತಿಸಿದ ಮೈಸೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಬಳಗದ ಮುಖಂಡ ಎಲ್.ಆರ್.ಮಹ ದೇವಸ್ವಾಮಿ ಇದೇ ವೇಳೆ ಮಾತನಾಡಿ, ಬಳಗದ ವತಿಯಿಂದ ಕಳೆದ ಒಂದೂವರೆ ತಿಂಗಳಿಂದ ಬಡವರು, ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ಮಧ್ಯಾಹ್ನದ ಊಟದ ಪೊಟ್ಟಣ ವಿತರಿಸಲಾಗುತ್ತಿದೆ. ಇದುವ ರೆಗೂ ಶ್ರೀರಾಂಪುರ, ಮಹದೇವಪುರ, ರಮಾ ಬಾಯಿನಗರ, ಆಲನಹಳ್ಳಿ, ಚಿಕ್ಕಹಳ್ಳಿ, ನಾಚನಹಳ್ಳಿಪಾಳ್ಯ ಸೇರಿದಂತೆ 25ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಕುಟುಂಬ ಗಳಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿದ್ದು, ನಮ್ಮ ಈ ಸೇವಾ ಕಾರ್ಯ ಮುಂದುವರೆದಿದೆ ಎಂದರು.

ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀ ದೇವಿ ಮಾತನಾಡಿ, ಬಿ.ವೈ.ವಿಜಯೇಂದ್ರ ಅಭಿಮಾನಿ ಬಳಗದಿಂದ ನಿತ್ಯ ಬಡವರ ಬಡಾವಣೆಗಳಿಗೆ ಊಟ ಸರಬರಾಜು ಮಾಡ ಲಾಗುತ್ತಿದೆ. ಸರ್ಕಾರ ವಿದ್ಯುತ್ ಶುಲ್ಕ ಪಾವತಿಸಲು ಸಮಯ ನೀಡಿದೆ. ಆದರೂ ಕೂಲಿ ಮಾಡುವ ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಮೊದಲ ಹಂತ ದಲ್ಲಿ 25ಕ್ಕೂ ಕುಟುಂಬಗಳ ಮನೆಗಳ ವಿದ್ಯುತ್ ಶುಲ್ಕ ಪಾವತಿ ಮಾಡಲಾಗಿದೆ. ಬಿ.ವೈ.ವಿಜ ಯೇಂದ್ರ ಅವರ ಸಲಹೆ-ಸೂಚನೆಯಂತೆ ಬಡ ಫಲಾನುಭವಿಗಳ ಆಯ್ಕೆ ಮಾಡಿ ಅವರ ಮನೆ ವಿದ್ಯುತ್ ಬಿಲ್ ಪಾವತಿ ಮಾಡಲಾಗುತ್ತಿದೆ ಎಂದರು. ಬೇಕರಿ ಉದ್ಯಮಿ ಆನಂದ್, ಮುಖಂಡರಾದ ಶ್ಯಾಮಲಾ, ನಿಖಿಲ್, ಮೆಲ್ಲಹಳ್ಳಿ ಮಹೇಶ್, ಜಸ್ವಂತ್, ಅನಿಲ್, ಅಶೋಕ್, ಸತೀಶ್, ವಿಕ್ರಂ ಅಯ್ಯಂಗಾರ್, ಅರಸೀಕೆರೆ ಉಮೇಶ್, ಹರೀಶ್ ಮತ್ತಿತರರು ಹಾಜರಿದ್ದರು.

Translate »