ಮೈಸೂರಿನ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಲಾಡ್ಜ್‍ಗಳಲ್ಲಿ ಮದ್ಯ ಮಾರಾಟ ಆರಂಭ
ಮೈಸೂರು

ಮೈಸೂರಿನ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಲಾಡ್ಜ್‍ಗಳಲ್ಲಿ ಮದ್ಯ ಮಾರಾಟ ಆರಂಭ

May 10, 2020

ಮೈಸೂರು, ಮೇ 9(ಆರ್‍ಕೆ)- ಅಬ ಕಾರಿ ಇಲಾಖೆ ಆಯುಕ್ತರ ನಿರ್ದೇಶನದ ಮೇರೆಗೆ ಮೈಸೂರಿನ 138 ಸೇರಿದಂತೆ ಜಿಲ್ಲೆಯಾದ್ಯಂತ 300 ಬಾರ್ ಅಂಡ್ ರೆಸ್ಟೋ ರೆಂಟ್, ಕ್ಲಬ್, ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಗಳಲ್ಲಿ ದಾಸ್ತಾನಿರುವ ಮದ್ಯ ಮಾರಾಟ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.

ಬೆಳಿಗ್ಗೆ 9 ಗಂಟೆಯಿಂದ ಮೈಸೂರು ನಗ ರದ ಬಾರ್ ಅಂಡ್ ರೆಸ್ಟೋರೆಂಟ್‍ಗಳು, ಕ್ಲಬ್‍ಗಳು ಹಾಗೂ ಬೋರ್ಡಿಂಗ್ ಅಂಡ್ ಲಾಡ್ಜಿಂಗ್‍ಗಳಲ್ಲಿ ಎಂಆರ್‍ಪಿ ದರದಲ್ಲಿ ತಮ್ಮ ಬಳಿ ದಾಸ್ತಾನಿರುವ ಮದ್ಯವನ್ನು ಕೌಂಟರ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಮದ್ಯವನ್ನು ಪಡೆದವರು ಸ್ಥಳದಲ್ಲಿ ಸೇವಿಸು ವಂತಿಲ್ಲ. ಇಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗು ವುದಿಲ್ಲ ಎಂಬ ಫಲಕವನ್ನು ಕೌಂಟರ್‍ಗಳ ಬಳಿ ಹಾಕಲಾಗಿದೆ. ಇದು ಸ್ಟಾಕ್ ಖಾಲಿ ಯಾಗುವವರೆಗೆ ಮಾತ್ರ ಅನ್ವಯಿಸುತ್ತ ದೆಯೇ ಹೊರತು ಹೊಸ ಸ್ಟಾಕ್ ತರಿಸಿ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಇಂದು ಸಂಜೆಯೊಳಗೆ ಇಲ್ಲಿರುವ ಮದ್ಯ ಖಾಲಿಯಾದಲ್ಲಿ ನಾಳೆಯಿಂದ ಅವರು ಬಾಗಿಲು ತೆಗೆಯುವಂತಿಲ್ಲ. ಆದರೆ ಸ್ಟಾಕ್ ಇರುವವರು ಮೇ 17ರವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಅಬಕಾರಿ ಇಲಾಖೆ ಮೈಸೂರು ಜಿಲ್ಲಾ ಉಪ ಆಯುಕ್ತ ಕೆ.ಎಸ್.ಮುರಳಿ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಈಗಾಗಲೇ ಸರ್ಕಾರ ಎಂಎಸ್‍ಐಎಲ್, ವೈನ್‍ಶಾಪ್‍ಗಳಲ್ಲಿ ಮದ್ಯ ಮಾರಾಟ ಮಾಡಲು ಅವಕಾಶ ನೀಡಿರುವುದರಿಂದ ಜನರು ಅಲ್ಲಿ ಖರೀದಿಸುತ್ತಿದ್ದರು. ಈ ಮಧ್ಯೆ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್ ಮಾಲೀ ಕರು ಅಂದರೆ ಸಿಎಲ್ 4, ಸಿಎಲ್ 7 ಹಾಗೂ ಸಿ.ಎಲ್ 9 ಸನ್ನದುದಾರರು ತಮ್ಮ ಬಳಿ ಇರುವ ಸ್ಟಾಕ್ ಮಾರಾಟ ಮಾಡಲು ಅನು ಕೂಲ ಮಾಡಿಕೊಡಬೇಕೆಂದು ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಅಲ್ಲದೆ ಕೇವಲ ಎಂಆರ್‍ಪಿ ಔಟ್‍ಲೆಟ್‍ಗಳಲ್ಲಿ ಮಾತ್ರ ಮಾರಾಟ ಮಾಡುತ್ತಿರುವುದರಿಂದ ಮದ್ಯ ಪ್ರಿಯರು ಇಂತಹ ಮದ್ಯಮಳಿಗೆಗಳಲ್ಲಿ ಮುಗಿಬೀಳುತ್ತಿದ್ದು, ಅದರಿಂದ ಸಾಮಾ ಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗು ತ್ತಿರಲಿಲ್ಲ. ಆದರೆ ಈಗ ಸಿಎಲ್ 4, ಸಿಎಲ್ 7 ಹಾಗೂ ಸಿಎಲ್ 9 ಕೌಂಟರ್‍ಗಳ ಲ್ಲಿಯೂ ಮದ್ಯ ಮಾರಾಟ ಮಾಡಲು ಅವಕಾಶ ನೀಡಿರುವುದರಿಂದ ಜನರು ಸರಾಗವಾಗಿ ಬೆಳಿಗ್ಗೆ 9 ರಿಂದ ರಾತ್ರಿ 7 ಗಂಟೆವೆರೆಗೆ ಯಾವುದೇ ಗೊಂದಲವಿಲ್ಲದೆ ಮದ್ಯ ಖರೀದಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಆದರೆ ಎಂಆರ್‍ಪಿ ದರದಲ್ಲೇ ಮದ್ಯ ಮಾರಾಟ ಮಾಡಬೇಕು. ಸ್ಥಳದಲ್ಲಿ ಒಬ್ಬ ರನ್ನು ನಿಲ್ಲಿಸಿ, ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಮದ್ಯ ಖರೀದಿಸಲು ಅವಕಾಶ ನೀಡುವಂತೆ ನಾವು ಸನ್ನದು ದಾರರಿಗೆ ಸೂಚನೆ ನೀಡಿದೇವೆ. ನಮ್ಮ ಇಲಾಖೆಯ ಸಿಬ್ಬಂದಿ ಇಂದು ಬೆಳಿಗ್ಗೆಯಿಂ ದಲೇ ಮೈಸೂರು ನಗರ ಮತ್ತು ಜಿಲ್ಲೆಯಾ ದ್ಯಂತ ತಪಾಸಣೆಯನ್ನು ಮಾಡುತ್ತಿದ್ದಾರೆ. ಒಂದು ವೇಳೆ ಯಾರಾದರೂ ಎಂಆರ್‍ಪಿ ಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಹಾಗೂ ನಮಗೆ ತಿಳಿಯದೇ ಬೇರೆಡೆಯಿಂದ ಸ್ಟಾಕ್ ತರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಲ್ಲಿ ಅಂತಹ ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್ ಅಥವಾ ಬೋರ್ಡಿಂಗ್ ಅಂಡ್ ಲಾಡ್ಜಿಂಗ್‍ನ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದೂ ಮುರಳಿ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಜಿಲ್ಲೆಯಾದ್ಯಂತ ಎಲ್ಲಾ 300 ಸನ್ನದುದಾರರಲ್ಲಿ ಬಹುತೇಕರು ಮದ್ಯ ಮಾರಾಟ ಮಾಡುತ್ತಿದ್ದಾರೆ. ಕೆಲವರ ಬಳಿ ಕಡಿಮೆ ಸ್ಟಾಕ್ ಇರುವುದರಿಂದ ಇಂದು ಸಂಜೆಯೊಳಗೇ ಅದು ಖಾಲಿಯಾಗುವ ಸಾಧ್ಯತೆ ಇದ್ದು, ಉಳಿದವರು ದಾಸ್ತಾನಿರು ವವರೆಗೆ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ದಾಸ್ತಾನು ಬೇಗ ಖಾಲಿಯಾಗಬಹು ದೆಂಬ ಆತಂಕದಿಂದ ಮದ್ಯಪ್ರಿಯರು ತಮಗೆ ಅಗತ್ಯವಿರುವುದಕ್ಕಿಂತ ಹೆಚ್ಚು ಹೆಚ್ಚು ಮದ್ಯ ಖರೀದಿ ಮಾಡಿ ಸಂಗ್ರಹಿಸಿಟ್ಟುಕೊಳ್ಳುತ್ತಿ ರುವುದು ಕಂಡು ಬಂದಿತು. ಇದರಿಂದಾಗಿ ಔಟ್‍ಲೆಟ್‍ಗಳಲ್ಲಿ ಅತೀ ಬೇಗ ದಾಸ್ತಾನು ಖಾಲಿಯಾಗುವ ಸಂಭವವಿದೆ. ಜೊತೆಗೆ ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಆದೇಶ ಮುಂದುವರೆಯಬಹುದೆಂದು ಭಾವಿಸಿ ಹೆಚ್ಚು ಹೆಚ್ಚು ಮಂದಿ ಮೈಸೂರು ನಗರದ ಎಲ್ಲಾ ಎಂಆರ್‍ಪಿ ಔಟ್‍ಲೆಟ್ ಗಳಲ್ಲಿ ಹೆಚ್ಚು ಮದ್ಯ ಖರೀದಿಸಿ ಸಂಗ್ರಹಿಸಿಟ್ಟು ಕೊಳ್ಳುತ್ತಿರುವುದು ಕಂಡು ಬಂದಿದೆ.

Translate »