ಮೈಸೂರು, ಮೇ 9(ಆರ್‍ಕೆ)- ವಿಮಾನ ಹಾಗೂ ಹಡಗಿನಲ್ಲಿ ವಿದೇಶದಿಂದ ಕರೆ ತಂದವರ ಕ್ವಾರಂಟೈನ್‍ಗಾಗಿ ಮೈಸೂರು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಬಂದ್ ಆಗಿರುವ ಮೈಸೂರಿನ 170 ಹೋಟೆಲ್‍ಗಳ ಸುಮಾರು 2,500 ಕೊಠಡಿಗಳಲ್ಲಿ ವಿದೇಶಗಳಿಂದ ಬರುವವರಿಗೆ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಪೈವಿಸ್ಟಾ, ರಿಯೋ ಮೆರಿಡಿ ಯನ್ ಸೇರಿದಂತೆ 170 ಹೋಟೆಲ್‍ಗಳನ್ನು ಕ್ವಾರಂಟೈನ್ ಸೆಂಟರ್ ಮಾಡಲು ಸ್ವಚ್ಛತಾ ಕಾರ್ಯ ಆರಂಭಿಸಿದೆ. ಇಡೀ ಹೋಟೆಲ್ ಅನ್ನು ಸ್ಯಾನಿಟೈಸರ್ ಮಾಡಿ, ಕೋವಿಡ್-19 ಮುನ್ನೆಚ್ಚರಿಕೆಯಂತೆ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ವಿಮಾನ ನಿಲ್ದಾಣಗಳಿಗೆ ಬಂದಿಳಿಯುವವರನ್ನು ಸ್ಕ್ರೀನಿಂಗ್ ಮಾಡಿದ ತಕ್ಷಣ ಕೊರೊನಾ ವೈರಸ್ ಸೋಂಕು ಇರಲಿ, ಇಲ್ಲದಿರಲಿ ಅವರನ್ನು ಕ್ವಾರಂಟೈನ್ ಗೊಳಪಡಿಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸುತ್ತಿದೆ. ಹೋಟೆಲ್ ಕೊಠಡಿ ಬಾಡಿಗೆ, ಊಟದ ವೆಚ್ಚವನ್ನು ಆಯಾ ವ್ಯಕ್ತಿಗಳೇ ಭರಿಸಬೇಕಾಗಿದ್ದು, ಪಾಸಿಟಿವ್ ಇರುವವರಿಗೆ ಮಾತ್ರ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗುತ್ತದೆ.