ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಂದು ನಡೆದ ಸರಕು ಸೇವಾ ತೆರಿಗೆ-ಜಿಎಸ್‍ಟಿ ಸಭೆಯಲ್ಲಿ 34 ವಸ್ತುಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ಶೇ.18 ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ಸ್, ಸಿನಿಮಾ ಟಿಕೆಟ್ ಬೆಲೆ ಇಳಿಕೆಯಾಗಲಿದೆ. ಸಭೆಯಲ್ಲಿ ಕೈಗೊಂಡಿರುವ ನಿರ್ಧಾರ ಗಳನ್ನು ಸುದ್ದಿಗಾರರಿಗೆ ತಿಳಿಸಿದ ಅರುಣ್ ಜೇಟ್ಲಿ, ಈಗ 34 ಐಷಾರಾಮಿ ವಸ್ತು ಗಳಿಗೆ ಮಾತ್ರ ಶೇ.28 ತೆರಿಗೆ ವಿಧಿಸ ಲಾಗುವುದು, ಎಕಾನಮಿ ದರ್ಜೆಯ ವಿಮಾನ ಟಿಕೆಟ್ ಬೆಲೆ ಮೇಲಿನ ಜೆಎಸ್‍ಟಿಯನ್ನು ಶೇ.5 ಹಾಗೂ ಬ್ಯುಸಿನೆಸ್ ದರ್ಜೆಯ ಟಿಕೆಟ್ ಮೇಲಿನ ಜಿಎಸ್‍ಟಿ ತೆರಿಗೆ ಯನ್ನು ಶೇ.12ರಷ್ಟು ಕಡಿಮೆ ಮಾಡ ಲಾಗಿದೆ ಎಂದು ಹೇಳಿದರು.
100 ರೂ.ವರೆಗಿನ ಸಿನಿಮಾ ಟಿಕೆಟ್ ಮೇಲಿನ ಜಿಎಸ್‍ಟಿ ತೆರಿಗೆಯನ್ನು ಶೇ. 18ರಿಂದ ಶೇ.12ಕ್ಕೆ ಇಳಿಕೆ ಮಾಡಲಾಗಿದೆ. ಆರಂಭದಲ್ಲಿ 100 ರೂ.ವರೆಗಿನ ಸಿನಿಮಾ ಟಿಕೆಟ್ ಮೇಲೆ ಶೇ.28ರಷ್ಟು, ತದ ನಂತರ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು ಎಂದರು. ಮಾನಿಟರ್, ಟಿವಿ, ಪವರ್ ಬ್ಯಾಂಕ್ ಮತ್ತಿತರ ವಸ್ತುಗಳ ಮೇಲಿನ ಜಿಎಸ್‍ಟಿ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ. ದಿವ್ಯಾಂ ಗರು ಬಳಸುವ
ವಸ್ತುಗಳ ಮೇಲೆ ಶೇ. 5ರಷ್ಟು ಇಳಿಸಲಾಗಿದ್ದು, ಜನ್‍ಧನ್ ಬ್ಯಾಂಕ್ ಖಾತೆಗಳಿಗೆ ಸೇವೆ ಒದಗಿಸುವ ಬ್ಯಾಂಕುಗಳಿಗೆ ಜಿಎಸ್‍ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದರು. ಜನವರಿ 1, 2019ರಿಂದ ಪರಿಷ್ಕೃತ ಜಿಎಸ್‍ಟಿ ದರಗಳು ಜಾರಿಗೆ ಬರಲಿದ್ದು, ಇಂದು ಮಾಡಿರುವ ಜಿಎಸ್‍ಟಿ ದರ ಪರಿಷ್ಕರಣೆಯಿಂದಾಗಿ ಸುಮಾರು 5500 ಕೋಟಿ ರೂ. ಆದಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.