ಮೈಸೂರು: ದಸರಾ ಮಹೋ ತ್ಸವದಲ್ಲಿ ಸಾಹಸಿಗರನ್ನು ಆಕರ್ಷಿಸಿದ್ದ ಬಾನೆ ತ್ತರದಿಂದ ಮೈಸೂರು ನಗರದ ಸೌಂದರ್ಯ ವನ್ನು ಕಣ್ತುಂಬಿಕೊಳ್ಳುವ ಪ್ಯಾರಾಮೋಟಾರ್ ಹಾರಾಟ ಇದೀಗ ಮತ್ತೆ ಮಾಗಿ ಉತ್ಸವದ ಅಂಗವಾಗಿ ಆರಂಭಗೊಂಡಿದೆ.
ಮೈಸೂರು ಜಿಲ್ಲಾಡಳಿತ ಹಾಗೂ ಪ್ರವಾ ಸೋದ್ಯಮ ಇಲಾಖೆ ಆಶ್ರಯದಲ್ಲಿ ಬೆಂಗ ಳೂರು ಮೂಲದ `ಬೆಂಗಳೂರು ಏವಿ ಯೇಷನ್ ಅಂಡ್ ಸ್ಫೋಟ್ರ್ಸ್ ಎಂಟರ್ ಪ್ರೈಸಸ್’ ಸಂಸ್ಥೆ (ಬೇಸ್) ಮೈಸೂರಿನ ಕೃಷ್ಣ ರಾಜ-ಬುಲೇವಾರ್ಡ್ ರಸ್ತೆಯಲ್ಲಿರುವ ಮಹಾರಾಜ ಕ್ರಿಕೆಟ್ ಮೈದಾನದಲ್ಲಿ (ಸ್ಪೋಟ್ರ್ಸ್ ಪೆವಿಲಿಯನ್) `ಪ್ಯಾರಾಮೋಟಾರ್’ ಹಾರಾ ಟಕ್ಕೆ ವೇದಿಕೆ ಸಜ್ಜುಗೊಳಿಸಿದೆ. ಸಾಹಸ ಯಾನಕ್ಕೆ ಶನಿವಾರ ಬೆಳಿಗ್ಗೆ ಅಪರ ಜಿಲ್ಲಾಧಿ ಕಾರಿ ಟಿ.ಯೋಗೇಶ್ ಸ್ವತಃ ಪ್ಯಾರಾ ಮೋಟಾರ್‍ನಲ್ಲಿ ಕೆಲಕಾಲ ವಿಹರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತ ನಾಡಿದ ಅವರು, ಈ ಸಂಸ್ಥೆಯವರಿಗೆ ದಸರಾ ಉತ್ಸವ ವೇಳೆಯಲ್ಲೂ ಪ್ಯಾರಾ ಮೋಟಾರ್ ಯಾನ ನಡೆಸಲು ಅವಕಾಶ ನೀಡಲಾಗಿತ್ತು. ದಸರಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಗಿ ಉತ್ಸವದಲ್ಲೂ ಈ ಸಾಹಸಮಯ ಯಾನದ ವ್ಯವಸ್ಥೆ ಮಾಡ ಲಾಗಿದೆ. ಮೈಸೂರು ಪಾರಂಪರಿಕ ಕಟ್ಟಡ ಗಳ ನಗರವಾಗಿದ್ದು, ಇದನ್ನು ಆಗಸದಿಂದ ನೋಡುವ ಅನುಭವ ಅದ್ಭುತ. ಸಾಹಸ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ಅವಕಾಶ ಎಂದರು.
ಬೇಸ್ ಸಂಸ್ಥೆ ಮುಖ್ಯಸ್ಥರೂ ಆದ ಪೈಲಟ್ ಬಿ.ಜಿ.ಕುಮಾರಸ್ವಾಮಿ ಮಾತನಾಡಿ, 7ರಿಂದ 8 ನಿಮಿಷದ ಒಂದು ರೈಡ್‍ಗೆ ತಲಾ 2 ಸಾವಿರ ರೂ. ನಿಗದಿ ಮಾಡಲಾಗಿದೆ. ಇದರ ಚಾಲನೆಯನ್ನು ಪೈಲಟ್ ಮಾಡಲಿದ್ದು, ಇವರೊಂದಿಗೆ ಒಬ್ಬರು ಮಾತ್ರ ಕೂತು ಮೇಲೇರಬಹುದು. ಜ.1ರವರೆಗೆ ಪ್ಯಾರಾ ಮೋಟಾರ್ ಹಾರಾಟ ಮೈಸೂರಿನಲ್ಲಿ ನಡೆ ಯಲಿದೆ. ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಹಾರಾಟಕ್ಕೆ ಅವಕಾಶವಿದೆ. ಮಳೆ-ಗಾಳಿ ಇದ್ದಲ್ಲಿ ಹಾರಾಟ ಸ್ಥಗಿತಗೊಳಿಸ ಲಾಗುವುದು. ಸದ್ಯ ಒಂದು ಪ್ಯಾರಾ ಮೋಟಾರ್ ಹಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಬೇಡಿಕೆ ಹೆಚ್ಚಾದಲ್ಲಿ ಮತ್ತೊಂದಕ್ಕೆ ವ್ಯವಸ್ಥೆ ಮಾಡ ಲಾಗುವುದು ಎಂದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ಧನ್, ಪೈಲಟ್ ಸಿದ್ಧಾರ್ಥ ಮತ್ತಿತರರು ಹಾಜರಿದ್ದರು.