ಇಂದು, ನಾಳೆ ಪಿರಿಯಾಪಟ್ಟಣದಲ್ಲಿ 16ನೇ  ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಮೈಸೂರು

ಇಂದು, ನಾಳೆ ಪಿರಿಯಾಪಟ್ಟಣದಲ್ಲಿ 16ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

December 23, 2018

ಮೈಸೂರು: ಪಿರಿಯಾಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಡಿ.23 ಮತ್ತು 24ರಂದು 16ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋ ಜಿಸಲಾಗಿದೆ ಎಂದು ಕಸಾಪ ಮೈಸೂರು ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 8.30ಕ್ಕೆ ಶಾಸಕ ಕೆ.ಮಹದೇವ್, ಪರಿಷತ್ ತಾಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಲಿದೆ. ಬೆಳಿಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷ ಇಂದೂಧರ ಹೊನ್ನಾಪುರ ಅವರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನಾ ಚಾಲನೆ ನೀಡುವರು. ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಸಂಸದ ಪ್ರತಾಪಸಿಂಹ, ಸಚಿವರಾದ ಜಯಮಾಲಾ, ಶಾಸಕರಾದ ಎ.ಹೆಚ್. ವಿಶ್ವನಾಥ್, ತನ್ವೀರ್‍ಸೇಠ್, ಡಾ.ಯತೀಂದ್ರ ಇನ್ನಿತರರು ಭಾಗವಹಿ ಸಲಿದ್ದಾರೆ ಎಂದರು.

ಮಧ್ಯಾಹ್ನ 2.30 ಗಂಟೆಗೆ ಮೊದಲ ಗೋಷ್ಠಿ ಯಲ್ಲಿ `ಮೈಸೂರು ಜಿಲ್ಲಾ ದರ್ಶನ’ ಕುರಿತು ಹಂಪಿ ಕನ್ನಡ ವಿವಿಯ ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಪ್ರೊ.ಎಸ್.ಜಿ.ಚೈತ್ರಾ ವಿಷಯ ಮಂಡಿಸುವರು. ಸಂಜೆ 4ಕ್ಕೆ 2ನೇ ಗೋಷ್ಠಿಯಲ್ಲಿ `ಪಿರಿಯಾಪಟ್ಟಣ ತಾಲೂಕು- ಕನ್ನಡಿ, ಕೈದೀವಿಗೆ’ ಕುರಿತು ಪ್ರಾಧ್ಯಾ ಪಕಿ ಡಾ.ಮನಾಪುರ ವಿಜಯಲಕ್ಷ್ಮಿ, ಡಾ.ಎನ್.ಆರ್. ಚಂದ್ರೇಗೌಡ ವಿಷಯ ಮಂಡಿಸುವರು. ಸಂಜೆ 5.15ಕ್ಕೆ ಹಿರಿಯ ಸಾಹಿತಿ ಡಾ. ಜಯಪ್ಪ ಹೊನ್ನಾಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.


ಡಿ.24ರಂದು ಬೆಳಿಗ್ಗೆ 10ಕ್ಕೆ `ಜನಪರ ಚಳವಳಿಗಳು ಮತ್ತು ವರ್ತಮಾನದ ಸವಾಲುಗಳು’ ಕುರಿತ ವಿಚಾರ ಗೋಷ್ಠಿಯಲ್ಲಿ ರೈತ ಮುಖಂಡ ಪ್ರೊ.ಕೆ.ಸಿ.ಬಸವರಾಜು, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಕುಪ್ಪೆ ನಾಗರಾಜು, ಮೈಸೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ವಿಷಯ ಮಂಡಿಸುವರು. ಬೆಳಿಗ್ಗೆ 11 ಗಂಟೆಗೆ `ಗ್ರಾಮೀಣ ಭಾರತದ ಪ್ರಚಲಿತ ಸಮಸ್ಯೆಗಳು’ ಕುರಿತು ಪ್ರಗತಿಪರ ಚಿಂತಕ ಡಾ.ವಸಂತ ಕುಮಾರ್ ತಿಮಕಾಪುರ, ಡಾ.ಮುಜಾಫರ್ ಅಸ್ಸಾದಿ, ಎಸ್.ಕೇಶವಮೂರ್ತಿ ಇನ್ನಿತರರು ವಿಚಾರ ಮಂಡಿಸುವರು. `ನೀರಾವರಿ ಯೋಜನೆಗಳು’ ಕುರಿತು ಡಾ. ಗುಬ್ಬಿಗೂಡು ರಮೇಶ್, ಅರ್ಜುನಹಳ್ಳಿ ಪ್ರಸನ್ನಕುಮಾರ್, ಸಂಸ್ಕøತಿ ಮತ್ತು ರಾಜಕಾರಣ’ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್, `ಮಹಿಳೆ- ಸಮಕಾಲೀನ ಸವಾಲುಗಳು’ ಬಗ್ಗೆ ಮಹಿಳಾ ಚಿಂತಕಿ ಅಖಿಲಾ ವಿದ್ಯಾಸಂದ್ರ ವಿಷಯ ಮಂಡಿಸುವರು.

ಮಧ್ಯಾಹ್ನ 3 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಂಜೆ 4ಕ್ಕೆ `ಕನ್ನಡ ಮತ್ತು ಹೊಸ ತಲೆಮಾರು’ ವಿಷಯ ಕುರಿತ ಗೋಷ್ಠಿಯಲ್ಲಿ ಶ್ರೀಪಾದ ಭಟ್, ಮಂಜುನಾಥ್ ಅದ್ದೆ ಇನ್ನಿತರರು ವಿಚಾರ ಮಂಡಿಸುವರು. ಸಂಜೆ 6ಕ್ಕೆ ಬೆಟ್ಟದಪುರ ಸಲಿಲಾಖ್ಯ ಮಠದ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಸಮಾರೋಪ ಭಾಷಣ ಮಾಡುವರು. ಶಾಸಕ ಕೆ.ಮಹದೇವ ಅಧ್ಯಕ್ಷತೆ ವಹಿಸುವರು. ಸಚಿವ ಸಾ.ರಾ.ಮಹೇಶ್ ಇನ್ನಿತರರು ಉಪಸ್ಥಿತರಿ ರುವರು. ಸುದ್ದಿಗೋಷ್ಠಿಯಲ್ಲಿ ಸಾಹಿತಿ ಜಯಪ್ಪ ಹೊನ್ನಾಳಿ, ಪದಾಧಿಕಾರಿಗಳಾದ ಕೆ.ಎಸ್.ನಾಗರಾಜು, ರಾಜಶೇಖರ ಕದಂಬ, ಎಂ.ಚಂದ್ರಶೇಖರ್, ಕೆ.ಎಸ್.ಶಿವರಾಂ ಇನ್ನಿತರರು ಉಪಸ್ಥಿತರಿದ್ದರು.

Translate »