ಮೈಸೂರು, ನ.2(ಆರ್‍ಕೆಬಿ)- ಮೈಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿ ನಿರ್ದೇಶÀಕರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಬೆಂಬಲಿತ 13 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.
ನ.7ರಂದು ನಿಗದಿಯಾಗಿದ್ದ ಚುನಾವಣೆಗೆ `ಎ ವರ್ಗದಿಂದ 5 ಮಂದಿ, ಬಿ ವರ್ಗದಿಂದ 8 ಮಂದಿ ಆಯ್ಕೆಯಾಗಬೇಕಿತ್ತು. ಅದಕ್ಕೆ ಕ್ರಮವಾಗಿ 8 ಮತ್ತು 21 ನಾಮಪತ್ರ ಸಲ್ಲಿಕೆಯಾಗಿದ್ದವು. ಎ ವರ್ಗದಲ್ಲಿ ಶನಿವಾರ ನಾಮಪತ್ರ ಪರಿಶೀಲನೆ ವೇಳೆ 3 ಅರ್ಜಿಗಳು ತಿರಸ್ಕøತಗೊಂಡಿದ್ದವು. ಹೀಗಾಗಿ ಐವರು ಅವಿರೋಧ ಆಯ್ಕೆಯಾದರು. ಬಿ ವರ್ಗದಲ್ಲಿ 13 ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ 8 ಮಂದಿ ಅವಿರೋಧವಾಗಿ ಆಯ್ಕೆಯಾದರು. 5 ವರ್ಷಗಳ ಅಧಿಕಾರ ಅವಧಿ ಇವರ ದ್ದಾಗಿದೆ. ಎ ವರ್ಗದಿಂದ ದಾಸನಕೊಪ್ಪಲು ಹೊನ್ನಗಿರಿ ಗೌಡ, ಕಾಮನಕೆರೆಹುಂಡಿ ಹೆಚ್.ಗೋಪಾಲ್, ಹಾರೋ ಹಳ್ಳಿ ಎಂ.ಬಿ.ಮಂಜುನಾಥ್, ಚಿಕ್ಕಹಳ್ಳಿ ಎಂ.ಕುಮಾರ್, ಯರಗನಹಳ್ಳಿ ಅಣ್ಣಯ್ಯ, ಬಿ ವರ್ಗದಿಂದ ಬೋಗಾದಿ ಚಂದ್ರ ಶೇಖರ್, ಕಾಮನ ಕೆರೆಹುಂಡಿ ಪ್ರಕಾಶ್, ಕುಂಬಾರಕೊಪ್ಪಲು ಲಲಿತಮ್ಮ, ಬೋಗಾದಿ ರುಕ್ಮಿಣಿ, ಜಟ್ಟಿಹುಂಡಿ ಯೋಗೇಶ್, ಮಾವಿನ ಹಳ್ಳಿ ರಾಮ ಕೃಷ್ಣಚಾರಿ, ಗೋಪಾಲಪುರ ಅಂದಾನಿ, ಜಯಪುರ ರೇಣುಕಾ ಅವಿರೋಧವಾಗಿ ಆಯ್ಕೆಯಾದವರು.