ಅತಿಥಿ ಶಿಕ್ಷಕ : ಅರ್ಜಿ ಆಹ್ವಾನ
ಮೈಸೂರು

ಅತಿಥಿ ಶಿಕ್ಷಕ : ಅರ್ಜಿ ಆಹ್ವಾನ

May 25, 2018

ಮೈಸೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣ ಚೆನ್ನಮ್ಮ/ಅಂಬೇಡ್ಕರ್ ವಸತಿ ಶಾಲೆ/ಇಂದಿರಾ ಗಾಂಧಿ ವಸತಿ ಶಾಲೆ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ ಗಣ ತ, ವಿಜ್ಞಾನ(ಸಿ.ಬಿ.ಝಡ್), ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲು ಅರ್ಜಿ ಆಹ್ವಾನಿಸಿದೆ. ಮೆರಿಟ್ ಆಧಾರದ ಮೇಲೆ ಅರ್ಹರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು. ಮಾಸಿಕವಾಗಿ 10000 ರೂ.ಗಳನ್ನು ನೀಡಲಾಗುವುದು. ಟಿ.ಇ.ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ. ಆಯ್ಕೆಯಾದವರು 6 ರಿಂದ 10ನೇ ತರಗತಿಯವರೆಗೆ ಬೋಧಿಸಬೇಕಾಗಿರುತ್ತದೆ. ಮೇ 31 ರೊಳಗೆ ಅಭ್ಯರ್ಥಿಯ ಸ್ವವಿವರದೊಂದಿಗೆ (Resume) ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆಯ ಅಂಕಪಟ್ಟಿಯ ನಕಲು ಪ್ರತಿಯನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »