ಮೈಸೂರು: ಭಾರತದ ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಆದ ಮ್ಯಾಕ್ಸ್ ತನ್ನ ಮ್ಯಾಕ್ಸ್ ಮಕ್ಕಳ ಉತ್ಸವ ಸಮಾರೋಪ ಸಮಾರಂಭ ಮುಕ್ತಾಯವಾಯಿತು.
ಮೈಸೂರಿನ ಫಾರಮ್ ಸಿಟಿ ಸೆಂಟರ್ ಮಾಲ್‍ನಲ್ಲಿ ಮ್ಯಾಕ್ಸ್ ಮಕ್ಕಳ ಉತ್ಸವವು ಮಕ್ಕಳು ತಮ್ಮ ಪ್ರತಿಭೆಯನ್ನು ತೋರಿಸಿ ತಮ್ಮ ನಗರದಲ್ಲಿಯೇ ತಾವು ತಮ್ಮನ್ನು ಗುರುತಿಸಿಕೊಳ್ಳಲು ಒಂದು ವೇದಿಕೆಯಾಗಿದೆ. ಇದು ಚಿಕ್ಕ ಚಾಂಪ್‍ಗಳಿಗೆ ಗಾಯನದಲ್ಲಿ, ನೃತ್ಯದಲ್ಲಿ, ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ತಮ್ಮ ಪ್ರತಿಭೆಯನ್ನು ತೋರಿಸಲು ಪ್ರೋತ್ಸಾಹಿಸುತ್ತದೆ.
ಉತ್ಸವವು ಹಲವಾರು ಉತ್ಸಾಹಯುಕ್ತ ಮಕ್ಕಳು ಮತ್ತು ಅವರ ಕುತೂಹಲಕಾರಿ ಅಭಿರುಚಿಗಳಿಗೆ ಸಾಕ್ಷಿಯಾಯಿತು. ಗಾಯಕರ, ನೃತ್ಯಕಾರರ ಮತ್ತು ಕಲೆಗಾರರ ಸಮೂಹವು ತಮ್ಮ ಪ್ರತಿಭೆಯ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿತು. ಉತ್ಸವದಲ್ಲಿ ಗಾಯನ, ನೃತ್ಯ ಮತ್ತು ಚಿತ್ರಕಲೆ ಸ್ಪರ್ಧೆಗಳಲ್ಲಿ ಆರೋರಿ, ಚಂದನ್, ಶಮಶೀನ್ ಅವರು ಪ್ರಶಸ್ತಿ ಪಡೆದುಕೊಂಡರು. ಖ್ಯಾತ ನೃತ್ಯಗಾರ್ತಿ ಪೂಜಾ ಜೋಷಿ, ಮಾಡೆಲ್ ರಕ್ಷಾ ಬೆಳ್ಳಿಯಪ್ಪ ಎಂ., ಗಾಯಕ ಅಲಾಪ ಬಿ.ಆರ್. ತೀರ್ಪುಗಾರರಾಗಿದ್ದರು.
ಫೋಟೋ: ಮ್ಯಾಕ್ಸ್