ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಕುಚುಪುಡಿ, ಕಥಕ್, ಭರತನಾಟ್ಯದ ‘ರಸಾಸ್ವಾದ’
ಮೈಸೂರು

ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಕುಚುಪುಡಿ, ಕಥಕ್, ಭರತನಾಟ್ಯದ ‘ರಸಾಸ್ವಾದ’

May 25, 2018

ಮೈಸೂರು:  ಸಂಗೀತ, ಚಲನೆ, ಲಯ ಮತ್ತು ಅಭಿವ್ಯಕ್ತಿಯ ಸಂಯೋಜನೆಯೇ ನೃತ್ಯ. ಇದು ಪ್ರಾದೇಶಿಕ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕøತಿತಿಗಳ ಸಮ್ಮಿಶ್ರ ಕಲೆಯೂ ಹೌದು. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳು ವೈವಿಧ್ಯವೂ, ವಿಶಿಷ್ಟವೂ ಆಗಿದ್ದು, ನಿರ್ದಿಷ್ಟ ಪ್ರದೇಶ, ಬುಡಕಟ್ಟು, ಅವರ ಸಂಗೀತ, ವೇಷಭೂಷಣದ ಪ್ರತಿಬಿಂಬ.

ಹೀಗೆ ವೈಶಿಷ್ಟ್ಯದಿಂದ ಕೂಡಿದ ಕುಚುಪುಡಿ, ಕಥಕ್, ಭರತನಾಟ್ಯ ಸೇರಿದಂತೆ ಕೆಲ ಬಗೆಯ ಶಾಸ್ತ್ರೀಯ ನೃತ್ಯ ಪ್ರದರ್ಶನಗಳನ್ನು ಒಂದೇ ಕಡೆ ನೋಡಲು ಅವಕಾಶ ದೊರೆತರೆ ಹೇಗೆ? ಅದುವೇ ಅಪ್ಪಟ ‘ರಸಾಸ್ವಾದ’. ಸಂಸ್ಕøತದಲ್ಲಿ ‘ರಸಾಸ್ವಾದ’ ಎಂದರೆ ‘ಸೌಂದರ್ಯಾತ್ಮಕ ಆನಂದ ಅನುಭವಿಸುವ ಕಲೆ’ ಎಂದರ್ಥ.

ಮೈಸೂರಿನ ಗಾನಭಾರತಿ (ವೀಣೆ ಶೇಷಣ್ಣ ಭವನ)ದಲ್ಲಿ ಇತ್ತೀಚೆಗೆ ಆರ್ಟಿಕ್ಯುಲೇಟ್ ನೃತ್ಯೋತ್ಸವದ 24ನೇ ಸರಣ ಪ್ರೇಕ್ಷಕರಿಗೆ ಅತ್ಯಂತ ಆಕರ್ಷಕಣೀಯ ಅನುಭವ ನೀಡಿತು. ಪ್ರತಿ ಬಾರಿಯಂತೆ ನಾಲ್ಕು ಘಟಕಗಳನ್ನು ಸಾಲಾಗಿಸಿ, ನಾಲ್ವರು ಜೋಡಿ ಮಾದರಿಯಲ್ಲಿ ಭರತನಾಟ್ಯ ಪ್ರದರ್ಶಿಸಿದರೆ ಓರ್ವ ಕಲೆಗಾತಿ ಕಥಕ್ ಮತ್ತೋರ್ವ ಕಲಾವಿದೆ ಕುಚುಪುಡಿ ನೃತ್ಯ ಪ್ರದರ್ಶಿಸಿದರು. ಕರ್ನಾಟಕ ಕಲಾತಿಲಕ ಗುರು ಶ್ರೀಮತಿ ರಾಧಾ ಶ್ರೀಧರ್‍ರವರ ಶಿಷ್ಯಂದಿರಾದ ಶ್ವೇತಾ ಕೆ. ಪುರೋಹಿತ್ ಮತ್ತು ಸಿಂಧು ಕೆ. ಪುರೋಹಿತ್ ಎರಡು ಭರತನಾಟ್ಯ ಕಾರ್ಯಕ್ರಮ ನೀಡಿದರು. ಕೃತಿಯಾದಂತಹ ‘ಆಡೇನಮ್ಮ’ ಎಂಬುದು ದೊರೈಸ್ವಾಮಿ ಐಯ್ಯರ್ ಅವರದಾದರೆ ಅದು ರಾಗ ‘ಫರಾeóï’ ಮತ್ತು ‘ಪಾಲ್‍ಕಡಲ್’ ಉದುಮಲೈ ಪೆಟ್ಟಾಯಿ ನಾರಾಯಣ ಕವಿ ಅವರ ರಾಗಮಾಲಿಕ ಕೃತಿ ಎಲ್ಲವೂ ಆದಿತಾಳದಲ್ಲಿ ಇತ್ತು. ಶ್ವೇತಾ ಮತ್ತು ಸಿಂಧು ರಸಿಕರ ಮನ ಸೋಲುವಂತೆ ನೃತ್ಯ ಪ್ರದರ್ಶಿಸಿದರು.

ಅಖಿಲ ದೀಪಕ್‍ರವರು ಶ್ರೀಮತಿ ಲಕ್ಷ್ಮೀ ರಾಜಮಣ ಯವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದವರು. ಅವರು ‘ಕೃಷ್ಣ ಶಬ್ದಂ’ ಮತ್ತು ‘ತರಂಗಂ’ ಎಂಬ ಮೋಹನರಾಗ ಮತ್ತು ಆದಿತಾಳಗಳನ್ನೊಳಗೊಂಡ ಏಕವ್ಯಕ್ತಿ ಪ್ರಕಾರದ ಕುಚುಪುಡಿ ನೃತ್ಯ ಪ್ರದರ್ಶಿಸಿದರು. ತರಂಗಂ ಎನ್ನುವ ನೃತ್ಯದಲ್ಲಿ ನರ್ತಕಿಯು ಹಿತ್ತಾಳೆ ತಟ್ಟೆಯ ಅಂಚಿನ ಮೇಲೆ ಪಾದಗಳನ್ನಿರಿಸಿ ಶಿರದಲ್ಲಿ ಜಲ ತುಂಬಿರುವ ಕಲಶವೊಂದಿರಿಸಿ ಆಕರ್ಷಕವಾಗಿ ನೃತ್ಯ ಸಾದರಪಡಿಸಿದರು.

ಅಮಿತಾ ಮಾಥುರ್ ಅವರು ಗುರು ನಿರುಪಮ ರಾಜೇಂದ್ರ ಅವರ ಶಿಷ್ಯೆ. ಅವರು ಏಕವ್ಯಕ್ತಿ ಶೈಲಿಯ ಕಥಕ್ ನೃತ್ಯದಲ್ಲಿ ತರಬೇತಿ ಪಡೆದು ಇಂದು ‘ಕೃಷ್ಣ ವಂದನ’ ಎಂಬ ‘ತೀನ್ ತಾಳ್’ ಮಾಲಿಕ ವಿಳಂಬಿತ ಲಯ ಮತ್ತು ದೃತ್ ಲಯಗಳ ಜೊತೆ ಅತ್ಯಂತ ವಿಶೇಷ ಶೈಲಿಯಲ್ಲಿ ನೃತ್ಯ ಪ್ರದರ್ಶನ ಮಾಡಿದರು. ಅವರು ಕೃಷ್ಣನ ಲೀಲೆಗಳನ್ನು ತಿಳಿಸಿ, ನಂತರ ಎರಡನೇ ಹಂತದಲ್ಲಿ ರಸ ಎಂಬ ವಿಷಯದಲ್ಲಿ ಕಥಕ್ ನೃತ್ಯದ ತಾಂತ್ರಿಕ ವಿಷಯ ತಿಳಿಸುತ್ತಾ ತರಾನಾದೊಂದಿಗೆ ಮುಕ್ತಾಯಪಡಿಸಿದರು.
ಅಂಜಲಿ ಶ್ರೀಕಾಂತ್ ಅಯ್ಯಂಗಾರ್ ಮತ್ತು ನೀತು ಆನಂದ್ ಅವರ ಜೋಡಿ ಮಾದರಿಯ ಭರತನಾಟ್ಯ ಪ್ರದರ್ಶಿಸುವ ಮೂಲಕ ಶಿವನ ಶಕ್ತಿ ಮತ್ತು ಅಂತಃರೂಪವನ್ನೂ ತಿಳಿಸಿತು. ಎರಡನೆಯ ನೃತ್ಯದಲ್ಲಿ ಶ್ರೀರಾಮನ ಸ್ತುತಿಯನ್ನು ನೃತ್ಯದ ಮೂಲಕ ಪ್ರದರ್ಶಿಸಿದರು. ಪ್ರಥಮವಾಗಿ ಭಾಟಿಯಾರ್-ಪಳಿನಿ ರಾಗವನ್ನು ಆದಿತಾಳದ ಮೂಲಕ ‘ಪಾಶ್ರ್ವಪತೇ ಶಂಭೋ’ ಎಂಬುದು ಮತ್ತು ಎರಡನೆಯದು ಯಮನ್ ಕಲ್ಯಾಣ ರಾಗ ಮತ್ತು ಆದಿತಾಳದೊಂದಿಗೆ ‘ರಾಮ ರಾಮ ಎಂದು’ ಎಂಬ ನೃತ್ಯ ಪ್ರದರ್ಶಿಸಿದರು. ಇದು ಡಾ. ಶಾಂತಾರಾಂರವರ ರಚನೆಯಾಗಿತ್ತು.

ಕಾರ್ಯಕ್ರಮದ ನಿರ್ದೇಶಕರಾದ ಮೈಸೂರು ಬಿ. ನಾಗರಾಜ್‍ರವರು ಅಲ್ಲಿ ನೆರೆದಿದ್ದ ಜನರನ್ನು ಮುಂದಿನ 25ನೇ ಸರಣ ಯ ಹಬ್ಬಕ್ಕೆ ಬರುವಂತೆ ಆಹ್ವಾನ ನೀಡಿದರಲ್ಲದೇ, ಗುರು ಶಾಮ ಭಾಟೇ, ಗುರು ದೀಪಕ್ ಮಜುಂದಾರ್ ಮತ್ತು ಪದ್ಮಶ್ರೀ ರಂಜನಾ ಗೌಹಾರ್‍ರವರ ಕಥಕ್, ಭರತನಾಟ್ಯ ಮತ್ತು ಒಡಿಸ್ಸಿ ನೃತ್ಯಗಳನ್ನು ಸಾತ್ವಿಕ್ ಅನುಭವದೊಂದಿಗೆ ಜೂನ್ 17ರಂದು ಪ್ರದರ್ಶಿಸುವರು ಎಂದು ತಿಳಿಸಿದರು.

 

Translate »