15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ವರ್ಣರಂಜಿತ ತೆರೆ ಪಾದಾರ್ಪಣೆ ಆವೃತ್ತಿಯಲ್ಲೇ ಗುಜರಾತ್ ಚಾಂಪಿಯನ್
ಮೈಸೂರು

15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ವರ್ಣರಂಜಿತ ತೆರೆ ಪಾದಾರ್ಪಣೆ ಆವೃತ್ತಿಯಲ್ಲೇ ಗುಜರಾತ್ ಚಾಂಪಿಯನ್

May 30, 2022

ಅಹಮದಾಬಾದ್, ಮೇ ೨೯- ರೋಚಕ ಫೈನಲ್ ಕದನದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಗುಜ ರಾತ್ ಟೈಟಾನ್ಸ್ ಚೊಚ್ಚಲ ಹಾಗೂ ಪಾದಾರ್ಪಣೆ ಆವೃತ್ತಿಯಲ್ಲೇ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ಐಪಿಎಲ್ ಟ್ರೋಫಿಯೊಂದಿಗೆ ೨೦ ಕೋಟಿ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡರೇ, ರಾಜಸ್ಥಾನ್ ರಾಯಲ್ಸ್ ಟ್ರೋಫಿ ಹಾಗೂ ೧೨.೫ ಕೋಟಿ ರೂ. ನಗದು ಬಹುಮಾನದೊಂದಿಗೆ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದರೊಂದಿಗೆ ಕಳೆದ ೨ ತಿಂಗ ಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ಬೌಂಡರಿ, ಸಿಕ್ಸರ್‌ಗಳ ಮೂಲಕ ರಸದೌತಣ ನೀಡಿದ ೧೫ನೇ ಆವೃತ್ತಿಯ ಇಂಡಿ ಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ವರ್ಣರಂಜಿತ ತೆರೆಬಿದ್ದಿದೆ. ಮತ್ತೊಂದೆಡೆ ಗುಜರಾತ್ ತಾವಾಡಿದ ಮೊದಲ ಸೀಸನ್‌ನಲ್ಲೇ ಟ್ರೋಫಿ ಗೆದ್ದ ಸಾಧನೆ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ದಾಖಲೆ
ಸರಿಗಟ್ಟಿದರೇ, ಅತ್ತ ರಾಜಸ್ಥಾನ್ ೧೪ ವರ್ಷಗಳ ಬಳಿಕ ಮತ್ತೆ ಟ್ರೋಫಿ ಜಯಸುವ ಕನಸು ಭಗ್ನಗೊಂಡಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ ೨೦ ಓವರ್‌ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೩೦ ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ ೩೧ ರನ್‌ಗಳ ಜೊತೆಯಾಟವಾಡಿದರು. ಆದರೆ ೨ ಸಿಕ್ಸರ್, ೧ ಬೌಂಡರಿ ಒಳಗೊಂಡ ೨೨ ರನ್ ಗಳಿಸಿ ಉತ್ತಮವಾಗಿ ಆಡು ತ್ತಿದ್ದ ಜೈಸ್ವಾಲ್, ಯಶ್ ದಯಾಲ್‌ಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ ೧೪ ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರೇ, ಕನ್ನಡಿಗ ದೇವದತ್ ಪಡಿಕ್ಕಲ್ ೨ ರನ್ ಗಳಿಸಿ ರಶೀದ್ ಖಾನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಇನ್ನೊಂದೆಡೆ ದಿಟ್ಟ ಹೋರಾಟ ಪ್ರದರ್ಶಿಸಿದ ಬಟ್ಲರ್ ೫ ಬೌಂಡರಿ ಒಳಗೊಂಡ ೩೯ ರನ್ ಗಳಿಸಿ ಔಟಾದರು. ೧೧ ರನ್ ಗಳಿಸಿದ್ದ ಶಿಮ್ರಾನ್ ಹೆಟ್ಮೆಯರ್ ಕೂಡ ಹಾರ್ದಿಕ್ ಬಲೆಗೆ ಬಿದ್ದರು. ಅಂತಿಮವಾಗಿ ರಿಯಾನ್ ಪರಾಗ್ ೧೫, ಆರ್. ಅಶ್ವಿನ್ ೬, ಟ್ರೆಂಟ್ ಬೌಲ್ಟ್ ೧೧ ಹಾಗೂ ಒಬೆಡ್ ಮೆಕೋಯ್ ೮ ರನ್ ಗಳಿಸಿದರು. ಗುಜರಾತ್ ಪರ ನಾಯಕ ಹಾರ್ದಿಕ್ ಪಾಂಡ್ಯ ೩, ಸಾಯಿ ಕಿಶೋರ್ ೨, ರಶೀದ್ ಖಾನ್, ಯಶ್ ದಯಾಲ್ ಹಾಗೂ ಮೊಹಮ್ಮದ್ ಶಮಿ ತಲಾ ಒಂದೊAದು ವಿಕೆಟ್ ಕಬಳಿಸಿದರು.

ನಂತರ ಸಾಧಾರಣ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಆರಂಭ ಉತ್ತಮವಾಗಿರ ಲಿಲ್ಲ. ತಂಡದ ಮೊತ್ತ ೨೩ ರನ್ ಆಗುವಷ್ಟರಲ್ಲಿ ಗುಜರಾತ್ ೨ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವೃದ್ಧಿಮಾನ್ ಸಹ ೭, ಮ್ಯಾಥ್ಯೂ ವೇಡ್ ೮ ರನ್ ಗಳಿಸಿ ಪೆವಿಲಿ ಯನ್ ಸೇರಿಕೊಂಡರು. ಈ ವೇಳೆ ಒಂದಾದ ಶುಭ್‌ಮನ್ ಗಿಲ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಮೂರನೇ ವಿಕೆಟ್‌ಗೆ ೬೩ ರನ್ ಜೊತೆಯಾಟವಾಡುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಪಾಂಡ್ಯ ೩೪ ರನ್ ಗಳಿಸಿ ಚಹಲ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಡೇವಿಡ್ ಮಿಲ್ಲರ್ ಗಿಲ್ ಜೊತೆಗೂಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಉಳಿದಂತೆ ಮಿಲ್ಲರ್ ೩೨, ಶುಭ್‌ಮನ್ ಗಿಲ್ ೪೫ ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ೧೮.೧ ಓವರ್‌ಗಳಲ್ಲಿ ೧೩೩ ರನ್ ಗಳಿಸುವ ಮೂಲಕ ಗುಜರಾತ್ ಗೆಲುವಿನ ನಗೆ ಬೀರಿತು. ರಾಜಸ್ಥಾನ್ ಪರ ಟ್ರೆಂಟ್ ಬೋಲ್ಟ್, ಪ್ರಸಿದ್ಧ ಕೃಷ್ಣ, ಚಹಲ್ ತಲಾ ಒಂದೊAದು ವಿಕೆಟ್ ಪಡೆದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜೋಸ್ ಬಟ್ಲರ್ ಸರಣ ಶ್ರೇಷ್ಠ ಪ್ರಶಸ್ತಿ ಪಡೆದರು.

ಸಮಾರೋಪ ಸಮಾರಂಭ: ಪಂದ್ಯಕ್ಕೂ ಮುನ್ನಾ ನಡೆದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್, ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ರಣವೀರ್ ಸಿಂಗ್ ಕೆಜಿಎಫ್ ೨ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರೇ, ರೆಹಮಾನ್ ದೇಶಭಕ್ತಿ ಹಾಡಿನ ಮೂಲಕ ಕ್ರೀಡಾ ಪ್ರಪಂಚವನ್ನು ಮತ್ತೊಂದು ದಿಕ್ಕಿನೆಡೆ ಕರೆದುಕೊಂಡು ಹೋದರು.

ಗಿನ್ನಿಸ್ ದಾಖಲೆ: ಕ್ರೀಡಾಂಗಣದಲ್ಲಿ ಅತಿದೊಡ್ಡ ಟಿ-ಶರ್ಟ್ ಅನ್ನು ಹಾಕಲಾಗಿತ್ತು. ಅದರ ಉದ್ದ ೬೬ ಮೀಟರ್ ಇದ್ದು, ಈ ಮೂಲಕ ಐಪಿಎಲ್ ನಲ್ಲಿ ಗಿನ್ನಿಸ್ ದಾಖಲೆ ಯೊಂದು ಸೃಷ್ಟಿಯಾಯಿತು. ವೇದಿಕೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಂಡಳಿ ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಉಪಸ್ಥಿತರಿದ್ದರು.

Translate »