ಮೈಸೂರಿನ ವಿಶೇಷಚೇತನ ವಿದ್ಯಾರ್ಥಿನಿಗೆ ಮೋದಿ ಪ್ರಶಂಸೆ
ಮೈಸೂರು

ಮೈಸೂರಿನ ವಿಶೇಷಚೇತನ ವಿದ್ಯಾರ್ಥಿನಿಗೆ ಮೋದಿ ಪ್ರಶಂಸೆ

May 30, 2022

ಉತ್ತರಾಖAಡ ಮೂಲದ ವಿದ್ಯಾರ್ಥಿನಿಗೆ ನೆರವಾದ ಪ್ರೊ. ತಾರಾಮೂರ್ತಿ ಬಗ್ಗೆಯೂ ಮೆಚ್ಚುಗೆ
ಮೈಸೂರು, ಮೇ ೨೯(ಎಸ್‌ಬಿಡಿ)- ಪ್ರಧಾನಿ ನರೇಂದ್ರ ಮೋದಿ `ಮನ್ ಕಿ ಬಾತ್’ನಲ್ಲಿ ಉತ್ತರಾಖಂಡ ಮೂಲದ ಮೈಸೂರಿನ ವಿಶೇಷಚೇತನ ವಿದ್ಯಾರ್ಥಿನಿ ಕಲ್ಪನಾ ಹಾಗೂ ಆಕೆಗೆ ಆಸರೆಯಾದ ಪ್ರೊ.ತಾರಾಮೂರ್ತಿ ಅವರನ್ನು ಪ್ರಶಂಸಿಸುವ ಮುಖೇನ ದೇಶದ ಭಾಷೆ, ಲಿಪಿ, ಸಂಸ್ಕೃತಿ ವೈವಿಧ್ಯತೆ ಬಗ್ಗೆ ಮಾತನಾಡಿದರು.

ರೇಡಿಯೋದಲ್ಲಿ ಭಾನುವಾರ ಪ್ರಸಾರವಾದ ಮನ್ ಕಿ ಬಾತ್ ಕಾರ್ಯಕ್ರಮದ ೮೯ನೇ ಎಪಿ ಸೋಡ್‌ನಲ್ಲಿ ಪ್ರಧಾನಿ ಮೋದಿ, ಹಲ ವಾರು ಭಾಷೆ, ಲಿಪಿ, ಉಪಭಾಷೆ (ಆಡು ಭಾಷೆ)ಗಳ ಸಂಪತ್ತನ್ನು ಭಾರತ ಹೊಂದಿದೆ. ವಿವಿಧ ಪ್ರದೇಶ ದಲ್ಲಿ ವಿಭಿನ್ನ ರೀತಿಯ ಉಡುಗೆ-ತೊಡುಗೆ, ಆಹಾರ ಪದ್ಧತಿ, ಸಂಸ್ಕೃತಿ ಹಾಸುಹೊಕ್ಕಾಗಿದೆ. ಇದು ನಮ್ಮ ದೇಶದ ಹೆಗ್ಗುರುತು ಹಾಗೂ ವಿವಿಧತೆಯಲ್ಲಿ ಏಕತೆಯ ಪ್ರತೀಕ. ಈ ವೈವಿಧ್ಯತೆ ನಮ್ಮನ್ನು ಸಶಕ್ತಗೊಳಿಸುವುದರ ಜೊತೆಗೆ ಎಲ್ಲರನ್ನೂ ಒಂದುಗೂಡಿಸುತ್ತದೆ ಎಂದರು.
ಇದಕ್ಕೆ ಪೂರಕವಾಗಿ ನಮ್ಮ ದೇಶದ ಮಗಳು ಕಲ್ಪನಾಳ ಪ್ರೇರಣಾತ್ಮಕ ಉದಾ ಹರಣೆಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇನೆ. ಅವರ ಒಂದು ಪ್ರಯತ್ನ `ಏಕ್ ಭಾರತ್-ಶ್ರೇಷ್ಠ ಭಾರತ್’
ಪರಿಕಲ್ಪನೆಯನ್ನು ಸಾಕ್ಷೀಕರಿಸಿದೆ. ಅವರು ಪ್ರಸ್ತುತ ಕರ್ನಾಟಕದಲ್ಲಿ ೧೦ನೇ ತರಗತಿ ಪರೀಕ್ಷೆಯನ್ನು ಬರೆದು ಉತ್ತಿರ್ಣವಾಗಿದ್ದಾರೆ. ಆದರೆ ಅವರ ಸಫಲತೆಯಲ್ಲಿ ತುಂಬಾ ವಿಶೇಷವಾದ ವಿಚಾರವಿದೆ. ಅದೇನೆಂದರೆ ಇದಕ್ಕೂ ಮುನ್ನ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಕೇವಲ ೩ ತಿಂಗಳಲ್ಲಿ ಕನ್ನಡ ಕಲಿತು, ಆ ವಿಷಯದಲ್ಲಿ ೯೨ ಅಂಕ ಗಳಿಸಿದ್ದಾರೆ. ನಿಮಗೆ ಆಶ್ಚರ್ಯವೆನಿಸಿದರೂ ಇದು ಸತ್ಯ ಎಂದರು.

ಕಲ್ಪನಾರ ಮತ್ತಷ್ಟು ವಿಚಾರಗಳು ಆಶ್ಚರ್ಯಚಕಿತಗೊಳಿಸುವುದರ ಜೊತೆಗೆ ಪ್ರೇರಣಾತ್ಮಕ ವಾಗಿವೆ. ಕಲ್ಪನಾ ಮೂಲತಃ ಉತ್ತರಾಖಾಂಡ ಜೋಶಿಮಠದ ನಿವಾಸಿಯಾಗಿದ್ದು, ಅವರು ಟಿಬಿ ಪೀಡಿತರಾಗಿದ್ದಾರೆ. ೩ನೇ ತರಗತಿಯಲ್ಲಿದ್ದಾಗ ಅವರು ದೃಷ್ಟಿಯನ್ನೂ ಕಳೆದುಕೊಂಡಿದ್ದಾರೆ. ಆದರೂ ಅವರು ತನ್ನ ಪ್ರಯತ್ನ ಬಿಟ್ಟಿಲ್ಲ. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಮುನ್ನಡೆದಿದ್ದಾರೆ. ಮೈಸೂರಿನ ಪ್ರೊ.ತಾರಾ ಮೂರ್ತಿ ಅವರ ಸಂಪರ್ಕ ಸಿಕ್ಕಿದೆ. ತಾರಾ ಮೂರ್ತಿ ಅವರು ಕಲ್ಪನಾಗೆ ಕೇವಲ ಪ್ರೋತ್ಸಾಹಿಸಿದ್ದಲ್ಲದೆ ತುಂಬಾ ಸಹಾಯ ಮಾಡಿದ್ದಾರೆ. ಒಟ್ಟಾರೆ ಕಲ್ಪನಾ ತನ್ನ ಛಲ, ಪರಿಶ್ರಮದಿಂದ ಈ ದಿನ ನಮ್ಮೆಲ್ಲರ ಮುಂದೆ ಉತ್ತಮ ಉದಾಹರಣೆಯಾಗಿ ನಿಂತಿದ್ದಾಳೆ ಎಂದು ಪ್ರಧಾನಿ ಮೋದಿ ಬಣ ್ಣಸಿದರು.

`ಮೈಸೂರು ಮಿತ್ರ’ ಹಾಗೂ ಸೋದರ ಪತ್ರಿಕೆ ಸಂಜೆ ಇಂಗ್ಲಿಷ್ ದೈನಿಕ `ಸ್ಟಾರ್ ಆಫ್ ಮೈಸೂರ್’ನ ಮೇ ೨೦ರ ಸಂಚಿಕೆಯಲ್ಲಿ ಕಲ್ಪನಾಳ ಸಾಧನೆ ಹಾಗೂ ಅದಕ್ಕೆ ಕಾರಣರಾದ ಪ್ರೊ.ತಾರಾ ಮೂರ್ತಿ ಅವರ ಕುರಿತಾದ ಸಮಗ್ರ ವರದಿಯನ್ನು ಪ್ರಕಟಿಸಲಾಗಿತ್ತು.

ತುಂಬಾ ಆಶ್ಚರ್ಯವಾಯಿತು…
ನಾನು ಏನು ಹೇಳಲಿ, ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಈ ವಿಚಾರ ಪ್ರಧಾನಿಯವರ `ಮನ್ ಕಿ ಬಾತ್’ವರೆಗೂ ತಲುಪುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ. ಇದರಿಂದ ಆ ಮಗುವಿನ ಶಿಕ್ಷಣ ಹಾಗೂ ಭವಿಷ್ಯಕ್ಕೆ ಬೇರೆಯವರೂ ಸಹಾಯ ಮಾಡಲು ಅವ ಕಾಶವಾಗಬಹುದು ಎನ್ನುವುದು ಖುಷಿಯ ವಿಚಾರ. ತಾರಾಮೂರ್ತಿ ಅವರು ಕಲ್ಪನಾ ಳನ್ನು ಪ್ರೋತ್ಸಾಹಿಸಿ, ಆಕೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದನ್ನು ಕೇಳಿ ಖುಷಿ ಆಯಿತು. ನನಗೆ ಪ್ರಚಾರದ ಅಗತ್ಯವಿರಲಿಲ್ಲ. ಕಲ್ಪನಾಳ ಬಗ್ಗೆ ಮೊದಲು `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ನಲ್ಲಿ ನಂತರ ಬೇರೆ ಪತ್ರಿಕೆಗಳಲ್ಲೂ ವರದಿ ಪ್ರಕಟವಾಯಿತು. ಒಟ್ಟಾರೆ ಕಲ್ಪನಾಳಿಗೆ ಅನು ಕೂಲವಾದರೆ ಅಷ್ಟೇ ಸಾಕು.
-ಪ್ರೊ. ತಾರಾಮೂರ್ತಿ, ಮೈಸೂರು

ಯುನಿಕಾರ್ನ್ ಮೂಲಕ ೨೫ ಲಕ್ಷ ಕೋಟಿಗೂ ಹೆಚ್ಚು ಹಣ ಸಂಗ್ರಹ
ನವದೆಹಲಿ, ಮೇ ೨೯- ಇದೇ ತಿಂಗಳ ೫ರಂದು ದೇಶದಲ್ಲಿ ಯುನಿಕಾರ್ನ್ ಕಂಪನಿಗಳ ಸಂಖ್ಯೆ ೧೦೦ರ ಗಡಿ ತಲುಪಿದ್ದು, ಯುನಿಕಾರ್ನ್ ಮೂಲಕ ೨೫ ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಲಾಗಿದೆ. ಇದು ಪ್ರತಿ ಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಕಾರ್ಯ ಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾ ಡಿದ್ದು, ಕೆಲ ದಿನಗಳ ಹಿಂದಷ್ಟೇ ದೇಶ ನಮಗೆಲ್ಲ ರಿಗೂ ಸ್ಫೂರ್ತಿ ನೀಡುವಂತಹ ಸಾಧನೆ ಮಾಡಿದೆ. ಕ್ರಿಕೆಟ್ ಮೈದಾನದಲ್ಲಿ ಶತಕದ ಬಗ್ಗೆ ಕೇಳುತ್ತಲೇ ಇರುತ್ತೀರಿ. ಇನ್ನೊಂದು ಮೈದಾನದಲ್ಲಿ ಭಾರತ ಶತಕ ಬಾರಿಸಿದೆ. ಇದು ತುಂಬಾ ವಿಶೇಷವಾಗಿದೆ. ಇದೇ ತಿಂಗಳ ೫ರಂದು ದೇಶದಲ್ಲಿ ಯುನಿಕಾರ್ನ್ ಕಂಪನಿಗಳ ಸಂಖ್ಯೆ ೧೦೦ರ ಗಡಿ ತಲುಪಿದೆ ಎಂದರು.

ನಮ್ಮ ಒಟ್ಟು ಯುನಿಕಾರ್ನ್ಗಳ ಪೈಕಿ ೪೪ ಕಳೆದ ವರ್ಷವೇ ಮಾಡಲಾಗಿತ್ತು. ಈ ವರ್ಷ ಮೂರ್ನಾಲ್ಕು ತಿಂಗಳಲ್ಲಿ ಇನ್ನೂ ೧೪ ಯುನಿ ಕಾರ್ನ್ಗಳನ್ನು ತಯಾರಿಸಲಾಗಿದೆ. ಭಾರತ ಮತ್ತೊಂದು ಪ್ರದೇಶದಲ್ಲಿ ಶತಕ ಬಾರಿಸಿದ್ದು ಸಾಕಷ್ಟು ವಿಶಿಷ್ಟವಾಗಿದೆ. ಪ್ರಸ್ತುತ, ಈ ಯುನಿ ಕಾರ್ನ್ಗಳ ಒಟ್ಟು ಮೌಲ್ಯವು ಸುಮಾರು ೩೩೦ ಶತಕೋಟಿ ಡಾಲರ್‌ಗಳಾಗಿದ್ದರೆ, ಪ್ರತಿ ಯುನಿ ಕಾರ್ನ್ನ ಮೌಲ್ಯವು ೭,೫೦೦ ಕೋಟಿ ರೂ.ಗಳಾ ಗಿದೆ. ನಮ್ಮ ಸ್ಟಾರ್ಟ್ಅಪ್‌ಗಳು ಕೊರೊನಾ ಅವಧಿಯಲ್ಲಿಯೂ ಸಂಪತ್ತು ಮತ್ತು ಮೌಲ್ಯ ಗಳಿಸುವುದನ್ನು ಮುಂದುವರೆಸಿದವು. ದೇಶದಲ್ಲಿ ಸ್ಟಾರ್ಟ್ಅಪ್‌ಗಳಿಗೆ ಅನುಕೂಲಕರ ವಾತಾ ವರಣವಿದೆ. ದೊಡ್ಡ ಮಹಾನಗರಗಳಷ್ಟೇ ಅಲ್ಲ, ಸಣ್ಣ ಪಟ್ಟಣಗಳಲ್ಲೂ ಸ್ಟಾರ್ಟಪ್‌ಗಳು ರೂಪು ಗೊಳ್ಳುತ್ತಿವೆ ಎಂದು ಹೇಳಿದರು.

ಜೊಹೊ ಕಾರ್ಪೊರೇಷನ್‌ನ ಸಿಇಒ ಶ್ರೀಧರ್ ವೆಂಬು ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿ ದರು. “ಸ್ಟಾರ್ಟ್ಅಪ್‌ಗಳ ವಿಷಯಕ್ಕೆ ಬಂದಾಗ ಸರಿಯಾದ ಮಾರ್ಗದರ್ಶನ
ಬಹಳ ಮುಖ್ಯ. ಗ್ರಾಮೀಣ ಯುವಕರನ್ನು ಸ್ಟಾರ್ಟ್ಅಪ್ ಜಗತ್ತಿಗೆ ಸಂಪರ್ಕಿಸುತ್ತಿರುವ ಶ್ರೀಧರ್ ವೆಂಬು ಅಂತಹ ಒಂದು ಉದಾಹರಣೆ. ವೆಂಬು ಇತ್ತೀಚೆಗೆ ಪದ್ಮ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಸ್ವತಃ ಯಶಸ್ವಿ ಉದ್ಯಮಿ, ಆದರೆ ಈಗ ಅವರು ಸಹ ಇತರ ಉದ್ಯಮಿಗಳನ್ನು ರೂಪಿಸುವ ಕೆಲಸವನ್ನು ಸ್ವತಃ ವಹಿಸಿಕೊಂಡರು. ಶ್ರೀಧರ್ ಅವರು ಗ್ರಾಮೀಣ ಪ್ರದೇಶದಿಂದ ತಮ್ಮ ಕೆಲಸವನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.
ಅಂತೆಯೇ ಗ್ರಾಮೀಣ ಉದ್ಯಮಿಗಳನ್ನು ಉತ್ತೇಜಿಸಲು ಒನ್-ಬ್ರಿಡ್ಜ್ನಿಂದ ಮದನ್ ಪದಕಿ ಅವರ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಮದನ್ ಪದಕಿ ಜಿ ಅವರು ಗ್ರಾಮೀಣ ಉದ್ಯಮಿಗಳನ್ನು ಪ್ರೋತ್ಸಾಹಿಸಲು `೧ ಬ್ರಿಡ್ಜ್’ ಎಂಬ ವೇದಿಕೆಯನ್ನು ಪ್ರಾರಂಭಿಸಿದರು. ೯೦೦೦ ಕ್ಕೂ ಹೆಚ್ಚು ಗ್ರಾಮೀಣ ಉದ್ಯಮಿಗಳು ಈ ವೇದಿಕೆಯ ಮೂಲಕ ಗ್ರಾಹಕರಿಗೆ ತಮ್ಮ ಸೇವೆಗಳನ್ನು ವಿಸ್ತರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ಪ್ರಸ್ತುತ ನಮ್ಮ ದೇಶದಲ್ಲಿ ಚಾರ್ ಧಾಮ್ ಯಾತ್ರೆ ನಡೆಯುತ್ತಿದೆ. ಚಾರ್ ಧಾಮ್ ಮತ್ತು ಕೇದಾರನಾಥಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಜನರು ತಮ್ಮ ಆಹ್ಲಾದಕರ ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಕೆಲ ಪ್ರಯಾಣ ಕರು ಕೊಳಕು ಎರಚುವಂಥ ಚಿತ್ರಗಳೂ ಬರುತ್ತಿವೆ. ಇದು ಸರಿಯಲ್ಲ. ಕೆಲವರು ಅಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ತೀರ್ಥೋದ್ಭವ ಸೇವೆಯ ಮಹತ್ವ ವನ್ನೂ ಇಲ್ಲಿ ಹೇಳಲಾಗಿದೆ. ಎಲ್ಲೇ ಹೋದರೂ ಘನತೆ ಕಾಯ್ದುಕೊಳ್ಳಬೇಕು ಎಂದರು.

ಜೂನ್ ೫ ವಿಶ್ವ ಪರಿಸರ ದಿನ ಎಂದು ಹೇಳಿದ ಮೋದಿ, ಪರಿಸರ ದಿನದ ಬಗ್ಗೆ ನಮ್ಮ ಸುತ್ತ ಪ್ರಚಾರ ಮಾಡಬೇಕು. ಗಿಡಗಳನ್ನು ನೆಡುವುದು ಮತ್ತು ಪರಿಸರ ಉಳಿಸುವ ಸಂಬAಧ ಅಭಿಯಾನಗಳನ್ನು ನಡೆಸಬಹುದು. ಮುಂದಿನ ತಿಂಗಳು ಜೂನ್ ೨೧ ರಂದು ನಾವು ೮ನೇ ಅಂತರಾಷ್ಟಿçÃಯ ಯೋಗ ದಿನವನ್ನು ಆಚರಿಸುತ್ತಿದ್ದೇವೆ. ಯೋಗ ದಿನವನ್ನು ಉತ್ಸಾಹದಿಂದ ಆಚರಿಸಲು ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಜಗತ್ತಿನಾದ್ಯಂತ ಯೋಗ ದಿನಾಚರಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಸಮಯದಲ್ಲಿ, ಕೊರೊನಾ ಮಾರ್ಗಸೂಚಿಗಳನ್ನು ಸಹ ಅನುಸರಿಸಬೇಕು. ಆರೋಗ್ಯಕ್ಕೆ ಯೋಗ ಎಷ್ಟು ಮುಖ್ಯ ಎಂಬುದನ್ನು ಕೊರೋನಾ ನಮಗೆ ಅರಿವು ಮೂಡಿಸಿದೆ.

ನಮ್ಮ ದೇಶದಲ್ಲಿ ಈ ಬಾರಿ ಅಮೃತ ಮಹೋತ್ಸವವನ್ನು ಗಮನದಲ್ಲಿಟ್ಟುಕೊಂಡು ೧೫ ಸ್ಥಳಗಳಲ್ಲಿ ಯೋಗ ಉತ್ಸವಗಳನ್ನು ಆಯೋಜಿಸಲಾಗಿದೆ. ಪ್ರಸ್ತುತ ಯೋಗ ದಿನಾಚರಣೆಗೆ ೧೦೦ ದಿನಗಳ ಕೌಂಟ್‌ಡೌನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗು ತ್ತಿದೆ. ನೀವು ಈಗಿನಿಂದಲೇ ಯೋಗ ದಿನದ ತಯಾರಿಯನ್ನು ಪ್ರಾರಂಭಿಸಬೇಕು. ಎಲ್ಲರೂ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

 

Translate »