ಗುಜರಾತ್ ತೂಗು ಸೇತುವೆ ದುರಂತ: ಮೃತರ ಸಂಖ್ಯೆ 141ಕ್ಕೆ ಏರಿಕೆ
News

ಗುಜರಾತ್ ತೂಗು ಸೇತುವೆ ದುರಂತ: ಮೃತರ ಸಂಖ್ಯೆ 141ಕ್ಕೆ ಏರಿಕೆ

November 1, 2022

ಮೊರ್ಬಿ(ಗುಜರಾತ್): ಗುಜರಾತ್‍ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟ ವರ ಸಂಖ್ಯೆ 141ಕ್ಕೆ ಏರಿಕೆಯಾಗಿದ್ದು, ಈವರೆಗೂ 177ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೇನೆ, ನೌಕಾಪಡೆ, ವಾಯುಪಡೆ, ಎನ್‍ಡಿಆರ್‍ಎಫ್, ಅಗ್ನಿಶಾಮಕ ದಳಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ದುರಂತ ಕುರಿತು ಗುಜರಾತ್ ರಾಜ್ಯದ ಗೃಹ ಸಚಿವ ಹರ್ಷ್ ಸಂಘ್ವಿ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸ ಲಾಗಿದೆ. ಐಜಿಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ ನೌಕಾಪಡೆ, ಎನ್‍ಡಿಆರ್‍ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ವಾಯುಪಡೆ ಮತ್ತು ಭೂಸೇನೆ ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ಹೇಳಿದ್ದಾರೆ.

15-20 ಹುಡುಗರು ಸೇತುವೆ ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಸುಮಾರು 15-20 ಹುಡುಗರು ಉದ್ದೇಶ ಪೂರ್ವಕವಾಗಿ ಮೋರ್ಬಿ ತೂಗುಸೇತುವೆ ಅಲುಗಾಡಿ ಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಘಟನೆಯಲ್ಲಿ ಬದುಕುಳಿದವರು ಆರೋಪಿಸಿದ್ದಾರೆ. ಸುಮಾರು 15-20 ಕಿಡಿಗೇಡಿಗಳು ಸೇತುವೆಯ ಹಗ್ಗಗಳನ್ನು ಉದ್ದೇಶ ಪೂರ್ವಕವಾಗಿ ಅಲುಗಾಡಿಸುತ್ತಿದ್ದರು. ಹೀಗಾಗಿ ಸೇತುವೆ ಕುಸಿಯುವ ಮುನ್ನ ಮೂರು ಬಾರಿ ಜೋರಾಗಿ ಶಬ್ದ ಕೇಳಿ ಬಂತು. ನಾನೂ ಕೆಳಗೆ ಬಿದ್ದೆ. ಆದರೆ ನಾನು ಬೀಳು ವಾಗ ಸೇತುವೆಯ ಸುತ್ತಲೂ ಇದ್ದ ರೋಪ್ ಹಿಡಿದಿದ್ದೆ. ನನ್ನ ಜೊತೆಯಲ್ಲಿ ನನ್ನ ಸ್ನೇಹಿತನೂ ಇದ್ದ. ಸುಮಾರು ಏಳು ಜನ ರೋಪ್ ಅನ್ನು ಹಿಡಿದು ಮೇಲಕ್ಕೆ ಏರಲು ಆರಂಭಿಸಿದರು. ಘಟನೆ ವೇಳೆ ನನ್ನ ಕಾಲು ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಅಶ್ವಿನ್ ಮೆಹ್ರಾ ಎಂಬವರು ಹೇಳಿದ್ದಾರೆ.

ರಾಜ್‍ಕೋಟ್ ಬಿಜೆಪಿ ಸಂಸದನ ಕುಟುಂಬದ 12 ಮಂದಿ ಸಾವು: ಗುಜರಾತ್‍ನ ಮೊರ್ಬಿಯ ನವೀಕರಣ ಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ರಾಜ್‍ಕೋಟ್‍ನ ಬಿಜೆಪಿ ಸಂಸದ ಮೋಹನ್‍ಭಾಯ್ ಕಲ್ಯಾಣ್‍ಜಿ ಕುಂದರಿಯಾ ಅವರ ಕುಟುಂಬದ 12 ಸದಸ್ಯರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಮೋಹನ್‍ಭಾಯ್ ಕಲ್ಯಾಣ್‍ಜಿ ಕುಂದರಿಯಾ ಅವರು, “ನಾನು ಈ ದುರ್ಘಟನೆಯಲ್ಲಿ ಐದು ಮಕ್ಕಳು ಸೇರಿದಂತೆ ನನ್ನ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದೇನೆ. ನನ್ನ ಸಹೋದರಿಯ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. 9 ಮಂದಿಯ ಬಂಧನ: ಗುಜರಾತ್‍ನ ಮೊರ್ಬಿ ತೂಗು ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಪೆÇಲೀಸರು ಸೋಮವಾರ ಒಂಬತ್ತು ಜನರನ್ನು ಬಂಧಿಸಿದ್ದಾರೆ. ಸೇತುವೆಯನ್ನು ನವೀಕರಿಸಿದ್ದ ‘ಓರೆವಾ’ ಕಂಪನಿಯ ವ್ಯವಸ್ಥಾಪಕರು, ಟಿಕೆಟ್ ಕಲೆಕ್ಟರ್‍ಗಳು, ಸೇತುವೆ ದುರಸ್ತಿ ಗುತ್ತಿಗೆದಾರರು ಮತ್ತು ಜನಸಂದಣಿ ನಿಯಂತ್ರಿಸುವ ಹೊಣೆ ಹೊತ್ತಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

Translate »