26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್‌ಗೆ ೩೧ ವರ್ಷ ಜೈಲುಶಿಕ್ಷೆ
ಮೈಸೂರು

26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್‌ಗೆ ೩೧ ವರ್ಷ ಜೈಲುಶಿಕ್ಷೆ

April 9, 2022

ಕರಾಚಿ, ಏ. ೮- ಕಳೆದ ೨೬/೧೧ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯ್ಯದ್‌ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ೩೧ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯ್ಯದ್‌ಗೆ ಎರಡು ಪ್ರಕರಣಗಳಲ್ಲಿ ಈ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇದರ ಜೊತೆಗೆ ಅವರ ಎಲ್ಲಾ ಆಸ್ತಿಗಳನ್ನು ಮುಟ್ಟು ಗೋಲು ಹಾಕಿಕೊಳ್ಳುವಂತೆ ಕೋರ್ಟ್ ಆದೇಶಿಸಿದೆ.

ಹಫೀಜ್ ಸಯ್ಯದ್‌ಗೆ ನಿರ್ಮಿಸಿದ್ದು ಎಂದು ಹೇಳ ಲಾದ ಮಸೀದಿ ಮತ್ತು ಮದರಸಾವನ್ನು ಸ್ವಾಧೀನಪಡಿಸಿಕೊಳ್ಳು ವುದಕ್ಕೆ ಸೂಚಿಸಲಾಗಿದೆ. ಅಲ್ಲದೇ ಭಯೋತ್ಪಾದನೆಯ ಮಾಸ್ಟರ್‌ಮೈಂಡ್‌ಗೆ ೩,೪೦,೦೦೦ ದಂಡವನ್ನೂ ವಿಧಿಸಲಾಗಿದೆ.

೧೫ ವರ್ಷಗಳ ಜೈಲು ಶಿಕ್ಷೆ: ಭಯೋತ್ಪಾದನೆಗೆ ಹಣ ಒದಗಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ೨೦೨೦ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಹಫೀಜ್ ಸಯ್ಯದ್‌ಗೆ ೧೫ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಹಿಂದೆ ಪಾಕಿಸ್ತಾನದಲ್ಲಿ ಹಲವು ರೀತಿಯಲ್ಲಿ ಬಂಧನಕ್ಕೆ ಒಳಗಾಗಿರುವ ಹಫೀಜ್, ಕೆಲವೊಮ್ಮೆ ಗೃಹಬಂಧನಕ್ಕೆ ಒಳಗಾಗಿದ್ದರು. ಅದಾಗ್ಯೂ, ಭಾರತದ ವಿರುದ್ಧ ಮುಕ್ತವಾಗಿ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಾ ಓಡಾಡುತ್ತಿದ್ದನು.

೨೦೧೯ರಲ್ಲಿ ಹಫೀಜ್ ಸಯ್ಯದ್ ಬಂಧನ: ಕಳೆದ ೨೦೧೯ರಲ್ಲಿ ಪಾಕಿಸ್ತಾನದಲ್ಲಿ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯ್ಯದ್ ಅನ್ನು ಬಂಧಿಸಲಾಗಿತ್ತು. ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ಹಾಜರಾಗಲು ಲಾಹೋರ್‌ನಿಂದ ಗುಜ್ರಾನ್‌ವಾಲಾಗೆ ಸಯ್ಯದ್ ಪ್ರಯಾಣ ಸುತ್ತಿದ್ದ ಸಂದರ್ಭದಲ್ಲಿ ಪಂಜಾಬ್‌ನ ಭಯೋ ತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಅವನನ್ನು ಬಂಧಿಸಿತ್ತು. ಇದಕ್ಕೂ ಮೊದಲು ೨೦೦೧ ರಿಂದ ಎಂಟು

ಬಾರಿ ಸಯ್ಯದ್ ಅನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಯುಎಸ್ ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿ ಹೇಳಿದೆ. ನವೆಂಬರ್ ೨೬, ೨೦೦೮ರಂದು ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ೧೬೬ ಜನರು ಸಾವನ್ನಪ್ಪಿದ ಘಟನೆಗೆ ಹಫೀಜ್ ಸಯ್ಯದ್ ಕಾರಣ ಎಂದು ಹೇಳಲಾಗಿದೆ. ೨೦೧೭ರಲ್ಲಿ ಹಫೀಜ್ ಸಯೀದ್ ಮತ್ತು ಅವರ ನಾಲ್ವರು ಸಹಾಯಕರನ್ನು ಪಾಕಿಸ್ತಾನವು ಬಂಧಿಸಿತು. ಆದರೆ ಪಂಜಾಬ್‌ನ ನ್ಯಾಯಾಂಗ ಪರಿಶೀಲನಾ ಮಂಡಳಿಯು ಅವರ ಬಂಧನವನ್ನು ವಿಸ್ತರಿಸಲು ನಿರಾಕರಿಸಿದಾಗ ಸುಮಾರು ೧೧ ತಿಂಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

Translate »