ಬಾಲಕನ ಸಾವು ಪ್ರಕರಣ ಕೇಬಲ್ ಆಪರೇಟರ್‌ಗೆ ೨ ವರ್ಷ ಜೈಲು
ಮೈಸೂರು

ಬಾಲಕನ ಸಾವು ಪ್ರಕರಣ ಕೇಬಲ್ ಆಪರೇಟರ್‌ಗೆ ೨ ವರ್ಷ ಜೈಲು

April 9, 2022

ಮೈಸೂರು, ಏ. ೮- ವಿದ್ಯುತ್ ಕಂಬಕ್ಕೆ ಕೇಬಲ್ ವೈರ್ ಅಳವಡಿಸಿ, ಬಾಲಕನ ಸಾವಿಗೆ ಕಾರಣನಾದ ಕೇಬಲ್ ಆಪರೇಟರ್‌ಗೆ ೨ ವರ್ಷ ಜೈಲು ಶಿಕ್ಷೆ ವಿಧಿಸಿ, ಮೈಸೂರಿನ ೩ನೇ ಅಧಿಕ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಎಂ. ವಿನೋದ್ ಕುಮಾರ್ ತೀರ್ಪು ನೀಡಿದ್ದಾರೆ. ಅಲ್ಲದೇ ಮೃತ ಬಾಲಕನ ಕುಟುಂಬಕ್ಕೆ ಕೇಬಲ್ ಆಪರೇಟರ್ ೨ ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶ ನೀಡಿದ್ದಾರೆ.

ವಿವರ: ಮೈಸೂರಿನ ತರಂಗ ದರ್ಶಿನಿ ಕೇಬಲ್ ಘಟಕದ ಮುಖ್ಯಸ್ಥ ಎಂ.ಎಸ್. ಚಂದ್ರಶೇಖರ್ ಅವರು ಸುಭಾಷ್‌ನಗರ ದಲ್ಲಿ ಕೇಬಲ್ ವೈರ್ ಅನ್ನು ವಿದ್ಯುತ್ ಕಂಬಕ್ಕೆ ಅಳವಡಿಸಿದ್ದರು. ಈ ವೈರ್‌ಅನ್ನು ಅಲ್ಲಿನ ರಾಜರಾಜೇಶ್ವರಿ ದೇವಸ್ಥಾನದ ಪಕ್ಕದಲ್ಲಿ ರುವ ಕನ್ನಡ ಧ್ವಜಸ್ತಂಭಕ್ಕೆ ಕಟ್ಟಿದ್ದರು. ೨೦೦೬ರ ಸೆಪ್ಟೆಂಬರ್ ೮ರಂದು ರಾತ್ರಿ ರಾಜೇಂದ್ರನಗರ ನಿವಾಸಿ ಎಂ. ಲಕ್ಷö್ಮಣ್ ಎಂಬುವರ ಪುತ್ರ ಹೇಮಂತ್ ಕುಮಾರ್ (೧೭) ತನ್ನ ಅಜ್ಜಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ವೇಳೆ ಪಕ್ಕದಲ್ಲಿದ್ದ ಕನ್ನಡ ಧ್ವಜ ಸ್ಥಂಬವನ್ನು ಮುಟ್ಟಿದಾಗ ವಿದ್ಯುತ್‌ಸ್ಪರ್ಶ ದಿಂದ ಮೃತಪಟ್ಟಿದ್ದಾನೆ. ಕೇಬಲ್ ವೈರ್ ಅನ್ನು ಅಕ್ರಮವಾಗಿ ವಿದ್ಯುತ್ ಕಂಬ ಮತ್ತು ಕಬ್ಬಿಣದ ಧ್ವಜಸ್ತಂಭಕ್ಕೆ ಅಳವಡಿಸಲಾಗಿದ್ದು, ಕೇಬಲ್ ವೈರ್‌ಗೆ ವಿದ್ಯುತ್ ಕಂಬದಲ್ಲಿ ಹಾದು ಹೋಗಿದ್ದ ವಯರ್‌ಗಳು, ತಾಗಿ ಅದು ಕನ್ನಡ ಧ್ವಜಸ್ತಂಬಕ್ಕೂ ವಿದ್ಯುತ್ ಹರಿದಿದೆ. ಅದನ್ನು ಮುಟ್ಟಿ ಬಾಲಕ ಸಾವನ್ನಪ್ಪಿದ್ದಾನೆ.

 

Translate »