ಚಾಮರಾಜನಗರ, ಯಳಂದೂರಲ್ಲೂ ಹನುಮ ಸ್ಮರಣೆ
ಚಾಮರಾಜನಗರ

ಚಾಮರಾಜನಗರ, ಯಳಂದೂರಲ್ಲೂ ಹನುಮ ಸ್ಮರಣೆ

December 10, 2019

ಚಾಮರಜನಗರ, ಡಿ.9(ಎಸ್‍ಎಸ್)- ಚಾಮರಾಜನಗರದ ರಾಮಸಮುದ್ಯದಲ್ಲಿ ಇರುವ ಹರಳುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಅಭಯ ಕಾರ್ಯಸಿದ್ಧಿ ಆಂಜ ನೇಯಸ್ವಾಮಿ ದೇವಸ್ಥಾನದಲ್ಲಿ ಸೋಮ ವಾರ ಹನುಮಜಯಂತಿಯನ್ನು ಅದ್ಧೂರಿ ಯಾಗಿ ಆಚರಿಸಲಾಯಿತು.

ಹನುಮಜಯಂತಿ ಅಂಗವಾಗಿ ಶ್ರೀ ಆಂಜನೇಯಸ್ವಾಮಿ ದೇವರಿಗೆ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಅನ್ನಸಂತರ್ಪಣೆ ನಡೆಯಿತು.

ಯಳಂದೂರು ವರದಿ: ಪಟ್ಟಣದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯ ದಲ್ಲಿ ಹನುಮಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಿ ಹಸಿರು ತೋರಣಗಳಿಂದ ಶೃಂಗರಿಸಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆಂಜ ನೇಯಸ್ವಾಮಿಗೆ ಗಂಧ, ತುಪ್ಪ, ಮೊಸರು, ಹಾಲು, ಬೆಣ್ಣೆ, ಜೇನು, ಬಾಳೆಹಣ್ಣು ಸೇರಿ ದಂತೆ ವಿವಿಧ ಅಭಿಷೇಕಗಳನ್ನು ನೆರವೇರಿಸ ಲಾಯಿತು. ಶ್ರೀರಾಮ ಭಕ್ತ ಹನುಮಂತ ರಾಯನಿಗೆ ತುಳಸಿ ಮತ್ತು ವಿಳ್ಯದ ಎಲೆ ಅಲಂಕಾರದಿಂದ ಶೃಂಗರಿಸಿ ನಂತರ ಮಹಾ ಮಂಗಳಾರತಿ ಮಾಡಿದ ಬಳಿಕ ಭಕ್ತರಿಗೆ ದರುಶನಕ್ಕೆ ಅವಕಾಶ ಮಾಡಲಾಯಿತು. ದಾನಿಗಳಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಪಪಂ ಸದಸ್ಯರಾದ ಪ್ರಭಾವತಿ ರಾಜಶೇಖರ್ ಸೇರಿದಂತೆ ಸ್ಥಳೀಯ ಮಟ್ಟದ ಜನಪ್ರತಿ ನಿಧಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಟೌನ್ ಪಂಚಾಯಿತಿ ಮಾಜಿ ಸದಸ್ಯ ನಾಗಣ್ಣ, ಅನಿಲ್, ಮಹೇಶ್, ರಾಮಣ್ಣ, ರಮೇಶ್ ಸೇರಿದಂತೆ ಇತರರು ಹಾಜರಿದ್ದರು.

Translate »