ಡಿ.15, ರಾಜ್ಯಮಟ್ಟದ ಡಾ. ವಿಷ್ಣುವರ್ಧನ್ ಚಿತ್ರಗೀತೆ ಗಾಯನ ಸ್ಪರ್ಧೆ
ಚಾಮರಾಜನಗರ

ಡಿ.15, ರಾಜ್ಯಮಟ್ಟದ ಡಾ. ವಿಷ್ಣುವರ್ಧನ್ ಚಿತ್ರಗೀತೆ ಗಾಯನ ಸ್ಪರ್ಧೆ

December 10, 2019

ಚಾಮರಾಜನಗರ, ಡಿ.9- ನಗರದ ಕನ್ನಡ ನೆಲ-ಜಲ ಸಾಂಸ್ಕøತಿಕ ವೇದಿಕೆಯಿಂದ ರಾಜ್ಯಮಟ್ಟದ ಡಾ.ವಿಷ್ಣುವರ್ಧನ್ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯನ್ನು ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಇರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ದಿ.15ರ ಭಾನುವಾರ ಬೆಳಗ್ಗೆ 10-30ಕ್ಕೆ ಹಮ್ಮಿಕೊಳ್ಳಲಾಗಿದೆ.

“ವಿಷ್ಣು- ನೆನಪಿನೋತ್ಸವ”À ಅಂಗವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮೊದಲನೆ ಬಹುಮಾನ 5000 ನಗದು, ಎರಡನೇ ಬಹುಮಾನ 3000 ಮತ್ತು ಮೂರನೇ ಬಹುಮಾನ 2000 ನಗದು ನೀಡಲಾಗುವುದು. ಸಮಾಧಾನಕರ ಬಹುಮಾನಕ್ಕೆ ಮೂವರನ್ನು ಆಯ್ಕೆ ಮಾಡಲಾಗುವುದು. ಭಾಗವಹಿಸಲು ಇಚ್ಚಿಸುವವರು ಸ್ಪರ್ಧೆಯ ದಿನದಂದು ಬೆಳಗ್ಗೆ 10-30ರ ಒಳಗಾಗಿ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು. ಹಾಡಲು ಇಚ್ಚಿಸುವ ಹಾಡಿನ ಮ್ಯೂಸಿಕ್‍ಟ್ರ್ಯಾಕ್‍ನ್ನು ಸ್ಪರ್ಧಿಗಳೇ ತರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. 15 ವರ್ಷ ಮೇಲ್ಪಟ್ಟವರು ಭಾಗವಹಿಸ ಬಹುದು. ಮಾಹಿತಿಗಾಗಿ 9880820462, 9902317670, 9731245559, 9739757702 ಮತ್ತು 9620287766 ಸಂರ್ಪಕಿಸಬಹುದೆಂದು ವೇದಿಕೆ ಅಧ್ಯಕ್ಷರು ತಿಳಿಸಿದ್ದಾರೆ.

 

 

Translate »