ಹನೂರಿನಲ್ಲೂ ಬಿಜೆಪಿ ಗೆಲುವಿನ ಸಂಭ್ರಮ
ಚಾಮರಾಜನಗರ

ಹನೂರಿನಲ್ಲೂ ಬಿಜೆಪಿ ಗೆಲುವಿನ ಸಂಭ್ರಮ

December 10, 2019

ಹನೂರು, ಡಿ.9- ಉಪಚುನಾವಣೆ ಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚು ಸ್ಥಾನ ಗಳನ್ನು ಬಿಜೆಪಿ ಗೆಲುವು ಸಾಧಿಸಿದೆ. ಯಡಿ ಯೂರಪ್ಪನವರ ಸರ್ಕಾರ ಮೂರೂವರೆ ವರ್ಷಗಳ ಕಾಲ ಸುಭದ್ರವಾಗಿ ನಡೆಯ ಲಿದೆ ಎಂದು ಮಾಜಿ ಶಾಸಕಿ ಪರಿಮಳ ನಾಗಪ್ಪ ತಿಳಿಸಿದರು.

ಹನೂರು ಪಟ್ಟಣದ ಬಸ್‍ನಿಲ್ದಾಣದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪರಿಮಳನಾಗಪ್ಪ ನೇತೃತ್ವದಲ್ಲಿ ಕಾರ್ಯ ಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದ ನಂತರ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಜನರ ನಿರೀಕ್ಷೆ ಮೀರಿ 12 ಸ್ಥಾನಗಳನ್ನು ಪಡೆಯುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ನವರ ಸರ್ಕಾರ ಸುಭದ್ರವಾಗಿ ನಡೆಯಲಿದೆ. ಜನಾದೇಶ ನೀಡಿದ ತೀರ್ಪು ಸಂತೋಷ ತಂದಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹ ರಾಜ್ಯದ ಸಾಧನೆಯನ್ನು ಪ್ರಶಂಸೆ ಮಾಡಿದೆ. ಆದುದರಿಂದ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಭಿವೃದ್ದಿಗೆ ಒತ್ತು ನೀಡ ಲಿದೆ. ಹನೂರು ಪಟ್ಟಣದಲ್ಲಿ ಕಾರ್ಯ ಕರ್ತರ ಜೊತೆಗೂಡಿ ಸಂಭ್ರಮಾಚರಣೆ ಮಾಡುತ್ತಿರುವುದು ಸಂತೋಷದ ವಿಚಾರ ವಾಗಿದೆ ಎಂದರು. ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ನೆರೆದಿದ್ದ ಜನತೆಗೆ ಕೇಸರಿ ಲಾಡು ಹಂಚಿ ಸಂಭ್ರಮಾ ಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ನಾಗರಾಜು, ಹನೂರು ವೀರಶೈವ ಮಹಾಸಭಾ ಅಧ್ಯಕ್ಷ ಬಸವರಾಜಪ್ಪ, ಮುಖಂಡರುಗಳಾದ ಉದ್ದ ನೂರು ಪ್ರಸಾದ್, ಬಂಡಳ್ಳಿ ನಾಗರಾಜು, ಆನಾಪುರ ಉಮೇಶ್, ಗೋವಿಂದನಾಯ್ಡು, ವೆಂಕಟೇಗೌಡ, ಜಗನಾಥನಾಯ್ಡು, ವೆಂಕಟ ರಾಜು, ಪುಟ್ಟರಾಜು ಇನ್ನಿತರರು ಇದ್ದರು.

Translate »