ತಾಯಿಯಿಂದಲೇ ಕಿರುಕುಳ: ಮಹಿಳೆ ಆರೋಪ
ಮೈಸೂರು

ತಾಯಿಯಿಂದಲೇ ಕಿರುಕುಳ: ಮಹಿಳೆ ಆರೋಪ

May 30, 2018

ಮೈಸೂರು: ಗ್ರಾಮದ ಕೆಲವು ಮುಖಂಡರೊಂದಿಗೆ ತಾಯಿ ಸೇರಿಕೊಂಡು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಸೂಕ್ತ ರಕ್ಷಣೆ ನೀಡುವಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಾಲೂಕಿನ ಅರಸಿನಕೆರೆ ಗ್ರಾಮದ ಪದ್ಮಾಮಣ ಆರೋಪಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಮುಖಂಡನೊಬ್ಬ ತನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವಂತೆ ಪೀಡಿಸುತ್ತಿದ್ದ. ಇದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಆತ ತನ್ನ ತಾಯಿಗೆ ಬೆದರಿಸಿ, ಕೆಲವು ಗ್ರಾಮಸ್ಥರನ್ನು ಕರೆತಂದು ನನ್ನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ಹಿಂದೆ ಪತಿ ಲಕ್ಷ್ಮೀಕಾಂತರಾಜೇ ಅರಸ್ ಅವರ ನಡತೆ ಸರಿಯಿಲ್ಲದ ಕಾರಣ ಅವರನ್ನು ತೊರೆದು ತಂದೆಯ ಮನೆಗೆ ಬಂದು 10 ವರ್ಷಗಳಾಗಿದ್ದು, ಟೈಲರಿಂಗ್ ಮೂಲಕ ಬದುಕು ನಡೆಸುತ್ತಿದ್ದೇನೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಿರುಕುಳ ನೀಡುತ್ತಿರುವ ತಾಯಿ ಹಾಗೂ ಹಲ್ಲೆ ನಡೆಸಿದ ಗ್ರಾಮಸ್ಥರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

 

Translate »