ವಿಷ್ಣು ಪುತ್ಥಳಿಗೆ ಹಾನಿ: ಅಭಿಮಾನಿಗಳ ಸಂಘ ಖಂಡನೆ
ಮೈಸೂರು

ವಿಷ್ಣು ಪುತ್ಥಳಿಗೆ ಹಾನಿ: ಅಭಿಮಾನಿಗಳ ಸಂಘ ಖಂಡನೆ

September 22, 2021

ಮೈಸೂರು, ಸೆ.21(ಆರ್‍ಕೆಬಿ)- ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನಲ್ಲಿ ರುವ ಡಾ.ವಿಷ್ಣುವರ್ಧನ್ ಉದ್ಯಾನದಲ್ಲಿ ಅಭಿಮಾನಿಗಳು ಸ್ಥಾಪಿಸಿದ್ದ ಡಾ.ವಿಷ್ಣುವರ್ಧನ್ ಪುತ್ಥಳಿಗೆ ಹಾನಿ ಮಾಡಿ ರುವುದನ್ನು ಡಾ.ವಿಷ್ಣು ಸೇನಾ ಸಮಿತಿ ಖಂಡಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ಡಿ.ಪಾರ್ಥ ಸಾರಥಿ, ಕನ್ನಡ ನೆಲ, ಜಲ, ಭಾಷೆ ಹಾಗೂ ಕನ್ನಡ ಚಿತ್ರ ರಂಗದ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ. ಅಂಥವರ ಪುತ್ಥಳಿಯನ್ನು ವಿಷ್ಣುವರ್ಧನ್ ಜನ್ಮ ದಿನಾಚರಣೆ ಬಳಿಕ ವಾಪಸ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರೆ ಸಾಕಿತ್ತು. ಆದರೆ ಪುತ್ಥಳಿಗೆ ಹಾನಿ ಮಾಡುವ ಮೂಲಕ ಕನ್ನಡ, ನೆಲ, ಜಲ ಭಾಷೆ, ಕನ್ನಡ ಚಿತ್ರರಂಗಕ್ಕಾಗಿ ಅವಿತರತವಾಗಿ ದುಡಿದ ಹಿರಿಯ ಕಲಾವಿದರೊಬ್ಬರಿಗೆ ಮಾಡಿದ ಅಪಮಾನವಿದು ಎಂದು ಕಿಡಿಕಾರಿದರು.

ಪ್ರತಿಮೆ ಅನಧಿಕೃತವಾಗಿದ್ದರಿಂದ ಅದನ್ನು ತೆರವು ಗೊಳಿಸಲಾಗಿದೆ ಎಂಬ ಹೇಳಿಕೆ ನೀಡಿದ್ದಾರೆಂಬ ಶಾಸಕ ಎಸ್.ಎ.ರಾಮದಾಸ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, ಕ್ಷೇತ್ರದ ಶಾಸಕರಾಗಿ ಮನಸ್ಸು ಮಾಡಿದ್ದರೆ ಇಷ್ಟೊ ತ್ತಿಗೆ ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣ ಮಾಡÀಬಹುದಿತ್ತು. ನಾವೇನು ನಮ್ಮ ಮನೆ ಕೆಲಸ ಮಾಡಿಕೊಡಿ ಎಂದು ಕೇಳುತ್ತಿಲ್ಲ. ವಿಷ್ಣುವರ್ಧನ್ ಪುತ್ಥಳಿಯನ್ನಾದರೂ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದರು. ವಿಷ್ಣುವರ್ಧನ್ ಪ್ರತಿಮೆಯನ್ನು ಉದ್ಯಾನವನದಲ್ಲಿ ಆದಷ್ಟು ಬೇಗ ಸ್ಥಾಪಿಸಬೇಕು ಎಂಬ ನಮ್ಮ ಹೋರಾಟ ದಿಂದ ಅಭಿಮಾನಿಗಳು ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಾರ್ಥಸಾರಥಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ರಾಜ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ರಾಮೇಗೌಡ, ನಗರಪಾಲಿಕೆ ರಸ್ತೆಗುಂಡಿಗಳನ್ನು ಆರು ತಿಂಗಳಾದರೂ ಮುಚ್ಚುವ ಕಾರ್ಯಕ್ಕೆ ಕೈ ಹಾಕುವುದಿಲ್ಲ. ಆದರೆ ಅನ ಧಿಕೃತ ಎಂದು ಪ್ರತಿಮೆಯೊಂದನ್ನು ಒಂದೇ ದಿನದಲ್ಲಿ ಒಡೆಯುತ್ತದೆ. ಇದು ಎಲ್ಲ ನಟರ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಆದರೂ ಅಭಿಮಾನಿಗಳು ತಾಳ್ಮೆಗೆಡದೆ ಕೆಲಸ ಸಾಧಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಪಿಕೆ ಪರಮೇಶ್, ರಮೇಶ್, ಚಂದ್ರು, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಮಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.

Translate »