ಹರ್ಷೆಲ್ ಕಾವೇರಿಗೆ ಶೂಟಿಂಗ್‍ನಲ್ಲಿ ಚಿನ್ನದ ಪದಕ
ಮೈಸೂರು

ಹರ್ಷೆಲ್ ಕಾವೇರಿಗೆ ಶೂಟಿಂಗ್‍ನಲ್ಲಿ ಚಿನ್ನದ ಪದಕ

August 31, 2018

ಮೈಸೂರು: ಬೆಂಗಳೂರಿನ ಎಸ್‍ಎಐ ಶೂಟಿಂಗ್ ರೇಂಜ್‍ನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್‍ಶಿಪ್ ನಲ್ಲಿ ಮೈಸೂರಿನ ಹರ್ಷೆಲ್ ಕಾವೇರಿ ಆರು ಚಿನ್ನದ ಪದಕ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 15 ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ವಿಭಾಗದ 10 ಮೀಟರ್ ಓಪನ್ ಸೈಟ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅತೀ ಹೆಚ್ಚು 287/300 ಅಂಕಗಳನ್ನು ಗಳಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ಹರ್ಷೆಲ್ ಕಾವೇರಿ ಅವರು ಗೋಣಿಕೊಪ್ಪದ ಕೆಎ ಎಲ್‍ಎಸ್ ಸ್ಕೂಲ್‍ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡು ತ್ತಿದ್ದಾರೆ. ಈಕೆ ಬಿನ್ನಿ ಪೊನ್ನಪ್ಪ ಅವರ ಪುತ್ರಿ ಮತ್ತು ಕುವೆಂಪು ನಗರದ ನಿವಾಸಿ ಚೇನಂಡ ಪಂಡಿತ್ ಮತ್ತು ಗಂಗೆ ದಂಪತಿ ಮೊಮ್ಮಗಳು.

Translate »