ಭೈರವೇಶ್ವರ ನಗರದಲ್ಲಿ ಪತ್ನಿ ಹತ್ಯೆಗೈದ ಪತಿ
ಮೈಸೂರು

ಭೈರವೇಶ್ವರ ನಗರದಲ್ಲಿ ಪತ್ನಿ ಹತ್ಯೆಗೈದ ಪತಿ

August 31, 2018

ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಯನ್ನು ಪತಿಯೇ ಹತ್ಯೆ ಮಾಡಿರುವ ಘಟನೆ ಮೈಸೂರಿನ ಮೇಟಗಳ್ಳಿ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಬುಧವಾರ ರಾತ್ರಿ ಸಂಭ ವಿಸಿದೆ. ಭೈರವೇಶ್ವರ ನಗರದ 7ನೇ ಕ್ರಾಸ್‍ನಲ್ಲಿರುವ ಶ್ರೀ ಭೈರವೇಶ್ವರ ದೇವಸ್ಥಾನದ ಬಳಿಯ ನಿವಾಸಿ ಶ್ರೀಮತಿ ಗೀತಾಂಜಲಿ(25) ಕೊಲೆ ಯಾದ ಮಹಿಳೆ. ಹತ್ಯೆಗೈದ ಪತಿ ಉಮೇಶ್ ತಲೆಮರೆಸಿಕೊಂಡಿದ್ದಾನೆ.

ಮೂಲತಃ ಮಳವಳ್ಳಿ ತಾಲೂಕಿನ ಯಮದೂರಿನವರಾದ ಗೀತಾಂಜಲಿಯನ್ನು 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಉಮೇಶ್, ಕಳೆದ ಒಂದು ವರ್ಷದಿಂದ ಮೈಸೂರಿನ ಭೈರವೇಶ್ವರ ನಗರದಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ.

ಕ್ಷುಲ್ಲಕ ಕಾರಣಕ್ಕಾಗಿ ಪ್ರತಿ ದಿನ ಜಗಳವಾಡುತ್ತಿದ್ದ ಆತ, ಬುಧ ವಾರ ರಾತ್ರಿ ಕುಡಿದು ಬಂದು ಜಗಳ ತೆಗೆದು ಕಡೆಗೆ ಬಟ್ಟೆಯಿಂದ ಗೀತಾಂಜಲಿಯ ಕುತ್ತಿಗೆ ಬಿಗಿದು ಕೊಲೆಗೈದು ಪರಾರಿಯಾಗಿ ದ್ದಾನೆ. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ನೆರೆಹೊರೆಯವರು ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ಧಾವಿಸಿದ ಮೇಟಗಳ್ಳಿ ಠಾಣೆ ಇನ್ಸ್ ಪೆಕ್ಟರ್ ಸುನೀಲ್‍ಕುಮಾರ್ ಹಾಗೂ ಸಿಬ್ಬಂದಿ ಮಹಜರು ನಡೆಸಿ, ಆಕೆಯ ಸಂಬಂಧಿಕರು ಬಂದ ನಂತರ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದರು. ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆಂ ಬುದು ಸ್ಥಳ ಮಹಜರು ಮಾಡಿದಾಗ ತಿಳಿದ ಹಿನ್ನೆಲೆಯಲ್ಲಿ ಹಾಗೂ ಪೋಷಕರು ನೀಡಿದ ದೂರಿನನ್ವಯ ಉಮೇಶ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಗಾಗಿ ಶೋಧ ನಡೆಸುತ್ತಿದ್ದಾರೆ. ಎನ್.ಆರ್.ಉಪವಿಭಾಗದ ಎಸಿಪಿ ಸಿ.ಗೋಪಾಲ್, ಬೆರಳಚ್ಚು ವಿಭಾಗದ ಎಸಿಪಿ ರಾಜಶೇಖರ್, ಎಸ್‍ಐ ಅಪ್ಪಾಜೀಗೌಡ, ಶ್ವಾನದಳದ ಸಿಬ್ಬಂದಿ ಘಟನೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಉಮೇಶ್ ಕುಡಿತದ ಚಟಕ್ಕೆ ಬಲಿಯಾಗಿದ್ದ ಎನ್ನಲಾಗಿದ್ದು, ದಂಪತಿಗೆ ಮಕ್ಕ ಳಾಗಿರಲಿಲ್ಲ ಎಂದು ನೆರೆ ಹೊರೆಯವರು ತಿಳಿಸಿದ್ದಾರೆ.

Translate »