ಕೆ.ಆರ್. ಆಸ್ಪತ್ರೆಯಿಂದ ವೃದ್ಧೆ ನಾಪತ್ತೆ
ಮೈಸೂರು

ಕೆ.ಆರ್. ಆಸ್ಪತ್ರೆಯಿಂದ ವೃದ್ಧೆ ನಾಪತ್ತೆ

August 31, 2018

ಮೈಸೂರು:  ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 85 ವರ್ಷದ ವೃದ್ಧೆಯೋರ್ವರು ಕೆಲವು ದಿನಗಳಿಂದ ನಾಪತ್ತೆಯಾಗಿ ರುವ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖ ಲಾಗಿದೆ. ಮೈಸೂರಿನ ರಾಜೀವ್‍ನಗರ 1ನೇ ಹಂತದ ನಿವಾಸಿ ಖತೀಜಾ ಬೀ ನಾಪತ್ತೆಯಾದವರು. ಇವರು ಆ.23ರಂದು ಬೆಳಿಗ್ಗೆ ಮನೆಯಿಂದ ಹೊರಟವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ. ಕ್ಯಾತಮಾರನಹಳ್ಳಿ ಚರ್ಚ್ ಬಳಿ ಅಸ್ವಸ್ಥರಾಗಿದ್ದ ಬಿದ್ದಿದ್ದ ಖತೀಜಾ ಬೀ ಅವರನ್ನು ಕೆ.ಆರ್. ಆಸ್ಪತ್ರೆಯಲ್ಲಿ ದಾಖಲು ಮಾಡ ಲಾಗಿದೆ ಎಂದು ತಿಳಿಯಿತು. ಬಳಿಕ ಖತೀಜಾ ಬೀ ಕೆ.ಆರ್. ಆಸ್ಪತ್ರೆಯಿಂದ ನಾಪತ್ತೆ ಯಾಗಿದ್ದು, ಅವರನ್ನು ಎಲ್ಲಾ ಕಡೆ ಹುಡುಕಿದರೂ ಪ್ರಯೋಜನವಾಗಿಲ್ಲ ಎಂದು ಆಕೆಯ ಪುತ್ರ ಆ.24ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಉರ್ದು ಮತ್ತು ಹಿಂದಿ ಮಾತನಾಡು ತ್ತಾರೆ. ಈಕೆಯ ಬಗ್ಗೆ ಸುಳಿವು ದೊರೆತಲ್ಲಿ ದೇವರಾಜ ಪೊಲೀಸ್ ಠಾಣೆ ಮೊ. 88846 -90743 ಅಥವಾ 88677-79982 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Translate »