ಮೈಸೂರು ಪಾಲಿಕೆ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯ  ಕಡ್ಡಾಯ ಮತದಾನಕ್ಕೆ ಮನವಿ
ಮೈಸೂರು

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯ  ಕಡ್ಡಾಯ ಮತದಾನಕ್ಕೆ ಮನವಿ

August 31, 2018

ಮೈಸೂರು:  ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಆ.31ರಂದು ನಡೆಯಲಿರುವ ಮತದಾನದಲ್ಲಿ ಬ್ರಾಹ್ಮಣ ಸಮುದಾಯ ಕಡ್ಡಾಯವಾಗಿ ಮತದಾನ ಮಾಡ ಬೇಕೆಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಸಂಘದ ವತಿಯಿಂದ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲಾಗಿತ್ತು. ಇದರಿಂದ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು ಎಂದು ಹೇಳಿದರು.

ಅದೇ ರೀತಿ ಆ.31ರಂದು ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್‍ಗಳ ಸದಸ್ಯರ ಆಯ್ಕೆಗೆ ಮತದಾನ ನಡೆಯಲಿದ್ದು, ಸಮುದಾಯದ ಪ್ರತಿಯೊಬ್ಬರು ಮತದಾನ ವನ್ನು ಕಡ್ಡಾಯವಾಗಿ ಮಾಡಬೇಕು. ಕಡ್ಡಾಯ ಮತದಾನದ ಮೂಲಕ ಸೂಕ್ತ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಗರಪಾಲಿಕೆ ಚುನಾವಣೆ ಯಲ್ಲಿ ಪಕ್ಷವೊಂದರಿಂದ ಕಣದಲ್ಲಿರುವ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳ ವಿರುದ್ಧ ಅದೇ ಪಕ್ಷದಿಂದ ಟಿಕೆಟ್ ವಂಚಿತ ಬ್ರಾಹ್ಮಣ ಸಮುದಾಯದವರೇ ಬಂಡಾಯವಾಗಿ ಸ್ಪರ್ಧೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಟಿ.ಪ್ರಕಾಶ್, ಅಧಿಕಾರ ಅನುಭವಿಸದ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಅನೇಕರಿಗೆ ಟಿಕೆಟ್ ದೊರೆಯದೇ ಇರಬಹುದು. ಆದರೆ ಅವರು ಪಕ್ಷದಲ್ಲಿ ಬೇರೆ ಯಾವುದಾದರೂ ಜವಾಬ್ದಾರಿ ವಹಿಸಿಕೊಳ್ಳು ವತ್ತ ಗಮನ ಹರಿಸಬಹುದಿತ್ತು. ಆದಾಗ್ಯೂ ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ ವಿಚಾರವಾಗಿದೆ ಎಂದು ತಿಳಿಸಿದರು. ಸಂಘದ ಪ್ರದೀಪ್, ಸತೀಶ್ ಗೋಷ್ಠಿಯಲ್ಲಿದ್ದರು.

Translate »