ಹೈರಾಣಾದ ವೈದ್ಯಕೀಯ ಸಿಬ್ಬಂದಿ, ಚಿಕಿತ್ಸೆ ಪಡೆಯದೆ ಕೆಲವರು ವಾಪಸ್
ಏಪ್ರಿಲ್ ೨೨ರವರೆಗೆ ಆರೋಗ್ಯ ತಪಾಸಣಾ ಶಿಬಿರ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ
ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಸರ್ಕಾರದಿಂದ ನೆರವು
ಮೈಸೂರು, ಏ.೧೯(ಎಂಟಿವೈ)- ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಸೇಠ್ ಮೋಹನ್‌ದಾಸ್ ತುಳಸಿದಾಸ್(ಎಸ್‌ಎಂಟಿ) ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಆರೋಗ್ಯ ತಪಾ ಸಣಾ ಶಿಬಿರಕ್ಕೆ ನಿರೀಕ್ಷೆಗೂ ಮೀರಿದ ಜನರು ಆಗಮಿ ಸಿದ್ದು, ಜನಜಂಗುಳಿಯಿAದಾಗಿ ವೈದ್ಯಕೀಯ ಸಿಬ್ಬಂದಿ ಹೈರಾಣಾದರೆ, ಹಲವು ಮಂದಿ ತಪಾಸಣೆ ಮಾಡಿಸಿಕೊಳ್ಳದೆ ನಿರಾಶೆಯಿಂದ ವಾಪಸ್ಸಾದರು.
ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗು ತ್ತಿದ್ದು, ಅಭಿಯಾನದ ಎರಡನೇ ದಿನವಾದ ಮಂಗಳ ವಾರ ಎಸ್‌ಎಂಟಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೈಸೂರು ನಗರದ ವಿವಿಧ ಬಡಾವಣೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ಪಾಲ್ಗೊಂ ಡಿದ್ದರಿಂದ ಈ ಸಮಸ್ಯೆ ಉಂಟಾಯಿತು.
ಜನರ ಆರೋಗ್ಯ ರಕ್ಷಣೆಗೆ ಆದ್ಯತೆ: ಶಿಬಿರವನ್ನು ಉದ್ಘಾಟಿಸಿದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸ್ವಾತಂತ್ರ÷್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಏ.೧೮ರಿಂದ ೨೨ರವರೆಗೆ ಆರೋಗ್ಯ ತಪಾಸಣೆ ಶಿಬಿರ ನಡೆಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವಂತೆಯೇ ಜನರ ಆರೋಗ್ಯ ರಕ್ಷಣೆಗೂ ಒತ್ತು ಕೊಟ್ಟಿದ್ದಾರೆ ಎಂದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಿದ ಬಳಿಕ ಶಾಸಕ ಎಸ್.ಎ.ರಾಮ ದಾಸ್ ಮಾತನಾಡಿ, ಆರೋಗ್ಯ ಜಾಗೃತಿ ಅಭಿಯಾನದ ಮುಗಿಸಿ ಸುಮ್ಮನಾಗುವುದಿಲ್ಲ. ಪರೀಕ್ಷೆö ಮಾಡಿಸಿ ಮನೆಗೆ ಕಳುಹಿಸುವುದರೊಂದಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ಎಲ್ಲರಿಗೂ ಸರ್ಕಾರದ ನೆರವು ಕೊಡಿಸಲು ಶ್ರಮಿಸು ತ್ತೇನೆ. ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಮರಣ ಮುಕ್ತ ಮಾಡಲು ಶ್ರಮಿಸಬೇಕು. ೫ ಲP್ಷÀ ರೂಪಾಯಿಯ ಆರೋಗ್ಯ ರP್ಷÀಣಾ ಕಾರ್ಡ್ ಪ್ರತಿಯೊಬ್ಬರಿಗೂ ಸಿಗುವಂತೆ ಆರೋಗ್ಯ ಕಾರ್ಯಕರ್ತರು ಶ್ರಮಿಸಬೇಕು. ಕುಡಿಯುವ ನೀರಿನಿಂದ, ವಾಹನಗಳ ಹೊಗೆಯಿಂದ, ಕಲುಷಿತಗೊಂಡಿರುವ ಆಹಾರದಿಂದ ಕ್ಯಾನ್ಸರ್ ರೋಗ ಬರುತ್ತಿದೆ. ಹಾಗಾಗಿ ಶುದ್ಧ ಕುಡಿಯುವ ನೀರು ಬಳಸಬೇಕು. ವಾಯುಮಾಲಿನ್ಯ ತಡೆ, ಗುಣ ಮಟ್ಟದ ಆರೋಗ್ಯ, ಆಯುರ್ವೇದ, ನ್ಯಾಚುರೋಪತಿ, ಇಂಗ್ಲಿಷ್ ಔಷಧದೊಂದಿಗೆ ಯೋಗದ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಮೇಳದಲ್ಲಿ: ಆರೋಗ್ಯ ತಪಾಸಣಾ ಮೇಳದಲ್ಲಿ ಎನ್‌ಸಿಡಿ, ಟಿಬಿ ಪರೀಕ್ಷೆ, ಯೋಗ, ಐಇಸಿ, ಆಯುಷ್ ವಿಭಾಗ, ಔಷಧಿ ವಿತರಣೆ, ಪ್ರಯೋಗಾಲಯ, ಪ್ರಸೂತಿ ಹಾಗೂ ಸ್ತಿçÃರೋಗ ವಿಭಾಗ, ಮಕ್ಕಳ ತಜ್ಞರ ವಿಭಾಗ, ಚರ್ಮ ರೋಗ, ಕೀಲು ಮತ್ತು ಮೂಳೆ ವಿಭಾಗ, ದಂತ ಚಿಕಿತ್ಸಾ ವಿಭಾಗ, ರಕ್ತನಿಧಿ ಸಂಗ್ರಹ ಕೇಂದ್ರ, ಫಿಜಿಶಿಯನ್, ಲಸಿಕಾ ಕೇಂದ್ರ, ಇಎನ್‌ಟಿ ಆಪ್ತಸಮಾಲೋಚನಾ ಕೇಂದ್ರ ತೆರೆಯಲಾಗಿತ್ತು.
ಜಾಗೃತಿ ಮೇಳ: ಆರೋಗ್ಯ ತಪಾಸಣಾ ಶಿಬಿರದಲ್ಲಿ ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಸುರಕ್ಷಿತ ಆಹಾರದಿಂದ ಸದೃಢ ಆರೋಗ್ಯ ಅರಿವು ಮೂಡಿಸಲಾಯಿತು. P್ಷÀಯರೋಗ ತಪಾಸಣೆ ಮಾಡ ಲಾಯಿತು. ರಾಜ್ಯ ಏಡ್ಸ್ ಪ್ರಿವೆನ್ಷöನ್ ಸೊಸೈಟಿ, ಆಯುಷ್ ಆರೋಗ್ಯ ಮೇಳ, ಎನ್‌ಸಿಟಿ ಸ್ಕಿçÃನಿಂಗ್, ಐಇಸಿ ವಸ್ತುಪ್ರದರ್ಶನ ಇತ್ತು. ಸಾಂಕೇತಿಕ ವಾಗಿಆರೋಗ್ಯ ರಕ್ಷಣಾ ಕಾರ್ಡ್ ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ಡಿಹೆಚ್‌ಓ ಡಾ.ಕೆ.ಹೆಚ್.ಪ್ರಸಾದ್ ಮಾತನಾಡಿ ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್. ರಾಜೇ ಶ್ವರಿ, ಸರ್ವೆಲನ್ಸ್ ಅಧಿಕಾರಿ ಡಾ.ಶಿವಪ್ರಸಾದ್, ಆರ್‌ಸಿ ಹೆಚ್‌ಓ ಡಾ.ಎಂ.ಎಸ್.ಜಯAತ್, ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಡಾ.ಮಂಜುನಾಥ್, ಆರೋಗ ರಕ್ಷಾö ಸಮಿತಿ ಸದಸ್ಯರಾದ ಸಂತೋಷ್, ಶಿವಾನಂದ್, ಕೃಷ್ಣ ಮೊದಲಾದವರು ಭಾಗವಹಿಸಿದ್ದರು.
ಇನ್ನೆರಡು ದಿನ ವಿಸ್ತರಿಸಿ
ಆರೋಗ್ಯ ಮೇಳದಲ್ಲಿ ನೂಕುನುಗ್ಗಲು ಹೆಚ್ಚಾ ಗಿದ್ದರಿಂದ ಹಲವು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೆ ವಾಪಸ್ಸಾದರು. ಜನರ ಹಿತ ದೃಷ್ಟಿ ಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಇನ್ನೆರಡು ದಿನ ವಿಸ್ತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.