ಬಂಡೀಪುರದ ಆನೆಗೆ ಅವಳಿ ಭಾಗ್ಯ
ಮೈಸೂರು

ಬಂಡೀಪುರದ ಆನೆಗೆ ಅವಳಿ ಭಾಗ್ಯ

April 20, 2022

ಎಂ.ಟಿ.ಯೋಗೇಶ್‌ಕುಮಾರ್
ಬAಡೀಪುರ,ಏ.೧೯-ಬAಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯ ದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ್ದು, ಬಹುಶಃ ಕಾಡಾನೆ ಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿರುವುದು ದೇಶದಲ್ಲೇ ಮೊದಲು.

ದಶಕದ ಹಿಂದೆ ಶ್ರೀಲಂಕಾದ ಮೃಗಾ ಲಯದಲ್ಲಿ ಆನೆಯೊಂದು ಅವಳಿ ಮರಿ ಗಳಿಗೆ ಜನ್ಮ ನೀಡಿದ್ದು ಸುದ್ದಿಯಾಗಿತ್ತು. ಕೆಲ ವರ್ಷಗಳ ಹಿಂದೆ ತಮಿಳುನಾಡಿನ ದಿಂಬA ರಸ್ತೆಯಲ್ಲಿ ಹೆಣ್ಣಾನೆಯೊಂದು ಒಂದೂವರೆ ವರ್ಷದ ಎರಡು ಮರಿ ಗಳೊಂದಿಗೆ ನಿಂತಿದ್ದನ್ನು ನೋಡಿದ್ದಾಗಿ ಕೆಲವರು ಪ್ರತಿಪಾದಿಸಿದ್ದರು. ಇದಾವುದೂ ಖಚಿತವಾಗಿರಲಿಲ್ಲ. ಆದರೆ, ಇದೀಗ ಬಂಡೀ ಪುರದಲ್ಲಿ ಕಾಡಾನೆ ಅವಳಿ ಮರಿಗಳಿಗೆ ಜನ್ಮ ನೀಡಿರುವುದು ವಿಶೇಷ ಮತ್ತು ಅಪ ರೂಪದ್ದಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಳೆ
ಕ್ಯಾಂಪಸ್‌ಗೆ ಹೊಂದಿಕೊAಡAತಿರುವ ರಿಸೆಕ್ಷನ್ ರೋಡ್‌ನಲ್ಲಿ ಮೈಸೂರು-ಊಟಿ ಮುಖ್ಯ ರಸ್ತೆಗೆ ಕೂಗಳತೆಯ ಅಂತರದಲ್ಲೇ ಎರಡು ಮರಿಗಳಿಗೆ ಹೆಣ್ಣಾನೆ ಜನ್ಮ ನೀಡಿದೆ. ಬಂಡೆಗಳ ನಡುವೆೆ ಎರಡು ದಿನಗಳ ಹಿಂದೆ ಮರಿಗಳಿಗೆ ಜನ್ಮ ನೀಡಿದೆ. ಸಫಾರಿಗೆಂದು ಬಂದ ಪ್ರವಾಸಿಗರಿಗೆ ಅವಳಿ ಮರಿಗಳ ಅಪರೂಪದ ದರ್ಶನವಾಗಿದೆ.

ಮರಿಗಳನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ: ರಿಸೆಷ್ಪನ್ ರಸ್ತೆಯ ಬಂಡೆಗಳ ನಡುವೆ ಮರಿಗೆ ಜನ್ಮ ನೀಡಿದ್ದರಿಂದ ಮರಿಗಳೆರಡು ಬಂಡೆಯೊAದರ ಮೇಲಿದ್ದ ಸಣ್ಣ ಹಳ್ಳಕ್ಕೆ ಸಿಲುಕಿದ್ದವು. ಆನೆ ಘೀಳಿಡುತ್ತಿದ್ದನ್ನು ಗಮನಿಸಿದ ಸಫಾರಿ ವಾಹನಗಳ ಚಾಲಕರು ಹಾಗೂ ಕ್ಯಾಂಪಸ್‌ನಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಡಾ.ರಮೇಶ್‌ಕುಮಾರ್ ಸೂಚನೆ ಮೇರೆಗೆ ಎಸಿಎಫ್ ನವೀನ್, ಆರ್‌ಎಫ್‌ಓ ಶಶಿಧರ್ ಹಾಗೂ ಇನ್ನಿತರ ಸಿಬ್ಬಂದಿಗಳು ಜೀಪ್‌ನಲ್ಲಿ ತೆರಳಿ ತಾಯಿ ಆನೆಯನ್ನು ಜೀಪ್ ಶಬ್ದದಿಂದ ಸ್ವಲ್ಪ ದೂರ ಓಡಿಸಿದ್ದಾರೆ. ಜೀಪ್ ಹತ್ತಿರಕ್ಕೆ ಬಂದದ್ದನ್ನು ಕಂಡು ಹೆದರಿದ ತಾಯಿ ಆನೆ ಬಂಡೆ ಏರಿದೆ. ಈ ವೇಳೆ ಅರಣ್ಯ ಸಿಬ್ಬಂದಿ ಪ್ರಾಣದ ಹಂಗು ತೊರೆದು ಗುಂಡಿಯಲ್ಲಿ ಸಿಲುಕಿದ್ದ ಅವಳಿ ಮರಿಗಳನ್ನು ಮೇಲೆತ್ತಿದ್ದಾರೆ. ಇದನ್ನು ಬಂಡೆ ಮೇಲೆ ನಿಂತು ನೋಡುತ್ತಿದ್ದ ತಾಯಿ ಆನೆ ಸಿಬ್ಬಂದಿಗಳು ದೂರ ಹೋದ ನಂತರ ಕರುಳ ಕಡಿಯನ್ನು ಮುದ್ದಾಡಿ ಹಾಲು ಕುಡಿಸಿದೆ.

ಸಮಯ ಪ್ರಜ್ಞೆ: ಗುಂಡಿಯಲ್ಲಿ ಆನೆ ಮರಿಗಳಿರುವುದನ್ನು ಆರಂಭದಲ್ಲೇ ಗಮನಿಸಿ, ಮೇಲೆತ್ತಿದ್ದರಿಂದ ಅವಳಿ ಮರಿಗಳಿಗೆ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ರಕ್ಷಣಾ ಕಾರ್ಯಾಚರಣೆ ತಡವಾಗಿದ್ದರೆ ಹಸಿವಿನಿಂದ ನಿತ್ರಾಣವಾಗುತ್ತಿದ್ದವು. ಅಪರೂಪದಲ್ಲಿ ಅಪರೂಪ ಎನಿಸಿರುವ ಈ ಪ್ರಕರಣದ ಮಹತ್ವ ಅರಿತ ಸಿಬ್ಬಂದಿ ತುರ್ತಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಅವಳಿ ಮರಿಗಳ ರಕ್ಷಣೆ ಸಾಧ್ಯವಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕೃಪಾಕಟಾಕ್ಷದಿಂದ ಗುಂಡಿಯಿAದ ಮೇಲೆದ್ದಿರುವ ಮರಿಗಳು ಇದೀಗ ತಾಯಿಯೊಂದಿಗೆ ಲವಲವಿಕೆಯಿಂದ ಕೂಡಿದೆ. ಜನ್ಮ ನೀಡಿದ ಸ್ಥಳದ ಸುತ್ತಮುತ್ತ ಲಿನ ಪ್ರದೇಶದಲ್ಲೇ ತಾಯಿ ಆನೆ ಅವಳಿ ಮರಿಗಳೊಂದಿಗೆ ಓಡಾಡುತ್ತಿದೆ. ಸದರಿ ಜಾಗ ಸುರಕ್ಷಿತವೆಂದು ಆನೆ ಆಯ್ಕೆ ಮಾಡಿಕೊಂಡಿದೆ. ಕಾಡೊಳಗೆ ತೆರಳಿದರೆ ಮರಿಗಳಿಗೆ ಹುಲಿಗಳಿಂದ ಆತಂಕ ಎದುರಾಗಬಹುದೆಂಬ ಲೆಕ್ಕಾಚಾರದಿಂದ ಸಫಾರಿ ವಾಹನ ಓಡಾಡುವ ವಲಯದ ಆಸುಪಾಸಿನಲ್ಲೇ ಓಡಾಡುತ್ತಿರುವುದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

 

Translate »